Weekend with Ramesh: ಸಮಾಧಿಗಳಿಗೆ ಪ್ರೇಮ್ ಕ್ಷಮೆ ಕೇಳಿದ್ದೇಕೆ?ಆಕ್ಸಿಡೆಂಟ್‌ನಿಂದ ಪಾರಾಗಿದ್ದು ಹೇಗೆ?

By ಶೃತಿ ಹರೀಶ್ ಗೌಡ

ಲವ್ಲಿ ಸ್ಟಾರ್ ಪ್ರೇಮ್ 25 ಸಿನಿಮಾಗಳನ್ನು ಪೂರೈಸಿದ್ದಾರೆ. 'ಪ್ರೇಮಂ ಪೂಜ್ಯಂ' ಚಿತ್ರತಂಡ ಕೂಡ 'ವೀಕೆಂಡ್ ವಿತ್ ರಮೇಶ್' ಶೋಗೆ ಬಂದು ಪ್ರೇಮ್‌ ಜೊತೆಗಿನ ಒಡನಾಟ ಹಂಚಿಕೊಂಡರು. ಚಿತ್ರದ ಹೀರೋಯಿನ್ ಯಾವ ರೀತಿ ಪ್ರೇಮ್ ತಮಗೆ ಸಪೋರ್ಟ್ ಮಾಡಿದರು ಎನ್ನುವ ಬಗ್ಗೆ ಹೇಳಿದ್ದಾರೆ. ಆ ಚಿತ್ರ ಯಾವ ರೀತಿ ಸಿಕ್ಕಿತು ಎಂದು ಇದೇ ವೇಳೆ ಪ್ರೇಮ್ ವಿವರಿಸಿದರು.

ಇನ್ನು ಪ್ರೇಮ್ ಪೂಜ್ಯಂ ಚಲನಚಿತ್ರದ ವೇಳೆ ಆದಂತಹ ಕೆಲವೊಂದು ಘಟನೆಗಳ ಬಗ್ಗೆ ಮಾಸ್ಟರ್ ಆನಂದ್ ವೇದಿಕೆಯಲ್ಲಿ ಮಾತನಾಡಿದರು. ಅಮಿತಾ ಬಚ್ಚನ್ ಅಭಿನಯದ 'ಶಮಿತಾಬ್' ಸಿನಿಮಾ ಚಿತ್ರೀಕರಣವಾದ ಸ್ಥಳದಲ್ಲಿ ಈ ಸಿನಿಮಾ ಶೂಟಿಂಗ್ ಕೂಡ ನಡೆಯಿತು. ಅಲ್ಲಿ ಹಲವಾರು ಗೋರಿಗಳು ಇದ್ದವು. ಮೊದಲ ದಿನ ಚಿತ್ರೀಕರಣ ಮಾಡಲು ಸ್ವಲ್ಪ ಭಯವಾಯಿತು. ನಂತರ ಮಾಮೂಲಾಗಿ ಚಿತ್ರೀಕರಣ ಸಾಗಿತು ಎಂದು ಆನಂದ್ ತಿಳಿಸಿದ್ದಾರೆ.

Premam Poojyam Team Shares The Shooting Experience With Prem in Weekend with Ramesh show

ಗೋರಿಗಳಿಗೆ ಕ್ಷಮೆ ಯಾಚಿಸಿದ ಪ್ರೇಮ್

ನೆನಪಿರಲಿ ಪ್ರೇಮ್ ಅವರು ಚಿತ್ರೀಕರಣ ನಡೆದಂತಹ ಸ್ಥಳದಲ್ಲಿ ಇದಂತಹ ಗೋರಿಗಳಿಗೂ ಸಹ ಕ್ಷಮೆಯನ್ನು ಯಾಚಿಸಿದ್ದಾರೆ. ನೀವು ಇಷ್ಟು ದಿನ ಆತ್ಮಗಳಾಗಿ ಇಲ್ಲಿ ಇದ್ದೀರಿ. ಚಲನಚಿತ್ರದ ಚಿತ್ರೀಕರಣದ ವೇಳೆ ನಿಮಗೆ ತೊಂದರೆ ಕೊಟ್ಟಿದ್ದರೆ, ನಾನು ಯಾವುದಾದರೂ ಒಂದು ತಪ್ಪನ್ನು ಮಾಡಿದರೆ ದಯವಿಟ್ಟು ನೀವೆಲ್ಲರೂ ಕ್ಷಮಿಸಬೇಕು ಎಂದು ಕ್ಷಮೆಯನ್ನು ಯಾಚಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹೂವಿನ ಬೊಕ್ಕೆ, ಕೇಕ್,ವೈನ್ ಬಾಟೆಲ್ ಇಟ್ಟು ಕ್ಷಮೆಯಾಚಿಸಿದ ಪ್ರಸಂಗದ ಬಗ್ಗೆ ಮಾಸ್ಟರ್ ಆನಂದ್ ಹೇಳಿದರು. ಇಂತಹ ಮನಸ್ಥಿತಿ ಎಷ್ಟು ಜನಕ್ಕೆ ಬರುತ್ತದೆ. ನಾವ್ಯಾರೂ ಸಹ ಕ್ಷಮೆ ಯಾಚಿಸಬೇಕು ಎಂದು ಊಹಿಸಿರಲಿಲ್ಲ. ಅದನ್ನು ಪ್ರೇಮ್ ಮಾಡಿದರು ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ.

