ಧಾರಾವಾಹಿ ಪ್ರಪಂಚಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಉಪೇಂದ್ರ

ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಉಪೇಂದ್ರ ಈಗ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ 'ದೇವಕಿ' ಚಿತ್ರದ ಮೂಲಕ ಬೆಳ್ಳೆ ಪರದೆಯ ಮೇಲೆ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಈಗ ದಿಢೀರನೆ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ನಾನು ನನ್ನ ಕನಸು ಧಾರಾವಾಹಿಯಲ್ಲಿ ಪ್ರಿಯಂಕಾ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಪ್ರಿಯಾಂಕಾ ಸಿನಿಮಾ ಬಿಟ್ಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಅಂದ್ಮೇಲೆ ಪ್ರಿಯಾಂಕಾ ಅವರನ್ನು ದಿನ ನೋಡಬಹುದು ಅಂತ ಅಂದ್ಕೋಬೇಡಿ. ಯಾಕಂದ್ರೆ ಪ್ರಿಯಾಂಕಾ ಧಾರಾವಾಹಿಯ ಪ್ರಮೋಷನ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಆಗಸ್ಟ್ 5ರಿಂದ ಪ್ರಸಾರವಾಗುವ 'ನಾನು ನನ್ನ ಕನಸು' ಧಾರಾವಾಹಿಯ ನಿರೂಪಣೆಯನ್ನು ಪ್ರಿಯಾಂಕಾ ಮಾಡುತ್ತಿದ್ದಾರೆ. ಜೊತೆಗೆ ಧಾರಾವಾಹಿಯಲ್ಲಿ ಗೆಸ್ಟ್ ಪಾತ್ರದಲ್ಲಿ ಮಾತ್ರ ಮಿಂಚಲಿದ್ದಾರೆ. ಅಪ್ಪ ಮತ್ತು ಮಗಳ ಕನಸಿನ ಕಥೆಯನ್ನು ಹೇಳಲು ಬರ್ತಿದ್ದಾರೆ ಪ್ರಿಯಾಂಕಾ. ಅಪ್ಪ-ಮಗಳ ಬಾಂಧವ್ಯದ ಬಗ್ಗೆ ಇರುವ ಧಾರಾವಾಹಿ ಇದಾಗಿದೆ.

Priyanka Upendra Will Play A Cameo And Narrate The Story Of Naanu Nanna Kanasu Serial

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಟಿಯರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿಗಳಲ್ಲಿ ಅಲ್ಲದಿದ್ದರು ಸಾಕಷ್ಟು ರಿಯಾಲಿ ಶೋ ಮೂಲಕ ಕಿರುತೆರೆ ಅಭಿಮಾನಿಗಳ ಮನೆಮಾತಾಗಿದ್ದಾರೆ. ಅಂದ್ಹಾಗೆ ಉಪೇಂದ್ರ ಪತ್ನಿ ಕೂಡ ಈ ಹಿಂದೆ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿದ್ದರು. ಈಗ ದಾರಾವಾಹಿಯ ಪ್ರಮೋಷನ್ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

More from Filmibeat

English summary
Kannada actress Priyanka Upendra will play a cameo and narrate the story of a loving father and his daughter in Naanu nanna Kanasu serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X