ಅಂದು ಕೇವಲ 5000 ಸಂಭಾವನೆ ಪಡೆಯುತ್ತಿದ್ದ ಈ ನಾಯಕಿ ಇಂದು ಕೋಟ್ಯಂತರ ಆಸ್ತಿಯ ಒಡತಿ..!
ಬದುಕಿನಲ್ಲಿ ಸ್ವಪ್ರಯತ್ನ ಮುಖ್ಯವೋ, ಅದೃಷ್ಟ ಮುಖ್ಯವೋ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದ ಈ ಚರ್ಚೆ ನಡೆಯುತ್ತಾನೇ ಇದೆ. ಆದರೆ.. ಈ ಎರಡರಲ್ಲಿ
ಯಾವುದರ ಪಾತ್ರ ಹಿರಿದು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಕೆಲವರು ಬದುಕಿನಲ್ಲಿ ಅದೃಷ್ಟವೇ ಮುಖ್ಯ ಎಂದರೆ, ಇನ್ನೂ ಕೆಲವರು ಸ್ವಪ್ರಯತ್ನವೇ ಮುಖ್ಯ ಎಂಬ
ವಾದವನ್ನೂ ಮಾಡುತ್ತಾರೆ. ಬಾಲಿವುಡ್‌ನ ನಾಯಕಿ ಶ್ವೇತಾ ತಿವಾರಿ ಈ ಎರಡು ಗುಂಪಿನಲ್ಲಿ ಯಾವ ಕಡೆ ಸೇರ್ತಾರೆ ಎನ್ನುವುದು ಗೊತ್ತಿಲ್ಲವಾದರೂ, ಇವರ ಬದುಕು ಬದಲಿಸಿದ್ದು ಮಾತ್ರ 'ಕಸೌತಿ ಜಿಂದಗಿ ಕೇ' ಎಂಬ ಧಾರಾವಾಹಿ ಅನ್ನುವುದು ಮಾತ್ರ ಸತ್ಯ.
ಹೌದು, 'ಕಸೌತಿ ಜಿಂದಗಿ ಕೇ' ... ಒಂದಾನೊಂದು ಕಾಲದಲ್ಲಿ ಜನ ಮನ ಗೆದ್ದ ಹಿಂದಿ ಧಾರಾವಾಹಿ. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಸೀರಿಯಲ್‌ನಲ್ಲಿ, ಪ್ರೇರಣಾ ಪಾತ್ರವನ್ನು ಶ್ವೇತಾ ತಿವಾರಿ ನಿರ್ವಹಿಸಿದ್ದರು . ಇನ್ನೂ .. ಸತತವಾಗಿ 07 ವರ್ಷ ಪ್ರಸಾರ ಕಂಡು ಆ ಕಾಲಕ್ಕೆ ದಾಖಲೆಯನ್ನು ಬರೆಯುವುದಲ್ಲದೇ ಟಿಆರ್‌ಪಿ ರೇಸ್‌ನಲ್ಲಿ ಕೂಡನಂಬರ್ ಓನ್ ಸ್ಥಾನದಲ್ಲಿದ್ದ ಧಾರಾವಾಹಿ ಇದು.

ಇಂಥಾ ಧಾರಾವಾಹಿಯಲ್ಲಿ.. ಪ್ರಮುಖ ನಾಯಕಿ ಪಾತ್ರವನ್ನು ನಿರ್ವಹಿಸಿದ ಶ್ವೇತಾ ತಿವಾರಿಗೆ, ಈ ಧಾರಾವಾಹಿಯ ನಿರ್ಮಾಪಕಿ ಏಕ್ತಾ ಕಪೂರ್ ಕೈ ತುಂಬಾ ಸಂಭಾವನೆಯನ್ನು ಕೊಟ್ಟಿರಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ತಪ್ಪು. ಯಾಕೆಂದರೆ.. ವರ್ಷಾನು ವರ್ಷದ ನಂತರ, 'ಕಸೌತಿ ಜಿಂದಗಿ ಕೇ' ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದಕ್ಕೆ ಸಿಕ್ಕ ಸಂಭಾವನೆ ಬಗ್ಗೆ ಶ್ವೇತಾ ತಿವಾರಿ ಮಾತನಾಡಿದ್ದಾರೆ. 2,500 ರಿಂದ 5000 ರೂ. ವರೆಗೂ ಅಷ್ಟೇ ಸಂಭಾವನೆ ಇತ್ತು ಎಂದಿದ್ದಾರೆ.