Premam Poojyam Team Shares The Shooting Experience With Prem in Weekend with Ramesh show

ಆಕ್ಸಿಡೆಂಟ್‌ನಿಂದ ಪಾರಾದ ಪ್ರೇಮ್

ನಟ ಪ್ರೇಮ್ ತಮ್ಮ ಹೆಂಡತಿಯ ಜೊತೆಯಲ್ಲಿ ನಂಜನಗೂಡಿಗೆ ಹೋಗಿ ಬರುವ ವೇಳೆ ಆಕ್ಸಿಡೆಂಟ್‌ನಿಂದ ಪಾರಾಗಿದ್ದಾರೆ. ನಂಜನಗೂಡಿನ ನಂಜುಂಡೇಶ್ವರನಿಗೆ ಪ್ರೇಮ್‌ ಹರಕೆ ಮಾಡಿಕೊಂಡಿದ್ದರು. ಹರಕೆ ತೀರಿಸಲು ಹೋದಾಗ ದೇವರ ದರ್ಶನವಾಗಲಿಲ್ಲ, ಇದೇ ವೇಳೆ ಬೆಂಗಳೂರಿಗೆ ಬರುವಾಗ ರಾಮನಗರದ ಬಳಿ ಆಕ್ಸಿಡೆಂಟ್ ಆಗಿದೆ. ಕೂದಲೆಳೆಯ ಅಂತರದಲ್ಲಿ ಪ್ರೇಮ್ ಕುಟುಂಬ ಪಾರಾಗಿದೆ.

ಡ್ರೈವರ್ ಕಾರು ಚಲಾಯಿಸುವ ಸಮಯದಲ್ಲಿ ಸ್ವಲ್ಪ ತೂಕಡಿಸಿದ್ದಾರೆ. ಈ ವೇಳೆ ಪ್ರೇಮ್ ಅವರಿಗೆ ಎಚ್ಚರವಾಗಿದ್ದು ಡ್ರೈವರ್ ಬಳಿ ಮಾತನಾಡಿದ್ದಾರೆ. ಎಚ್ಚೆತ್ತುಕೊಂಡ ಡ್ರೈವರ್ ಪಕ್ಕಕ್ಕೆ ಕಾರನ್ನು ಎಳೆದುಕೊಂಡು ಹೋಗಿದ್ದು, ನಿಯಂತ್ರಣ ತಪ್ಪಿ ಹೈವೇಯಲ್ಲಿ ಹಾಕಿದ್ದ ತಂತಿಬೇಲಿಯನ್ನು ಉಜ್ಜಿಕೊಂಡು ಕಾರು ಮುಂದೆ ಹೋಗಿ ನಿಂತುಕೊಂಡಿತಂತೆ. ಈ ಘಟನೆಯನ್ನು ಪ್ರೇಮ್ ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಮಾಸ್ಟರ್ ಆನಂದ್, ಪ್ರೇಮ್ ಮಾಡಿದ ಯಾವುದೋ ಒಂದು ಸಹಾಯ ಅಥವಾ ಯಾವುದೋ ಒಂದು ಪ್ರಾರ್ಥನೆ ಅವರ ತಲೆಯನ್ನು ಕಾಯ್ದಿದೆ . ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ವಿಶೇಷಚೇತನರ ಬಗ್ಗೆ ಕಾಳಜಿ

ನಟ ಪ್ರೇಮ್ ಅವರು ಹಲವಾರು ಸಂಘ-ಸಂಸ್ಥೆಗಳಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡಿದ್ದಾರೆ. ಜೊತೆಗೆ ಅವರ ಅಭಿಮಾನಿಗಳಿಗೂ ಸಹ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮಾತೃಶ್ರೀ ಎಂಬ ವಿಶೇಷ ಚೇತನರ ಹಾರೈಕೆಯ ಕೇಂದ್ರಕ್ಕೆ ಪ್ರೇಮ್ ಕುಟುಂಬ ಯಾವಾಗಲೂ ಭೇಟಿಯನ್ನ ನೀಡಿ ಮಕ್ಕಳ ಸಂತೋಷದಲ್ಲಿ ಪಾಲ್ಗೊಳ್ಳುತ್ತಾರೆ.

ಲವ್ಲಿ ಸ್ಟಾರ್ ಪ್ರೇಮ್ ಮೂವರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಅವರ ಲಾಲನೆ ಪಾಲನೆಯನ್ನು ಮಾಡುತ್ತಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಪೋಷಣೆಯ ಜವಾಬ್ದಾರಿಯನ್ನ ಹೊತ್ತುಕೊಂಡಿದೆ. ನನ್ನ ಅಭಿಮಾನಿಗಳುವಿಶೇಷ ಚೇತನ ಹುಡುಗಿ ಮದುವೆಯಾಗಲು ನಿರ್ಧರಿಸಿದ್ದ ಪ್ರೇಮ್.. ಆ ಘಟನೆ ನೆನೆದು ಕಣ್ಣೀರು ಹಾಕಿದ್ದೇಕೆ?
ಹುಟ್ಟು ಹಬ್ಬವಿದ್ದರೆ ನನ್ನ ಬಳಿ ಬರುವುದು ಬೇಡ ಇಂತಹ ಮಕ್ಕಳಿಗೆ ಸಹಾಯ ಮಾಡಿದರೆ ಸಾಕು ಎಂದು ಪ್ರೇಮ್ ಅವರು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

More from Filmibeat

English summary
Premam Poojyam Team Shares The Shooting Experience With Prem in Weekend with Ramesh show. Prem Also shared Nanjanagud accident incident. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X