ಪ್ರಿಯಾಮಣಿಗೆ ಮೊಟ್ಟಮೊದಲು ಪ್ರಪೋಸ್ ಮಾಡಿದ ಸುಂದರಾಂಗ ಈತ.!
ಬೆಳ್ಳಿತೆರೆಮೇಲೆ ನಟಿ ಪ್ರಿಯಾಮಣಿ ರವರ ಚೆಲುವು ನೋಡಿ ಅನೇಕರು ಕ್ಲೀನ್ ಬೌಲ್ಡ್ ಆಗಿರಬಹುದು. ಆದ್ರೆ, ಪ್ರಿಯಾಮಣಿ ಇನ್ನೂ ಏಳನೇ ಕ್ಲಾಸ್ ಓದುವಾಗಲೇ, ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದವರು ಪ್ರಮೋದ್.!
ಪ್ರಿಯಾಮಣಿ ಕ್ಲಾಸ್ ಮೇಟ್ ಆಗಿದ್ದ ಪ್ರಮೋದ್, ಆಕೆಯನ್ನ ಇಂಪ್ರೆಸ್ ಮಾಡಲು ಆಗಾಗ ಕಿಟ್ ಕ್ಯಾಟ್ ಚಾಕಲೇಟ್ ನೀಡುತ್ತಿದ್ದರಂತೆ. ಜೊತೆಗೆ ಹೂ, ಗ್ರೀಟಿಂಗ್ ಕಾರ್ಡ್ ಕೊಟ್ಟು ಮಂಡಿಯೂರಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರಂತೆ.[ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!]
ಈ ಕಥೆ ಬಹಿರಂಗವಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ಪ್ರಿಯಾಮಣಿ-ಪ್ರಮೋದ್ ಲವ್ ಸ್ಟೋರಿ ಇಲ್ಲಿದೆ ಓದಿ...

ಪ್ರಿಯಾಮಣಿಯನ್ನ ನೋಡುವುದೇ ಖುಷಿ
ತಮ್ಮ ಮುದ್ದು ನಾಯಿ ಮರಿ ಜೊತೆ ಪ್ರಿಯಾಮಣಿ ವಾಕಿಂಗ್ ಹೋಗುತ್ತಿದ್ದಾಗ, ಹಿಂದಿನಿಂದ ಸೈಕಲ್ ನಲ್ಲಿ ಪ್ರಮೋದ್ ಫಾಲೋ ಮಾಡುತ್ತಿದ್ದರಂತೆ. ಪ್ರಿಯಾಮಣಿ ರವರನ್ನ ನೋಡುವುದೇ ಪ್ರಮೋದ್ ಗೆ ಖುಷಿ.[ಪ್ರಿಯಾಮಣಿ ಬಣ್ಣ ಹಚ್ಚುವುದು ಅಪ್ಪ-ಅಮ್ಮನಿಗೆ ಇಷ್ಟವೇ ಇರಲಿಲ್ಲ.!]

ಪ್ರಿಯಾಮಣಿಗೆ ಪ್ರಪೋಸ್ ಮಾಡಿದ್ದ ಪ್ರಮೋದ್
''ಪ್ರಿಯಾಮಣಿಯನ್ನ ಇಂಪ್ರೆಸ್ ಮಾಡೋಕೆ ಆಗಾಗ ಕಿಟ್ ಕ್ಯಾಟ್ ನೀಡುತ್ತಿದ್ದೆ. ಹೂ ಮತ್ತು ಎರಡು ಕಾರ್ಡ್ ಕೊಟ್ಟು ಪ್ರಿಯಾಮಣಿಗೆ ನಾನು ಪ್ರಪೋಸ್ ಮಾಡಿದ್ದೆ'' ಎನ್ನುತ್ತಾರೆ ಪ್ರಮೋದ್ [ನಟಿ ಪ್ರಿಯಾಮಣಿ ರವರನ್ನ ಯಾವುದೇ ಕಾರಣಕ್ಕೂ 'ಫಾಲೋ' ಮಾಡ್ಬೇಡಿ.!]

