'ಮಜಾ ಟಾಕೀಸ್'ದಲ್ಲಿ ಸೋಶಿಯಲ್ ಮೀಡಿಯಾ ಇನ್ ಫ್ಯುಯೆನ್ಸರ್ ಆಗಿ ಬದಲಾದ ಪಿಕೆ

By ಅನಿತಾ ಬನಾರಿ

ಪ್ರಿಯಾಂಕಾ ಕಾಮತ್ ಬಗ್ಗೆ ನಿಮಗೆ ತಿಳಿದಿದೆಯಾ ಎಂದು ಕೇಳಿದರೆ ಒಂದು ಕ್ಷಣಕ್ಕೆ ನೀವು ಕನ್ ಫ್ಯೂಸ್ ಆಗಿಯೇ ಆಗುತ್ತೀರಿ. ಯಾಕೆಂದರೆ ಎಂಟು ವರ್ಷಗಳಿಂದ ಕಿರುತೆರೆಯ ನಂಟು ಹೊಂದಿರುವ ಪ್ರಿಯಾಂಕಾ ಕಾಮತ್ ಕಿರುತೆರೆಯಲ್ಲಿ ಪಿಕೆ ಆಗಿಯೇ ಫೇಮಸ್ಸು! 'ಗಿಚ್ಚಿ ಗಿಲಿಗಿಲಿ' ಹಾಸ್ಯ ರಿಯಾಲಿಟಿ ಶೋವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಪಿಕೆ ಪ್ರತಿ ಸಂಚಿಕೆಯಲ್ಲೂ ತಮ್ಮ ನವಿರಾದ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

'ಗಿಚ್ಚಿ ಗಿಲಿಗಿಲಿ' ಶೋ ನಂತರ ನಟಿಯಾಗಿ ಕಿರುತೆರೆಗೂ ಈಕೆ ಕಾಲಿಟ್ಟಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕಿ ಸೂಪರ್ ಸ್ಟಾರ್ ರಚನಾ ಅವರ ಪರ್ಸನಲ್ ಅಸಿಸ್ಟೆಂಟ್ ಟ್ವಿಂಕಲ್ ಆಗಿ ಬಣ್ಣ ಹಚ್ಚುತ್ತಿದ್ದಾರೆ ಪ್ರಿಯಾಂಕಾ. ಇದೀಗ ಮಗದೊಂದು ಸಂತಸದ ವಿಚಾರ ಎಂದರೆ ಆಕೆ ಮಜಾಟಾಕೀಸ್ ಗೆ ಕಾಲಿಟ್ಟಿದ್ದಾರೆ.

Priyanka Kamat turned social media influencer in Maja Talkies reality show

ಹೌದು, ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಲಾವಣ್ಯ ಆಗಿ ಮಜಾ ಟಾಕೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪ್ರಿಯಾಂಕಾ ಕಾಮತ್. "ಆರು ವರ್ಷಗಳ ಹಿಂದೆ ನಾವು ಕಾಮಿಡಿ ಟಾಕೀಸ್ ಎಂಬ ಶೋ ಮಾಡಿದ್ವಿ. ಅದರಲ್ಲಿ ಸೃಜನ್ ಸರ್ ನಮ್ಮ ಕಾಮಿಡಿ ಟಾಕೀಸ್ ಟೀಂನಿಂದ ಮಜಾ ಟಾಕೀಸ್‌ಗೆ ಕರ್ಕೊಂಡು ಹೋಗ್ಬಿಟ್ರು. ಆ ಟೈಮಲ್ಲಿ ನಂಗೆ ಛಾನ್ಸ್ ಸಿಕ್ಕಿರ್ಲಿಲ್ಲ. ನಾನು ತುಂಬಾ ದುಃಖಪಟ್ಟಿದ್ದೆ. ಆದರೆ, ಇಷ್ಟು ವರ್ಷ ಆದ ಮೇಲೆ ನಂಗೆ ಛಾನ್ಸ್ ಸಿಕ್ತಿರೋದು ಓ ಆವಾಗ ನಾನು ಮ್ಯಾನಿಫೆಸ್ಟ್ ಮಾಡಿರೋದು ಇವಾಗ ಸಿಕ್ತಿದ್ಯಾ ಹೇಳಿ ಅನ್ನಿಸ್ತಿದೆ" ಎಂದು ಪ್ರಿಯಾಂಕಾ ಕಾಮತ್ ಹೇಳಿಕೊಂಡಿದ್ದಾರೆ.

