'ಭೀಮ' ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚುತ್ತಿರೋ ಈ ನಟಿ ಯಾರು ಗೊತ್ತೇ?

By ಅನಿತಾ ಬನಾರಿ

ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ 'ಭೀಮ' ಸಿನಿಮಾ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. 'ಭೀಮ' ಸಿನಿಮಾದಲ್ಲಿ ಮುಖ್ಯ ಪಾತ್ರದ ಹೊರತಾಗಿ ಪೋಲೀಸ್ ಇನ್ಸ್‌ಪೆಕ್ಟರ್ ಪಾತ್ರವೂ ಸಿನಿಪ್ರಿಯರನ್ನು ರಂಜಿಸುತ್ತಿದೆ. ಹೌದು, 'ಭೀಮ' ಸಿನಿಮಾದಲ್ಲಿ ಇನ್ಸ್‌ಪೆಕ್ಟರ್ ಗಿರಿಜಾ ಪಾತ್ರ ಸಾಕಷ್ಟು ಸದ್ದು ಮಾಡುತ್ತಿದೆ.

ಖಡಕ್ ಪೋಲಿಸ್ ಅಧಿಕಾರಿ ಗಿರಿಜಾ ಪಾತ್ರದಲ್ಲಿ ಅಭಿನಯಿಸಿ ಸಿನಿಮಾ ವೀಕ್ಷಕರ ಮನ ಸೆಳೆದಿರುವ ನಟಿಯ ಹೆಸರು ಪ್ರಿಯಾ ಶಠಮರ್ಷಣ. ಪ್ರಿಯಾ ಶಠಮರ್ಷಣ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು ಎನ್ನುವುದಕ್ಕಿಂತ ಪರಿಚಿತ ಮುಖ ಎಂದರೆ ತಪ್ಪಾಗಲಾರದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಧಾರಾವಾಹಿಯಲ್ಲಿ ವಿಲನ್ ಭಾರ್ಗವಿ ಆಲಿಯಾಸ್ ಡೆವಿಲ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದರು.

Priya acted in Lakshana serial is now charming as a police officer in Bheema Movie

ಬಾಲ್ಯದಿಂದಲೂ ಪ್ರಿಯಾ ಅವರಿಗೆ ಐಪಿಎಸ್ ಮಾಡಬೇಕು ಎಂಬ ಕನಸಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ‌. ಇದೀಗ ಭೀಮ ಸಿನಿಮಾದ ಮೂಲಕ ಆ ಕನಸು ನನಸು ಮಾಡಿಕೊಂಡಿದ್ದಾರೆ ನಟಿ ಪ್ರಿಯಾ ಶಠಮರ್ಷಣ. ಮಾತ್ರವಲ್ಲದೇ ಸಿನಿಮಾದಲ್ಲಿ ತಾವು ಧರಿಸಿದ್ದ ಯೂನಿಫಾರ್ಮ್ ಅನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆಯಂತೆ ಪ್ರಿಯಾ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿ ಬೆಳದಿರುವ ಪ್ರಿಯಾ ಅವರಿಗೆ ಸಿನಿಮಾ ಎಂದರೆ ಏನೋ ಒಂದು ವಿಶೇಷ ಒಲವಿತ್ತು. ರಂಗಭೂಮಿಯ ನಂಟು ಬೆಳೆಸಿಕೊಂಡಿರುವ ಆಕೆ ನಟನಾ ತಂಡದ ಭಾಗವಾಗಿದ್ದರು. ಬರೋಬ್ಬರಿ ಹದಿನೈದು ಹದಿನಾರು ವರ್ಷಗಳ ಕಾಲ ರಂಗಭೂಮಿಯಲ್ಲಿ ಈಕೆ ತೊಡಗಿಸಿಕೊಂಡಿದ್ದಾರೆ‌. ಈಕೆ ನಟಿಸಿದ 'ಚಾಮ ಚೆಲುವೆ' ನಾಟಕ ಹಾಗೂ 'ನಿನ್ನೆಯ ನಾಳೆ' ಏಕವ್ಯಕ್ತಿ ನಾಟಕ ಸಾಕಷ್ಟು ಸದ್ದು ಮಾಡಿತ್ತು.

Priya acted in Lakshana serial is now charming as a police officer in Bheema Movie

ರಂಗಭೂಮಿಯ ನಂತರ ಹಿರಿತೆರೆಗೆ ಕಾಲಿಟ್ಟ ಇವರು 'ರಾಮ ರಾಮ ರೇ' ಸಿಬಿಮಾದಲ್ಲಿ ನಟಿಸಿದರು. ಮುಂದೆ 'ಚೇಸ್', ಮಂಸೋರೆ ನಿರ್ದೇಶಿಸಿದ '19.20.21', 'ಸೈಡ್ ವಿಂಗ್', 'ಜೀನಿಯಸ್ ಮುತ್ತ' ಸಿನಿಮಾಗಳಲ್ಲಿ ಪ್ರಿಯಾ ಬಣ್ಣ ಹಚ್ಚಿದ್ದಾರೆ. ನಟನೆಯ ಹೊರತಾಗಿ ಕಾಸ್ಟ್ಯೂಮ್ ಡಿಸೈನರ್ ಆಗಿ ಈಕೆ ಕಾಣಿಸಿಕೊಂಡಿದ್ದಾರೆ. 'ಒಂದಲ್ಲಾ ಎರಡಲ್ಲಾ' ಸಿನಿಮಾಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಇವರೇ.

ಒಟ್ಟಿನಲ್ಲಿ ನಿಜ ಜೀವನದಲ್ಲಿ ಪೊಲೀಸ್‌ ಆಗಬೇಕು ಎಂಬ ಕನಸು ಕಂಡಿದ್ದ ನಟಿ ಆಸೆ ಈಡೇರಲಿಲ್ಲ. ಆದರೂ ನಟಿ ಪ್ರಿಯಾ ರೀಲ್ ಲೈಫ್‌ನಲ್ಲಿ ಪೊಲೀಸ್ ಆ ಪಾತ್ರಕ್ಕೆ ಜೀವ ತುಂಬಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ ಪ್ರಿಯಾ ಶಠಮರ್ಷಣ.

More from Filmibeat

English summary
Priya, who played the role of Devil in Lakshana serial is now charming as a police officer in Bheema Movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X