"ಈ ಅವಾರ್ಡ್ ಗೋಸ್ಕರ ನಾನು ಎಂಟು ವರ್ಷಗಳಿಂದ ಕಾದಿದ್ದೆ": ಕಿರುತೆರೆ ನಟಿ ಪ್ರಿಯಾಂಕಾ ಕಾಮತ್

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪೈಕಿ 'ಅನುಬಂಧ ಅವಾರ್ಡ್ಸ್' ಕೂಡಾ ಒಂದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅದ್ಧೂರಿಯಾಗಿ ನಡೆದ ಅನುಬಂಧ ಅವಾರ್ಡ್ಸ್ ಗೆ ಇದೀಗ ಹನ್ನೊಂದರ ಹರೆಯ. ಹೌದು, ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿರುವ ಅನುಬಂಧ ಅವಾರ್ಡ್ಸ್ ಇತ್ತೀಚೆಗಷ್ಟೇ ಹನ್ನೊಂದನೇ ವರ್ಷದ ಕಾರ್ಯಕ್ರಮವನ್ನು ಬಹಳಷ್ಟು ಅದ್ಧೂರಿಯಾಗಿ ನೆರವೇರಿಸಿತ್ತು.

ಅನುಬಂಧ ಅವಾರ್ಡ್ಸ್ ನಲ್ಲಿ 'ಜನ ಮೆಚ್ಚಿದ ಎಂಟರ್‌ಟ್ರೈನರ್' ಪ್ರಶಸ್ತಿ ಪಡೆದುಕೊಂಡಿದ್ದಾರೆ ಪ್ರಿಯಾಂಕಾ ಕಾಮತ್. ಹೌದು, 'ಮಾಜಾಭಾರತ', ' ಗಿಚ್ಚಿಗಿಲಿಗಿಲಿ' ಶೋಗಳ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಪ್ರಿಯಾಂಕಾ ಅವರಿಗೆ ಇದು ಮೊದಲ ಅವಾರ್ಡ್ ಹೌದು. ಇದರ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಈ ನಟಿ ಸಂತಸವನ್ನು ಹಂಚಿಕೊಂಡಿದ್ದಾರೆ.

Priyanka Kamath said that I have been waiting for this award for eight years

"ಜನ ಮೆಚ್ಚಿದ ಎಂಟರ್‌ಟ್ರೈನರ್ ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಸಖತ್ ಖುಷಿಯಿದೆ. ಯಾಕೆಂದರೆ, ನಾನು ಈ ಅವಾರ್ಡ್ ಗೋಸ್ಕರ ಎಂಟು ವರ್ಷದಿಂದ ಕಾದಿದ್ದೇನೆ. ಎಂಟು ವರ್ಷದಿಂದ ತುಂಬಾ ಹಾರ್ಡ್ ವರ್ಕ್ ಕೂಡಾ ಮಾಡಿದ್ದೇನೆ. ಆ ಎಂಟು ವರ್ಷದ ಸ್ಟ್ರಗಲ್ ನ‌ನಗೆ ಗೊತ್ತಿದೆ. ಆ ಒಂದು ಅವಾರ್ಡ್‌ಗೆ, ಮೆಚ್ಚುಗೆಗೆ ನಾನು ಚಡಪಡಿಸುತ್ತಿದ್ದುದು ಕೂಡಾ ನನಗೆ ಗೊತ್ತಿದೆ. ಒಂದೂವರೆ ವರ್ಷ ಗ್ಯಾಪ್‌ನ ಬಳಿಕ ರಾಜ ರಾಣಿ ಮೂಲಕ ನಾನು ಕಿರುತೆರೆಗೆ ಕಂ ಬ್ಯಾಕ್ ಆದೆ. ನನ್ನ ಬೆಸ್ಟ್ ಕೊಡಬೇಕು ಅಂತ ರಾಜರಾಣಿಯಲ್ಲಿ ನಾನು ತುಂಬಾ ತಮಾಷೆಯಾಗಿ ಮಜಾ ಮಾಡಿದ್ದೇನೆ. ಬಹುಶಃ ಅದಕ್ಕೋಸ್ಕರವೇ ನನಗೆ ಈ ಅವಾರ್ಡ್ ಬಂದಿದೆ" ಎಂದಿದ್ದಾರೆ ಪ್ರಿಯಾಂಕಾ ಕಾಮತ್.