"ಸಕತ್ ಎಕ್ಸೈಟ್‌ಮೆಂಟ್ ಇದೆ. ಇನ್ನೊಂದು ತುಂಬಾ ತುಂಬಾ ಫನ್ ಮಾಡೋ, ಕ್ವಾಟ್ಲೆ ಕೊಡುವ ಆರ್ಟಿಸ್ಟ್ ಗಳಿದ್ದಾರೆ. ಅವರ ಜೊತೆ ನಾನು ಒಬ್ಬಳಾಗ್ತಿರೋದಕ್ಕೆ ನನಗೆ ಖುಷಿ ಇದೆ. ಮಜಾ ಟಾಕೀಸ್‌ನಲ್ಲಿ ನಾನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಯಾವಾಗ್ಲೂ ಸೋಶಿಯಲ್ ಮೀಡಿಯಾದಲ್ಲೇ ಮಲಗ್ತಾ, ಓಡಾಡ್ತಾ, ಊಟ ಮಾಡ್ತಾ, ನಾನು ಏನು ಮಾಡ್ತಿನೋ, ಅದನ್ನೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ತೋರಿಸುವಂತಹ ಕ್ಯಾರೆಕ್ಟರ್. ನಂಗೆ ಇದು ಹೊಸತು. ಯಾಕೆಂದರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಬಟ್ ಮಜಾ ಮಾಡೋಣ" ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕಾ ಕಾಮತ್.

ಅಂದ ಹಾಗೇ ಪ್ರಿಯಾಂಕಾ ಕಾಮತ್ ಅವರ ಕಿರುತೆರೆ ಪಯಣ ಶುರುವಾದುದು ರಿಯಾಲಿಟಿ ಶೋ ಮೂಲಕವೇ. 'ಚಾಂಪಿಯನ್' ಶೋ ಮೂಲಕ ಕಿರತೆರೆಗೆ ಕಾಲಿಟ್ಟ ಈಕೆ ಮುಂದೆ 'ಮಜಾಭಾರತ' ಶೋ ಮೂಲಕ ಕಿರುತೆರೆ ವೀಕ್ಷಕರ ಮಜ ಸೆಳೆದರು. "ಮಜಾಭಾರತ" ದ ಮುಂದಿನ ನಾಲ್ಕು ಸೀಸನ್‌ಗಳಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಂಡ ಪಿಕೆ ನಟನೆಯ ಜೊತೆಗೆ ನವಿರಾದ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು.

ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಅಭಿನಯದ 'ಸಿಂಗ' ಸಿನಿಮಾದಲ್ಲಿ ನಾಯಕಿ ಅದಿತಿ ಪ್ರಭುದೇವ ಅವರ ಸ್ನೇಹಿತೆಯಾಗಿ ನಟಿಸುವ ಮೂಲಕ ಸಿನಿಮಾಗೂ ಈಕೆ ಕಾಲಿಟ್ಟಿದ್ದಾರೆ. ಕಿರುತೆರೆ, ಸಿನಿಮಾ ಹೊರತಾಗಿ ವೆಬ್ ಸಿರೀಸ್‌ನಲ್ಲಿ ಈಕೆ ಮಿಂಚಿದ ಪ್ರತಿಭೆ. 'ವಾರ್ ಗಿತ್ತಿ' ಹಾಗೂ 'ಪಾನಿ ಪುರಿ' ಎನ್ನುವ ವೆಬ್ ಸಿರೀಸ್‌ನಲ್ಲೂ ಪಿಕೆ ಆಲಿಯಾಸ್ ಪ್ರಿಯಾಂಕಾ ಕಾಮತ್ ಬಣ್ಣ ಹಚ್ಚಿದ್ದಾರೆ.

More from Filmibeat

English summary
Priyanka Kamat turned social media influencer in Maja Talkies reality show
Read more about: actress maja talkies tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X