ಗೋವಾ ಕಡಲ ತೀರದಲ್ಲಿ ರೊಮ್ಯಾಂಟಿಕ್ ಮೂಡ್‌ನಲ್ಲಿ ಕಂಡ ಸಿದ್ದು, ಪ್ರಿಯಾ

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಮದುವೆಯಾಗಲು ಸಾಕಷ್ಟು ಜೋಡಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕಳೆದ ವರ್ಷ ಕಿರುತೆರೆಯಲ್ಲಿ ಹಲವು ಜೋಡಿಗಳು ಸಪ್ತಪದಿ ತುಳಿದಿದ್ದರು. ಇನ್ನಷ್ಟು ಜೋಡಿಗಳು ಉಂಗುರ ಬದಲಾಯಿಸಿಕೊಂಡು ಪ್ರೇಮ ನಿವೇದನೆ ಮಾಡಿಕೊಂಡಿದ್ದರು.

ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳೆಲ್ಲಾ ಮದುವೆಯಾಗುವ ಕನಸು ಕಾಣುತ್ತಿದ್ದಾರೆ. ಸಪ್ತಪದಿ ತುಳಿಯುವ ದಿನಕ್ಕಾಗಿ ಕಾಯುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಕಲಾವಿದರ ಮದುವೆಯನ್ನು ಕಣ್ತುಂಬಿಕೊಳ್ಳುವ ಕಾತುರರಾಗಿದ್ದಾರೆ.

ಇತ್ತೀಚೆಗಷ್ಟೇ ಉಂಗುರ ಬದಲಾಯಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರಿಗೂ ಶಾಕ್ ಕೊಟ್ಟ ಜೋಡಿ ಈಗ ಮದುವೆಯಾಗುವ ಸಂಭ್ರಮದಲ್ಲಿದ್ದಾರೆ. ಪ್ರೀ ವೆಡ್ಡಿಂಗ್ ಶೂಟ್ ಗಾಗಿ ಫ್ಲೈಟ್ ಏರಿ ಈ ಜೋಡಿ ಕಡಲ ತೀರದಲ್ಲಿ ರೊಮ್ಯಾಂಟಿಕ್ ಮೂಡ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.

ಸದ್ದಿಲ್ಲದೇ ಸುದ್ದಿಯಾದ ಜೋಡಿ

ಸದ್ದಿಲ್ಲದೇ ಸುದ್ದಿಯಾದ ಜೋಡಿ

ನಟಿ ಪ್ರಿಯಾ ಆಚಾರ್ ಮತ್ತು ನಟ ಸಿದ್ದು ಮೂಲಿಮನಿ ಯಾರಿಗೂ ಹೇಳದೇ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರು ಡ್ಯಾನ್ಸ್ ಶೋ ಒಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಇಲ್ಲಿಂದ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯದ ಬಳಿಕ ಪ್ರೀತಿಸಲು ಶುರು ಮಾಡಿದ ಈ ಜೋಡಿ 'ಧಮಾಕ' ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. 'ಧಮಾಕ' ಚಿತ್ರದ ಬಳಿಕ ಇವರಿಬ್ಬರು ಆಗಾಗ ಒಟ್ಟೊಟ್ಟಿಗೆ ರೀಲ್ಸ್ ಮಾಡುತ್ತಿದ್ದರು. ಆದರೆ, ಇಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ರಹಸ್ಯವಾಗಿಯೇ ಇಡಲಾಗಿತ್ತು. ಇದು ಇವರ ನಿಶ್ಚಿತಾರ್ಥದ ದಿನ ಬಹಿರಂಗವಾಗಿ ದೊಡ್ಡ ಸುದ್ದಿಯಾಗಿತ್ತು.