"ಈ ಅವಾರ್ಡ್ ಬಂದಿರುವುದು ನನಗಂತೂ ತುಂಬಾನೇ ಖುಷಿ ನೀಡಿದೆ. ನಾನು ಅವಾರ್ಡ್ ಪಡೆದಿರುವುದು ನನಗಿಂತಲೂ ಜಾಸ್ತಿ ನನ್ನ ಗಂಡನಿಗೆ ಖುಷಿ ನೀಡಿದೆ. ಅವರಿಗೆ ಖುಷಿಯಾಗಿದ್ದು ಕೂಡಾ ನನಗೆ ಖುಷಿಯೇ. ಇನ್ನು ಇದಕ್ಕಿಂತ ಮೊದಲು ನಾನು ಒಂದು ಶೋನಲ್ಲಿ ರನ್ನರ್ ಅಪ್ ಆಗಿದ್ದೆ. ಆದರೆ ಅಲ್ಲಿ ಅವಾರ್ಡ್ ಅಂತ ಏನೂ ಇರ್ಲಿಲ್ಲ. ಹಾಗಾಗಿ ಇದು ನನ್ನ ಫಸ್ಟ್ ಅವಾರ್ಡ್. ಯಾವತ್ತಿದ್ರೂ ಇದು ನಂಗೆ ತುಂಬಾ ಸ್ಪೆಷಲ್ ಆಗಿರುತ್ತೆ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಪ್ರಿಯಾಂಕಾ ಕಾಮತ್ ಹೇಳಿದ್ದಾರೆ.

"ಲೈಫ್ ನಲ್ಲಿ ಎಲ್ಲರಿಗೂ ಅವರ ಫಸ್ಟ್ ಅವಾರ್ಡ್ ನೆನಪಿರುತ್ತೆ ಅಂತೆ. ನನಗೆ, ನನ್ನ ಫ್ಯಾಮಿಲಿ ಕಲರ್ಸ್ ಫ್ಯಾಮಿಲಿಯಿಂದ ಸಿಕ್ಕಿರುವ ಫಸ್ಟ್ ಅವಾರ್ಡ್. ನನಗೆ ಸಿಕ್ಕಿರುವ ಮೊದಲ ಮೆಚ್ಚುಗೆ. ಅದು ಅಷ್ಟು ಜನರು ಮುಂದೆ ಅವಾರ್ಡ್ ಸಿಕ್ತಲ್ಲ ಅದು ಖುಷಿ ನನಗೆ. ಆಮೇಲೆ ಅಂಬಿಕಾ ಮೇಡಂ ನನಗೆ ಅವಾರ್ಡ್ ಕೊಟ್ಟಿರುವುದು ಕೂಡಾ ಖುಷಿ ತಂದಿದೆ. ನಾನು ಈ ಅವಾರ್ಡ್ ಅನ್ನು ನನ್ನ ಗಂಡ ಮತ್ತೆ ಫ್ಯಾಮಿಲಿಗೆ ಡೆಡಿಕೇಟ್ ಮಾಡ್ತೇನೆ" ಎನ್ನುತ್ತಾರೆ ಪ್ರಿಯಾಂಕಾ ಕಾಮತ್.

"ಕಲರ್ಸ್ ಕನ್ನಡ ಮತ್ತು ನನ್ನ ನಡುವಿನ ಬಾಂಧವ್ಯಕ್ಕೆ ಇದೀಗ ಎಂಟು ವರ್ಷ. ಎಂಟು ವರ್ಷದಿಂದ ಕಲರ್ಸ್ ಕನ್ನಡ ಬಿಟ್ಟು ಬೇರೆ ಯಾರ ಜೊತೆಗೂ ಬಾಂಧವ್ಯ ಮಾಡ್ಲೆ ಇಲ್ಲ ನಾನು. ಯಾಕೆಂದರೆ ತುಂಬಾ ಚೆನ್ನಾಗಿ ನೋಡ್ಕೋಳ್ತಾರೆ. ಕರೆದು ಕರೆದು ಕೆಲಸ ಕೊಡ್ತಾರೆ. ನನ್ನ ಒಳಗಡೆ ಇರುವ ಟಾಲೆಂಟ್ ಅನ್ನ ಹೊರಗೆ ತೆಗೆದಿರೋದೇ ಕಲರ್ಸ್ ಕನ್ನಡದವರು. ನನ್ನ ಫಸ್ಟ್ ಶೋ ಚಾಂಪಿಯನ್ ಅಂತ. ಅದು ಕಲರ್ಸ್ ಸೂಪರ್‌ನಲ್ಲಿ ಬಂತು. ಕಾಲೇಜಿನಲ್ಲಿ ಇರುವಾಗ ಕರೆದು ಅವಕಾಶ ಕೊಟ್ಟಿದ್ರು. ಅದಕ್ಕೆ ನಾನು ಚಿರ ಋಣಿ. ಕಲರ್ಸ್ ಮಗಳ ಥರಹ ಎಲ್ಲರೂ ನೋಡ್ತಾರೆ. ಹಾಗಾಗಿ ನನಗೆ ಕಲರ್ಸ್ ತುಂಬಾ ಸ್ಪೆಷಲ್" ಎಂದು ತಮ್ಮ ಮತ್ತು ಕಲರ್ಸ್ ಕನ್ನಡದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ ಪ್ರಿಯಾಂಕಾ ಕಾಮತ್.