ಪಿ.ಪಿ ಲವ್ ಸ್ಟೋರಿ
''ಪ್ರಮೋದ್ ಹಾಗೂ ಪ್ರಿಯಾಮಣಿ' ಎಂಬ ಅರ್ಥ ಬರುವಂತೆ ಸ್ಕೂಲ್ ನಲ್ಲಿ ಎಲ್ಲರೂ ನನ್ನ 'ಪಿ.ಪಿ' ಅಂತ ಕರೆಯುತ್ತಿದ್ದರು. ಈಗಲೂ ನನ್ನ ಹೆಂಡತಿ ನನ್ನ 'ಪಿ.ಪಿ' ಅಂತ ಕರೆದು ಕಾಲೆಳೆಯುತ್ತಾಳೆ. ಪ್ರಿಯಾಮಣಿ ಮೇಲೆ ನನಗೆ ಕ್ರಷ್ ಇತ್ತು ಅಂತ ನಾನು ನನ್ನ ಹೆಂಡತಿಗೂ ಹೇಳಿದ್ದೇನೆ'' - ಪ್ರಮೋದ್, ಪ್ರಿಯಾಮಣಿ ಸ್ನೇಹಿತ

ಸ್ಕೂಲ್ ದೊಡ್ಡ ಗಾಸಿಪ್
''ಸ್ಕೂಲ್ ಹಿಂದೆ ಇರುವ ಬಿಲ್ಡಿಂಗ್ ನಲ್ಲಿ ಪ್ರಮೋದ್ ನನಗೆ ಪ್ರಪೋಸ್ ಮಾಡಿದ್ರು. ನನಗೆ ಏನೂ ಗೊತ್ತಾಗಲಿಲ್ಲ. ಸುಮ್ಮನೆ 'ಹೂಂ' ಎಂದುಬಿಟ್ಟೆ. ಆಗ ನನಗೆ 'ಲವ್' ಅಂದ್ರೆ ಏನು ಅಂತ ಅರ್ಥ ಗೊತ್ತಿರಲಿಲ್ಲ. ಸ್ಕೂಲ್ ನಲ್ಲಿ ಅದೇ ದೊಡ್ಡ ಗಾಸಿಪ್ ಆಗಿತ್ತು'' - ಪ್ರಿಯಾಮಣಿ, ನಟಿ

ಟ್ರೈಯಾಂಗಲ್ ಲವ್ ಸ್ಟೋರಿ
ಪ್ರಮೋದ್ ಗೆ ಪ್ರಿಯಾಮಣಿ ಮೇಲೆ ಕ್ರಷ್ ಇದ್ರೆ, ಪ್ರಿಯಾಮಣಿಗೆ ಸೀನಿಯರ್ ಪೃಥ್ವಿ ಮೇಲೆ ಕ್ರಷ್ ಇತ್ತು. ಪೃಥ್ವಿಗೆ ಸ್ಲಾಮ್ ಬುಕ್ ಕೊಟ್ಟು, ಅವರ ಫೋನ್ ನಂಬರ್ ತಗೊಂಡು, ಪ್ರತಿದಿನ ಪ್ರಿಯಾಮಣಿ ಫೋನ್ ಮಾಡುತ್ತಿದ್ದರಂತೆ.

ಗುಡ್ ಗರ್ಲ್ ಆದರು
ಏಳನೇ ಕ್ಲಾಸ್ ಮುಗಿದ್ಮೇಲೆ, ಪ್ರಿಯಾಮಣಿ ಸ್ವಲ್ಪ 'ಗುಡ್ ಗರ್ಲ್' ಆಗಿ, ತುಂಟತನವನ್ನ ಕಮ್ಮಿ ಮಾಡಿದ್ರಂತೆ.


Click it and Unblock the Notifications











