'ಚೆನ್ನೈ ಎಕ್ಸ್ ಪ್ರೆಸ್'ನಲ್ಲಿ ಶಾರುಖ್ ಜೊತೆ ಕುಣಿಯಲು ಪ್ರಿಯಾಮಣಿಗೆ ಚಾನ್ಸ್ ಸಿಕ್ಕಿದ್ಹೇಗೆ?
ಕನ್ನಡದಲ್ಲಿ 11, ತಮಿಳಿನಲ್ಲಿ 14, ತೆಲುಗಿನಲ್ಲಿ 20 ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಪ್ರಿಯಾಮಣಿ ಬಾಲಿವುಡ್ ನಲ್ಲಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪೈಕಿ ಶಾರುಖ್ ಖಾನ್ ರವರ 'ಚೆನ್ನೈ ಎಕ್ಸ್ ಪ್ರೆಸ್' ಕೂಡ ಒಂದು.
ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿ ಆಗಿದ್ದ ಪ್ರಿಯಾಮಣಿ, 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲು ಒಪ್ಪಿಕೊಳ್ಳಲು ಏಕೈಕ ಕಾರಣ 'ಶಾರುಖ್ ಖಾನ್'.[ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!]
ಶಾರುಖ್ ಖಾನ್ ರವರ ಬಹುದೊಡ್ಡ ಅಭಿಮಾನಿ ಪ್ರಿಯಾಮಣಿ. ಅವರ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಾಗ, ಪ್ರಿಯಾಮಣಿ ಹಿಂದು ಮುಂದು ನೋಡದೆ ಒಪ್ಪಿಕೊಂಡುಬಿಟ್ಟರು. ಈ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಿಯಾಮಣಿ ಹೇಳಿದಿಷ್ಟು....

ಶಾರುಖ್ ಅಂದ್ರೆ ಇಷ್ಟ
''ನನಗೆ ಶಾರುಖ್ ಖಾನ್ ಅಂದ್ರೆ ತುಂಬಾ ಇಷ್ಟ. ಶಾರುಖ್ ಖಾನ್ ಸ್ಕ್ರೀನ್ ಮೇಲೆ ಬಂದ ತಕ್ಷಣವೇ ಏನೋ ಒಂಥರಾ ಮ್ಯಾಜಿಕ್'' - ಪ್ರಿಯಾಮಣಿ, ನಟಿ [ಪ್ರಿಯಾಮಣಿ ಬಣ್ಣ ಹಚ್ಚುವುದು ಅಪ್ಪ-ಅಮ್ಮನಿಗೆ ಇಷ್ಟವೇ ಇರಲಿಲ್ಲ.!]

ಜೋಕ್ ಎಂದುಕೊಂಡೆ
''ಸಡನ್ ಆಗಿ ರೋಹಿತ್ ಶೆಟ್ಟಿ ಆಫೀಸ್ ನಿಂದ ನನಗೆ ಫೋನ್ ಬಂತು. ''ನಾನು ಶಾರುಖ್ ಖಾನ್ ಜೊತೆ ಡ್ಯಾನ್ಸ್ ಮಾಡಬೇಕು'' ಅಂತ. ಯಾರೋ ತಮಾಷೆ ಮಾಡುತ್ತಿದ್ದಾರೆ ಅಂದುಕೊಂಡಿದ್ದೆ. ಆದ್ರೆ, ಅದು ನಿಜವಾಗಿತ್ತು. ಅದಾದ್ಮೇಲೆ ನಾನು ರೋಹಿತ್ ಶೆಟ್ಟಿ ಆಫೀಸ್ ಗೆ ಹೋದೆ'' - ಪ್ರಿಯಾಮಣಿ, ನಟಿ [ನಟಿ ಪ್ರಿಯಾಮಣಿ ರವರನ್ನ ಯಾವುದೇ ಕಾರಣಕ್ಕೂ 'ಫಾಲೋ' ಮಾಡ್ಬೇಡಿ.!]

ಒಂದು ಡೌಟ್ ಇತ್ತು
''ನನಗೆ ಒಂದು ಡೌಟ್ ಇತ್ತು. ಹಾಡಿನಲ್ಲಿ ದೀಪಿಕಾ ಪಡುಕೋಣೆ ಇರುತ್ತಾರೋ.? ಇಲ್ಲವೋ.? ಅಂತ. ಯಾಕಂದ್ರೆ, ಅವರು ಇದ್ದರೆ... ನನಗೆ ಪ್ರಾಮುಖ್ಯತೆ ಸಿಗಲ್ಲ. ನಾನು ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗ್ಬೇಕಾಗುತ್ತೆ. ಹೀಗಾಗಿ ಇದನ್ನೇ ನಾನು ರೋಹಿತ್ ಶೆಟ್ಟಿ ಬಳಿ ಪ್ರಶ್ನೆ ಮಾಡಿದೆ'' - ಪ್ರಿಯಾಮಣಿ, ನಟಿ

ಒಂದೇ ವಾರದಲ್ಲಿ ಮುಗಿದು ಹೋಯ್ತು
''ನಾನು ಮತ್ತು ಶಾರುಖ್ ಮಾತ್ರ ಡ್ಯಾನ್ಸ್ ಮಾಡೋದು ಎಂದು ರೋಹಿತ್ ಶೆಟ್ಟಿ ಕನ್ಫರ್ಮ್ ಮಾಡಿದ್ಮೇಲೆ ಗ್ರೀನ್ ಸಿಗ್ನಲ್ ಕೊಟ್ಟೆ. ಹಾಡು ಕೇಳಿಸಿಕೊಂಡೆ ಇಷ್ಟ ಆಯ್ತು. ಒಂದೇ ವಾರದಲ್ಲಿ ಶೂಟಿಂಗ್ ಕೂಡ ಮುಗಿದುಹೋಯ್ತು'' - ಪ್ರಿಯಾಮಣಿ, ನಟಿ


Click it and Unblock the Notifications