"ಸದ್ಯ ನಾನು ನಿನಗಾಗಿ ಧಾರಾವಾಹಿಯಲ್ಲಿ ಟ್ವಿಂಕಲ್ ಆಗಿ ಅಭಿನಯಿಸುತ್ತಿದ್ದೇನೆ. ಇದಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಜೆಡಿ ಸರ್‌ಗೆ ಧನ್ಯವಾದಗಳನ್ನು ತಿಳಿಸ್ತೇನೆ. ಈ ಕ್ಯಾರೆಕ್ಟರ್ ತುಂಬಾ ಸಪೋರ್ಟಿಂಗ್ ಕ್ಯಾರೆಕ್ಟರ್. ಇನ್ನೊಬ್ಬರ ಕಷ್ಟಕ್ಕೆ ಹೆಲ್ಪ್ ಮಾಡುವಂತಹ ಕ್ಯಾರೆಕ್ಟರ್. ಈ ಕ್ಯಾರೆಕ್ಟರ್ ನನಗೆ ತುಂಬಾ ಖುಷಿ ಕೊಟ್ಟಿದೆ. ಖುಷಿ, ಸಂತೋಷ, ಟೆನ್ಶನ್ ಎಲ್ಲಾ ತರಹದ ಭಾವನೆಗಳು ಈ ಪಾತ್ರದಲ್ಲಿದೆ. ಕಲರ್ಸ್ ನಲ್ಲಿ ಯಾವ ಪಾತ್ರ ಮಾಡಿದರೂ ಎಲ್ಲಾ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತಾರೆ" ಎಂದು 'ನಿನಗಾಗಿ' ಧಾರಾವಾಹಿಯ ಬಗ್ಗೆ ಪ್ರಿಯಾಂಕಾ ಹೇಳಿದ್ದಾರೆ.

"ನಿನಗಾಗಿ ಧಾರಾವಾಹಿಯ ಕಲಾವಿದರೆಲ್ಲರೂ ಕುಟುಂಬದ ಹಾಗೆ ಇದ್ದೇವೆ. ಎಲ್ಲಾ ಕಲಾವಿದರು ಅವರವರ ಪಾತ್ರವನ್ನು ಚೆನ್ನಾಗಿ ಮಾಡ್ತಿದ್ದಾರೆ. ಡೈರೆಕ್ಟರ್ ಪೃಥ್ವಿ ಸರ್ ಅವರು ತುಂಬಾ ಸಪೋರ್ಟ್ ಮಾಡ್ತಾರೆ. ಸೆಟ್ ಗೆ ಹೋದ್ರೆ ತುಂಬಾ ಖುಷಿಯಾಗುತ್ತೆ" ಎಂದು ಹೇಳುವ ಪ್ರಿಯಾಂಕಾ ಅವರಿಗೆ ಸಿನಿಮಾದಲ್ಲಿ ನಟಿಸುವ ಕನಸಿದೆ. ಒಂದು ಒಳ್ಳೆಯ ಕತೆ, ಇಮ್‌ಪ್ಯಾಕ್ಟ್ ಕೊಡುವಂತಹ ಪಾತ್ರವಾದರೆ ನಾನು ಖಂಡಿತಾ ನಟಿಸುತ್ತೇನೆ. ನನಗೆ ಸಿನಿಮಾದಲ್ಲಿ ಹೀರೋಯಿನ್ ಪಾತ್ರ ಸಿಗಬೇಕು ಅಂತ ಏನಿಲ್ಲ. ಬದಲಿಗೆ ಒಳ್ಳೆ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡ್ಬೇಕು ಅಂತ ಇದೆ. ಆ್ಯಕ್ಟಿಂಗ್ ಒರಿಯೆಂಟೆಡ್ ಕ್ಯಾರೆಕ್ಟರ್ ಮಾಡ್ಬೇಕು ಅಂತ ಇದೆ" ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕಾ ಕಾಮತ್.

More from Filmibeat

English summary
Priyanka Kamath said that I have been waiting for this award for eight years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X