ಹೌದು, 'ಕಸೌತಿ ಜಿಂದಗಿ ಕೇ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗ ನನಗೆ ಪ್ರತಿದಿನ 2,500 ರಿಂದ 5000 ರೂ. ವರೆಗೂ ಸಂಭಾವನೆ ನೀಡುತ್ತಿದ್ದರು ಎಂದಿರುವ ಶ್ವೇತಾ ತಿವಾರಿ, ಪ್ರತಿವರ್ಷ ಈ ಸಂಭಾವನೆಯಲ್ಲಿ ಏರಿಕೆಯನ್ನೂ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಇನ್ನೂ 'ಕಸೌತಿ ಜಿಂದಗಿ ಕೇ' ಧಾರಾವಾಹಿಯಿಂದ ನನಗೆ ದುಡ್ಡು ಸಿಗದೇ ಇದ್ದರೂ ಅಪಾರವಾದ ಜನಪ್ರಿಯತೆ ಸಿಕ್ಕಿತ್ತು ಎಂದಿರುವ ಶ್ವೇತಾ ಆ ಧಾರಾವಾಹಿಯಿಂದ ನಾನು ಹೊರ ಬಂದ ನಂತರ ಪ್ರತಿದಿನ 2.50 ಲಕ್ಷ ರೂಪಾಯಿವರೆಗೂ ಸಂಭಾವನೆ ಸಿಗಲು ಆರಂಭವಾಯಿತು ಎಂದು ಕೂಡ ಹೇಳಿದ್ಧಾರೆ. ನನ್ನ ಈ ಬೆಳವಣಿಗೆಯ ಬಗ್ಗೆ ನನಗೆ ಅಪಾರವಾದ ಹೆಮ್ಮೆ ಇದೆ ಎಂದು ಹೇಳಿದ್ಧಾರೆ.
ಇನ್ನೂ ಸಂಭಾವನೆ ಕಡಿಮೆ ಕೊಡ್ತಿದ್ದರೂ ಕೂಡ ಏಕ್ತಾ ಕಪೂರ್ ಅವರ ಮೇಲೆ ಅಪಾರವಾದ ಗೌರವ ಹೊಂದಿರುವ ಶ್ವೇತಾ, ಈಗೀಗ ಧಾರಾವಾಹಿಯ ನಾಯಕಿಯರಿಗೆ ಅನೇಕ ನಿರ್ಮಾಪಕರು 5000 ಕೂಡ ಕೊಡಲು ಹಿಂದೆ ಮುಂದೆ ನೋಡ್ತಾರೆ ಎಂದಿದ್ದಾರೆ. ಈ ಕಾರಣಕ್ಕೆ.. ಧಾರಾವಾಹಿಗಳಿಂದ ಅಂತರ ಕಾಪಾಡಿಕೊಂಡುರುವುದಾಗಿ ಕೂಡ ಶ್ವೇತಾ ತಿವಾರಿ ಹೇಳಿದ್ದಾರೆ. ಇಂಥಾ ಶ್ವೇತಾ ತಿವಾರಿ ಇವತ್ತು 81 ಕೋಟಿಯ ಒಡತಿ ಅನ್ನುವುದನ್ನು ಹಿಂದಿ ಮಾಧ್ಯಮದವರು ವರದಿ ಮಾಡಿದ್ದಾರೆ.

ಅಂದ್ಹಾಗೇ 43ರ ಹರೆಯದಲ್ಲಿಯೂ ಹದಿಹರೆಯದರ ಯುವತಿಯರನ್ನೂ ನಾಚಿಸುವಂತೆ ದೇಹಸಿರಿ ಹೊಂದಿರುವ ಶ್ವೇತಾ ತಿವಾರಿ, 1998ರಲ್ಲಿ ರಾಜಾ ಚೌಧರಿ ಜೊತೆಗೆ ಮದುವೆಯಾಗಿದ್ದರು. ಆದರೆ 2007ರಲ್ಲಿ ವಿಚ್ಛೇದನ ಪಡೆದುಕೊಂಡರು. ಆ ನಂತರ 2013ರಲ್ಲಿ ಅಭಿನವ್ ಕೊಹ್ಲಿ ಜೊತೆಗೆ ಮದುವೆಯಾದ ಶ್ವೇತಾ 2019ರಲ್ಲಿ ಇವರಿಂದ ಕೂಡ ದೂರವಾದರು.
ಅವರಿಗೂ ಡಿವೋರ್ಸ್ ನೀಡಿದ್ದಾರೆ ಶ್ವೇತಾ ತಿವಾರಿ. ಈ ನಟಿಗೆ ಪಲಕ್ ತಿವಾರಿ ಎಂಬ ಮಗಳಿದ್ದು, ತಾಯಿಯಂತೆ ಬಣ್ಣದ ಪ್ರಪಂಚಕ್ಕೆ ಅವರು ಧುಮುಕಿದ್ದಾರೆ. ಬಾಲಿವುಡ್‌ನಲ್ಲಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











