ಕನ್ನಡಕ್ಕೆ ಡಬ್ ಆಗುತ್ತಿದೆ ಮತ್ತೊಂದು ಹೊಸ ಧಾರಾವಾಹಿ
ಇತ್ತೀಚೆಗೆ ಕನ್ನಡ ವಾಹಿನಿಗಳಲ್ಲಿ ಡಬ್ಬಿಂಗ್ ಧಾರಾವಾಹಿಗಳು ಕೂಡ ಮೂಡಿ ಬರುತ್ತಿವೆ. 'ಸಂಧ್ಯಾರಾಗಂ', 'ಅಗ್ನಿ ಪರೀಕ್ಷೆ', 'ಮನೆ ಮಗಳು', 'ತ್ರಿನಯನಿ', 'ಪುನರ್' ವಿವಾಹ ಸೇರಿದಂತೆ ಹಲವು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿವೆ. ಇದೀಗ ಮತ್ತೊಂದು ಧಾರಾವಾಹಿ ಡಬ್ ಆಗಲು ಸಜ್ಜಾಗಿದೆ. ಕನ್ನಡ ವಾಹಿನಿಗಳಲ್ಲಿ ಹೊಸ ಧಾರಾವಾಹಿಗಳ ಆಗಮನವಾಗುತ್ತಿರುತ್ತೆ. ತೆಲುಗು, ತಮಿಳು ಧಾರಾವಾಹಿಗಳು ಡಬ್ ಆಗುತ್ತಿವೆ.
ಪರಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಒಳ್ಳೆಯ ಧಾರಾವಾಹಿಗಳನ್ನು ನೋಡಲಾಗದವರು ಡಬ್ ಆಗಿ ಕನ್ನಡಕ್ಕೆ ಬಂದಾಗ ಖುಷಿಯಿಂದ ನೋಡುತ್ತಿದ್ದಾರೆ. ಜೀ ಕನ್ನಡ ಹಾಗೂ ಸ್ಟಾರ್ ಸುವರ್ಣ ವಾಹಿನಿಗಳಲ್ಲಿ ಹೆಚ್ಚಾಗಿ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಅದರಲ್ಲೂ ಹೊಸ ಹೊಸ ಧಾರಾವಾಹಿಗಳೇ ಹೆಚ್ಚು ಡಬ್ ಆಗುತ್ತಿವೆ. ತೆಲುಗಿನಲ್ಲಿ ಇತ್ತೀಚೆಗಷ್ಟೇ ಶುರುವಾದ ಧಾರಾವಾಹಿಯೊಂದು ಈಗ ಸ್ಟಾರ್ ಸುವರ್ಣದಲ್ಲಿ ಮೂಡಿ ಬರಲಿದೆ. ಕನ್ನಡದ ಕಿರುತೆರೆ ನಟ-ನಟಿಯರು ಕೂಡ ಪರಭಾಷೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಅಮ್ಮಾಯಿಗಾರು', 'ನಾಗಪಂಚಮಿ', 'ಕಾರ್ತಿಕ ದೀಪಂ', 'ಇಂತಿಕಿ ದೀಪಂ ಇಲ್ಲಲು', 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕನ್ನಡದ ನಟ-ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ, ಪರಭಾಷೆಯಲ್ಲೂ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.
ತೆಲುಗಿನಲ್ಲೂ ಪ್ರಿಯಾಂಕ ನಟನೆ
ಇನ್ನು ನಟಿ ಪ್ರಿಯಾಂಕ ಶಿವಣ್ಣ ಕೂಡ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನ ಕಿರುತೆರೆಗಳಲ್ಲೂ ನಟಿಸಿದ್ದಾರೆ. ಧಾರಾವಾಹಿಗಳು ಮಾತ್ರವಲ್ಲದೇ ರಿಯಾಲಿಟಿ ಶೋ ಮೂಲಕವೂ ಪ್ರಿಯಾಂಕಾ ವೀಕ್ಷಕರಿಗೆ ಹತ್ತಿರವಾದರು. ಪ್ರಿಯಾಂಕಾ ಶಿವಣ್ಣ ಅವರಿಗೆ ಅಭಿಮಾನಿ ಬಳಗ ದೊಡ್ಡದಿದೆ. 'ಅಗ್ನಿಸಾಕ್ಷಿ', 'ಅವನು ಮತ್ತೆ ಶ್ರಾವಣಿ', 'ಕಥೆಯ ರಾಜಕುಮಾರಿ', 'ಒಂದೂರಲ್ಲಿ ರಾಜ-ರಾಣಿ', 'ಪರಿಣಯ' ಧಾರಾವಾಹಿಗಳಲ್ಲಿ ಮಿಂಚಿದರು. ಅಷ್ಟೇ ಅಲ್ಲದೇ, ತೆಲುಗಿನ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.

'ಕೃಷ್ಣ ಸುಂದರಿ' ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ 'ಸತ್ಯ' ಸೀರಿಯಲ್‌ನಲ್ಲಿ ನಾಯಕಿಯ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕ ಶಿವಣ್ಣ, ಸದಾ ಸ್ಟೈಲಿಶ್ ಸ್ಯಾರಿಗಳಿಂದಲೇ ಕಂಗೊಳಿಸುತ್ತಿರುತ್ತಾರೆ.
ಡಬ್ ಆಗಲಿದೆ 'ನಾಗ ಪಂಚಮಿ'
ಮಾಡೆಲಿಂಗ್ ಕ್ಷೇತ್ರದಿಂದ ಕಿರುತೆರೆಗೆ ಬಂದ ಪ್ರಿಯಾಂಕ ಅವರು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೊಸ ಧಾರಾವಾಹಿ ಶುರುವಾಗಿದೆ. ಇದರಲ್ಲಿ ಪ್ರಿಯಾಂಕ ಶಿವಣ್ಣ ಕೂಡ ನಟಿಸುತ್ತಿದ್ದು, ನಾಗಿಣಿ ರೂಪದಲ್ಲಿ ಮತ್ತಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಪ್ರಿಯಾಂಕ ಅವರು ತೆಲುಗಿನ 'ನಾಗಪಂಚಮಿ' ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಧಾರಾವಾಹಿ ಕನ್ನಡದಲ್ಲೂ ಡಬ್ ಆಗಲಿದೆ. ಈ ಬಗ್ಗೆ ವಾಹಿನಿಯ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಸ್ಟಾರ್ ಮಾ ವಾಹಿನಿಯಲ್ಲಿ ಬರುವ ಧಾರಾವಾಹಿ
ಈ ಧಾರಾವಾಹಿಯು ಸ್ಟಾರ್ ಮಾ ವಾಹಿನಿಯಲ್ಲಿ ಮೂಡಿ ಬರುತ್ತಿದೆ. ಬೆಂಗಾಲಿಯಲ್ಲಿ ಇದೇ ಧಾರಾವಾಹಿ 'ಪೂಂಚೋಮಿಯ' ಎಂದು ಪ್ರಸಾರವಾಗಿದೆ. ಇದನ್ನೇ ತೆಲುಗಿನಲ್ಲಿ ರಿಮೇಕ್ ಮಾಡಿದ್ದು, ಇದೀಗ ಕನ್ನಡಕ್ಕೆ ಡಬ್ ಆಗುತ್ತಿದೆ. ಇದರಲ್ಲಿ ದರ್ಶಿನಿ ಗೌಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಪ್ರಿನ್ಸ್ ಶೆಟ್ಟಿ ಹಾಗೂ ಪ್ರಿಯಾಂಕ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿದೆ.


Click it and Unblock the Notifications











