For Quick Alerts
  ALLOW NOTIFICATIONS  
  For Daily Alerts

  ಇಂದಿನಿಂದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಲಿಟ್ಲ್ ಮಾಸ್ಟರ್' ಆರಂಭ

  By Bharath Kumar
  |
  ಮತ್ತೆ ಬಂತು ಡಾನ್ಸ್ ಕರ್ನಾಟಕ ಡಾನ್ಸ್ | Filmibeat Kannada

  ಕನ್ನಡ ಕಿರುತೆರೆಯಲ್ಲಿ ವಿಭಿನ್ನ ರಿಯಾಲಿಟಿ ಶೋಗಳನ್ನು ಖ್ಯಾತಿ ಗಳಿಸಿಕೊಂಡಿರುವ ಜೀ ಕನ್ನಡ ಈ ವಾರದಿಂದ 'ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್' ಕಾರ್ಯಕ್ರಮವನ್ನು ನಿಮ್ಮ ಮನೆಗೆ ತರುತ್ತಿದೆ. 'ಡ್ರಾಮಾ ಜೂನಿಯರ್ಸ್', 'ಸರಿಗಮಪ ಲಿಟಲ್ ಚಾಂಪ್ಸ್' ಹಾಗೂ ಜೀ ಧಾರಾವಾಹಿಯ ಮಕ್ಕಳು ಡಾನ್ಸ್ ವೇದಿಕೆಯಲ್ಲಿ ಭರ್ಜರಿ ನೃತ್ಯದೊಂದಿಗೆ ನಿಮ್ಮೆಲ್ಲರನ್ನು ರಂಜಿಸಲಿದ್ದಾರೆ.

  ಬೇರೆ ಬೇರೆ ಕಾರ್ಯಕ್ರಮದ ಮಕ್ಕಳನ್ನು ಒಂದೇ ಡಾನ್ಸ್ ವೇದಿಕೆಗೆ ತಂದಿರುವುದು ಲಿಟಲ್ ಮಾಸ್ಟರ್ಸ್ ನ ವಿಶೇಷ. ಈ ಭಾರಿಯೂ ಕೂಡ ಲಿಟಲ್ ಮಾಸ್ಟರ್ಸ್ ನ ಜಡ್ಜ್ ಗಳಾಗಿ ಕನ್ನಡದ ಹೆಸರಾಂತ ನಾಯಕಿ ಕ್ರೇಜಿ ಕ್ವೀನ್ ರಕ್ಷಿತಾ, ಹಾಗೂ ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ತಂದ ಯಶಸ್ವಿ ಸಂಗೀತ ನಿರ್ದೇಶಕ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗೂ ಅವರ ಜೊತೆಗೆ ಕರ್ನಾಟಕದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.

  ಇನ್ನೂ ಲಿಟಲ್ ಚಾಂಪ್ಸ್ ಗಳ ತರ್ಲೆ ತುಂಟಾಟಗಳಿಗೆ, ಮುದ್ದು ಮಾತುಗಳಿಗೆ ಉತ್ತರಿಸುತ್ತಾ ಕಾರ್ಯಕ್ರಮವನ್ನು ಲವಲವಿಕೆಯಿಂದ ಮುನ್ನಡೆಸುತ್ತಿರುವುದು ಕನ್ನಡಿಗರ ನೆಚ್ಚಿನ ನಿರೂಪಕಿ ಅನುಶ್ರೀ ಇಲ್ಲಿಯೂ ಮುಂದುವರೆಯಲಿದ್ದಾರೆ.

  ಈ ಬಾರಿಯ ಲಿಟಲ್ ಚಾಂಪ್ಸ್ ನ ವಿಶೇಷತೆ ಹೊಸ ಮಕ್ಕಳು. ಡ್ರಾಮಾ ಜೂನಿಯರ್ಸ್ ನಲ್ಲಿ ತಮ್ಮ ಅಭಿನಯದಿಂದ ಕನ್ನಡಿಗರ ಮನ ಗೆದ್ದಿದ್ದ ಪುಟಾಣಿಗಳು, ಸರಿಗಮಪ ಲಿಟಲ್ ಚಾಂಪ್ಸ್ ನ ಮರಿ ಕೋಗಿಲೆಗಳು, ಹಾಗೂ ಜೀ ಕನ್ನಡದ ಧಾರಾವಾಹಿಯ ಮಕ್ಕಳು ಲಿಟಲ್ ಚಾಂಪ್ಸ್ ನಲ್ಲಿ ಡಾನ್ಸ್ ಪೈಪೋಟಿ ನಡೆಸಲಿದ್ದಾರೆ.