ಸಿನಿಮಾಗಳಲ್ಲಿ ಸಿದ್ದು ಬ್ಯುಸಿ

ಸಿನಿಮಾಗಳಲ್ಲಿ ಸಿದ್ದು ಬ್ಯುಸಿ

ಪ್ರಿಯಾ ಜೆ ಆಚಾರ್ ಮತ್ತು ಸಿದ್ದುಮೂಲಿಮನಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಪ್ರಿಯಾ ಅದಿತಿ ಪಾತ್ರದಲ್ಲಿ 'ಗಟ್ಟಿಮೇಳ' ಸೀರಿಯಲ್ ನಲ್ಲಿ ನಟಿಸುತ್ತಿದ್ದರೆ, 'ಪಾರು' ಧಾರಾವಾಹಿಯಲ್ಲಿ ಸಿದ್ದು ಮೂಲಿಮನಿ ಪ್ರೀತಂ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಪ್ರಿಯಾ ಅವರಿಗೆ ನಟನೆ ಹೊಸದು. ಮೂಲತಃ ಉತ್ತರ ಕರ್ನಾಟಕದವರಾದರೂ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ. 'ಪಾರು' ಧಾರಾವಾಹಿಯಲ್ಲಿ ಪ್ರೀತು ಎಂದೇ ಚಿರಪರಿಚಿತರಾಗಿರುವ ನಟ ಸಿದ್ದು ಮೂಲಿಮನಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 'ರಂಗಿತರಂಗ', 'ವಿಕ್ರಾಂತ್ ರೋಣ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಅವರ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ.

ಶೀಘ್ರದಲ್ಲೇ ಮದುವೆಯಾಗಲಿರುವ ಜೋಡಿ

ಶೀಘ್ರದಲ್ಲೇ ಮದುವೆಯಾಗಲಿರುವ ಜೋಡಿ

ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಸದ್ದಿಲ್ಲದೇ ಒಂದಾಗಿದ್ದರು. ನವೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಎಂಗೇಜ್ ಮೆಂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ದಾವಣಗೆರೆಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ನಿತ್ಯ ಒಂದಲ್ಲ ಒಂದು ರೀಲ್ಸ್ ಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ಸದ್ಯ ಮದುವೆಯಾಗುವ ಆಸೆಯಲ್ಲಿರುವ ಈ ಜೋಡಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕಡಲ ತೀರದಲ್ಲಿ ಮಿಂಚಿದ ಜೋಡಿ

ಕಡಲ ತೀರದಲ್ಲಿ ಮಿಂಚಿದ ಜೋಡಿ

ಪ್ರೀ ವೆಡ್ಡಿಂಗ್ ಶೂಟಿಂಗ್‌ಗಾಗಿ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಗೋವಾಗೆ ಹಾರಿದ್ದಾರೆ. ಗೋವಾದ ಕಡಲ ತೀರದಲ್ಲಿ ರೊಮ್ಯಾಂಟಿಕ್ ಆಗಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ವೈಟ್ ಟೀ-ಶರ್ಟ್ ಅಂಡ್ ಆರೇಂಜ್ ಶಾರ್ಟ್ಸ್‌ನಲ್ಲಿ ಸಿದ್ದು, ಪ್ರಿಯಾ ಆರೇಂಜ್ ಟೀ ಶರ್ಟ್‌ಗೆ ವೈಟ್ ಸ್ಕರ್ಟ್ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಇದರ ಜೊತೆಗೆ ವೈಟ್ ಗೌನ್ ಹಾಗೂ ಕ್ರೀಮ್‌ಸೂಟ್‌ನಲ್ಲೂ ಫೊಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಟಿವಿ ಕಾರ್ಯಕ್ರಮದಲ್ಲಿ ಸಿದ್ದು ಮಂಡಿಯೂರಿ ಕವಿತೆಯನ್ನು ಹೇಳಿ ಪ್ರಿಯಾಳಿಗೆ ಪ್ರಪೋಸ್ ಮಾಡಿದ್ದರು. ಈ ವೀಡಿಯೋ ಸಕತ್ ವೈರಲ್ ಆಗಿತ್ತು.

More from Filmibeat

English summary
Priya j Achar and Siddu Moolimani Pre-wedding Shoot Photos Viral. Priya J Achar Shared pictures of her pre Wedding Shoot with Siddu Moolimani in Goa. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X