For Quick Alerts
  ALLOW NOTIFICATIONS  
  For Daily Alerts

  ಅತ್ಯುತ್ತಮ ಖಳ ನಾಯಕಿ ಪ್ರಶಸ್ತಿ ಪಡೆದ 'ಅಗ್ನಿಸಾಕ್ಷಿ' ಚಂದ್ರಿಕಾ

  |

  ಕಲರ್ಸ್ ಕನ್ನಡ ವಾಹಿನಿಯ ಈ ವರ್ಷದ ಅತ್ಯುತ್ತಮ ಖಳ ನಾಯಕಿ ಪ್ರಶಸ್ತಿ 'ಅಗ್ನಿಸಾಕ್ಷಿ' ಧಾರಾವಾಹಿ ಪಾಲಾಗಿದೆ. ನಟಿ ಪ್ರಿಯಾಂಕ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

  'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರ ಬಹಳ ಮುಖ್ಯವಾಗಿರುವುದು. ಧಾರಾವಾಹಿಯ ನಾಯಕಿಯ ಪಾತ್ರಕ್ಕೆ ಪೈಪೋಟಿ ನೀಡುವಂತೆ ಈ ಪಾತ್ರ ಇದೆ. ಚಂದ್ರಿಕಾ ಪಾತ್ರವನ್ನು ಅಷ್ಟೇ ಗಟ್ಟಿಯಾಗಿ ಪ್ರಿಯಾಂಕ ನಿರ್ವಹಿಸುತ್ತಿದ್ದಾರೆ.

  ತಮ್ಮ ಒಳ್ಳೆಯ ನಟನೆಗಾಗಿ ಇದೀಗ ಪ್ರಿಯಾಂಕ 'ಜನ ಮೆಚ್ಚಿದ ಮಂಥರೆ' ಪ್ರಶಸ್ತಿ ಪಡೆದಿದ್ದಾರೆ. ಅನುಬಂಧ ಕಾರ್ಯಕ್ರಮದ ಅದ್ದೂರಿ ವೇದಿಕೆಯಲ್ಲಿ ಪ್ರಿಯಾಂಕ ಕೈಗೆ ಪ್ರಶಸ್ತಿ ಸೇರಿದೆ.

  ಅನುಬಂಧ ಅವಾರ್ಡ್ 2019: ಜನ ಮೆಚ್ಚಿದ ನಾಯಕ-ನಾಯಕಿ ಯಾರು?ಅನುಬಂಧ ಅವಾರ್ಡ್ 2019: ಜನ ಮೆಚ್ಚಿದ ನಾಯಕ-ನಾಯಕಿ ಯಾರು?

  ಪ್ರತಿ ಬಾರಿ ಅಗ್ನಿಸಾಕ್ಷಿ ಧಾರಾವಾಹಿಯ ನಟ ವಿಜಯ್ ಸೂರ್ಯ ಅನುಬಂಧ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಿದ್ದರು. ಆದರೆ, ವಿಜಯ್ ಸೂರ್ಯ ಧಾರಾವಾಹಿಯಿಂದ ಆಚೆ ಹೋಗಿದ್ದಾರೆ.

  ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.!ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.!

  ಇಂದು (ಸಪ್ಟೆಂಬರ್ 29) ರಂದು ಅನುಬಂಧ ಕಾರ್ಯಕ್ರಮ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಗಣೇಶ್, ಜಗ್ಗೇಶ್, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದ್ದೂರಿಯಾಗಿ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಮಾಡಲಾಗಿದೆ.

  English summary
  'Agnisakshi' serial Priyanka got best actress in negative role in Anubandha Awards 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X