  ಯಾವ ಮಕ್ಕಳು ಬರಲಿದ್ದಾರೆ, ಯಾವ ಮಕ್ಕಳು ಯಾರ ಜೋಡಿಯಾಗಿ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬುದೇ ಕುತೂಹಲ. ಲಿಟಲ್ ಮಾಸ್ಟರ್ಸ್ ಗ್ರಾಂಡ್ ಪ್ರೀಮಿಯರ್ ನಲ್ಲಿ ಒಟ್ಟು ಹನ್ನೆರಡು ಜೋಡಿಗಳು ಜೊತೆಗೆ ಒಂದು ಕ್ಯೂಟ್ ಪೇರ್ ಅದ್ಧೂರಿ ಡಾನ್ಸ್ ಪರ್ಫಾರ್ಮೆನ್ಸ್ ಗಳೊಂದಿಗೆ ಎಂಟ್ರಿ ಕೊಟ್ಟಿದ್ದಲ್ಲದೆ ಜಡ್ಜ್ ಗಳ ಮನ ಗೆದ್ದರು.

  ಅನೂಪ್ ರಮಣನ ಜೇಮ್ಸ್ ಬಾಂಡ್ ಎಂಟ್ರಿ ಗೆ ಜಡ್ಜ್ ಗಳು ನಿಬ್ಬೆರಗಾದರು. ಸರಿಗಮಪದ ಕೃಷ್ಣ ಸುಂದರಿ ನೇಹಾಳ ಮುದ್ದಾದ ಧಿರಿಸಿನ ಜೊತೆ ಮಾಡಿದ ಕ್ಯೂಟ್ ಡಾನ್ಸ್ ಗೆ ಮನಸೋತು ರಕ್ಷಿತಾ ಸೇರಿದಂತೆ ಮೂರು ತೀರ್ಪುಗಾರರು ಹಾಡಿ ಹೊಗಳಿದರು. ಇನ್ನೂ ಡ್ರಾಮಾ ಸೀಸನ್ ಎರಡರ ಸಂಡೂರ್ ಲಡ್ಡು ಹರ್ಷ ಮಾಡಿದ ಡಾನ್ಸ್ ಗಂತೂ ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ವೇದಿಕೆ ಮೇಲೆ ಬಂದು ಮುದ್ದಾಡಿ, ಅವನ ಜೊತೆಗೆ ಕುಣಿದು, ಮೆಚ್ಚಿ ಹೊಗಳಿದರು.

  ಮಕ್ಕಳು ಗ್ರಾಂಡ್ ಪ್ರೀಮಿಯರ್ ನಲ್ಲಿ ಒಂದಕ್ಕಿಂತ ಒಂದು ಗ್ರಾಂಡ್ ಪರ್ಫಾರ್ಮೆನ್ಸ್ ನೀಡಿ ಈ ಬಾರಿಯ ಲಿಟಲ್ ಚಾಂಪ್ಸ್ ಖಂಡಿತ ಕನ್ನಡಿಗರಿಗೆ ಭರ್ಜರಿ ಮನರಂಜನೆ ನೀಡುವ ಭರವಸೆ ಮೂಡಿಸಿದೆ. ಇದರ ಜೊತೆಗೆ ಈ ಬಾರಿಯ ಲಿಟಲ್ ಮಾಸ್ಟರ್ಸ್ ಗ್ರಾಂಡ್ ಪ್ರೀಮಿಯರ್ ಗೆ ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ ನ ಸ್ಫರ್ಧಿಗಳು ಬಂದು ತಮ್ಮ ಅದ್ಭುತ ಡಾನ್ಸ್ ಮೂಲಕ ಲಿಟಲ್ ಚಾಂಪ್ಸ್ ಗಳಿಗೆ

  ಹಾರೈಸಿದರು.

  ಕಳೆದ ಸೀಸನ್ನಿನ ಸ್ಪರ್ಧಿಗಳ ನೃತ್ಯ ಹಳೆ ನೆನಪುಗಳನ್ನು ಮರಳಿಸಿದ್ದಲ್ಲದೆ, ಗೌಡರ ತರಲೆ ಎಂದಿನಂತೆ ಎಲ್ಲರನ್ನೂ ರಂಜಿಸಿತು. ಒಟ್ಟಾರೆ ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್ ಗ್ರಾಂಡ್ ಪ್ರೀಮಿಯರ್ ಅದ್ದೂರಿ ಓಪನಿಂಗ್ ಪಡೆದಿದ್ದು, ಎರಡು ವಾರಗಳ ಕಾಲ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮುದ್ದು ಮಕ್ಕಳ ಡಾನ್ಸ್ ಮನರಂಜನೆಗಾಗಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್ ನೋಡಲು ಮರೆಯದಿರಿ.

  English summary
  Zee Kannada brings back Dance Karnataka Dance – Season 3 with Little Masters. The Grand Premiere of Dance Karnataka Dance Little Masters is on 2 nd June, 2018, and will be telecasted every weekend from 7:30 PM to 9:00 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X