'ಪ್ರೇಮಲೋಕ'ದಿಂದ ಬಂದ ದರ್ಶಿನಿ ಗೌಡ 'ಗಂಗೆ'ಯಾಗಿ ಕಿರುತೆರೆಗೆ ಎಂಟ್ರಿ: 'ಗಂಗೆ ಗೌರಿ' ಕಥೆಯೇನು?

By ಅನಿತಾ ಬನಾರಿ

ಪ್ರತಿ ಬಾರಿಯೂ ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ ಉದಯ ವಾಹಿನಿ. ಹೌದು, ಇದೀಗ ಮಗದೊಂದು ಹೊಸ ಧಾರಾವಾಹಿ 'ಗಂಗೆ ಗೌರಿ'ಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ ಉದಯ ವಾಹಿನಿ. ಅಕ್ಕ ತಂಗಿಯರ ನಡುವಿನ ಬಾಂಧವ್ಯದ ಕುರಿತಾಗಿರುವ ಈ ಧಾರಾವಾಹಿಯಲ್ಲಿ ನಾಯಕಿ ಗಂಗೆಯಾಗಿ ದರ್ಶಿನಿ ಗೌಡ ನಟಿಸುತ್ತಿದ್ದಾರೆ.

ಅಂದ ಹಾಗೇ ದರ್ಶಿನಿ ಗೌಡ 'ಪ್ರೇಮಲೋಕ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ಮನಸ್ವಿನಿ ಆಗಿ ನಟಿಸುವ ಮೂಲಕ ಈಕೆ ಕಿರುತೆರೆಗೆ ಪರಿಚಿತರಾದರು. ಮೊದಲ ಧಾರಾವಾಹಿಯಲ್ಲಿಯೇ ಅದ್ಭುತವಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದ ದರ್ಶಿನಿ ಗೌಡ ತದ ನಂತರ ಹಾರಿದ್ದು ಪರಭಾಷೆಯ ಕಿರುತೆರೆಗೆ.

Premaloka serial actress Darshini Gowda acting as a Ganga in Gange Gowri

ತಮಿಳಿನ 'ಸಿಲ್ ಒರ್ ಕಾದಲ್'ಎನ್ನುವ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟ ದರ್ಶಿನಿ ಅಲ್ಲೂ ಸೈ ಎನಿಸಿಕೊಂಡರು. ಅಂದ ಹಾಗೇ ಅದು ಕನ್ನಡದ ಜನಪ್ರಿಯ ಧಾರಾವಾಹಿ 'ಮಂಗಳ ಗೌರಿ ಮದುವೆ'ಯ ರಿಮೇಕ್ ಕೂಡ ಹೌದು.

ತದ ನಂತರ ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಪಂಚಮಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶವನ್ನು ದರ್ಶಿನಿ ಗೌಡ ಪಡೆದರು. 'ನಾಗಪಂಚಮಿ' ಧಾರಾವಾಹಿಯಲ್ಲಿ ನಾಯಕಿ ಪಂಚಮಿಯಾಗಿ ಮೋಡಿ ಮಾಡುತ್ತಿರುವ ದರ್ಶಿನಿ ಗೌಡ ಸಕತ್ ಖುಷಿಯಲ್ಲಿದ್ದಾರೆ. ತೆಲುಗಿನ 'ನಾಗಪಂಚಮಿ' ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದ್ದು, ಆ ಮೂಲಕ ಕನ್ನಡ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿದ್ದಾರೆ ದರ್ಶಿನಿ.

ಇದೀಗ 'ಗಂಗೆ ಗೌರಿ' ಧಾರಾವಾಹಿಯಲ್ಲಿ ಗೌರಿಯ ತಂಗಿ ಗಂಗೆಯಾಗಿ ದರ್ಶಿನಿ ಗೌಡ ಕಾಣಿಸಿಕೊಂಡಿದ್ದು ಖಡಕ್ ಹುಡುಗಿಯಾಗಿ ತೆರೆಯ ಮೇಲೆ ಮೋಡಿ ಮಾಡಲಿದ್ದಾರೆ. ಮೃದು ಸ್ವಭಾವದ ಅಕ್ಕನ ಜೊತೆಗೆ ಗಂಗೆಗೆ ತುಂಬಾನೇ ಅನ್ಯೋನ್ಯತೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರದಷ್ಟು ಬಾಂಧವ್ಯ. ಹೀಗಿರುವಾಗ ಈ ಅಕ್ಕ ತಂಗಿಯರ ನಡುವೆ ಹುಡುಗನೊಬ್ಬನ ಆಗಮನವಾಗುತ್ತದೆ. ಇದರಿಂದ ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ? ತಂಗಿಗಾಗಿ ಅಕ್ಕ ಗೌರಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ? ಅಥವಾ ಅಕ್ಕ ಮತ್ತು ಪ್ರೀತಿ ಇವೆರಡರಲ್ಲಿ ಗಂಗೆ ಆಯ್ಕೆ ಮಾಡಿಕೊಳ್ಳುವುದಾದರೂ ಯಾವುದನ್ನು ಎಂಬೆಲ್ಲಾ ಕುತೂಹಲಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

Premaloka serial actress Darshini Gowda acting as a Ganga in Gange Gowri

ಒಟ್ಟಿನಲ್ಲಿ 'ಪ್ರೇಮಲೋಕ' ಧಾರಾವಾಹಿಯ ನಂತರ ಇದೀಗ ಮತ್ತೊಮ್ಮೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಿರುತೆರೆಗೆ ದರ್ಶಿನಿ ಗೌಡ ಲಗ್ಗೆ ಇಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡಿರುವ ದರ್ಶಿನಿ ಗೌಡ ನಟಿಯಾಗಿ ಭಡ್ತಿ ಪಡೆದರು. ಇದೀಗ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ-ಮನ ಸೆಳೆದಿರುವ ದರ್ಶಿನಿ ಗೌಡ ಮುಂದೊಂದು ದಿನ ಹಿರಿತೆರೆಗೆ ಹಾರಿದರೆ ಆಶ್ಚರ್ಯವೇನಿಲ್ಲ.

More from Filmibeat

English summary
Premaloka serial actress Darshini Gowda new serial Gange Gowri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X