BBK 12: ಬಿಗ್‌ಬಾಸ್ ಮನೆ ಸೆಟ್ ನಿರ್ಮಾಣಕ್ಕೆ ತಗಲುವ ವೆಚ್ಚ ಎಷ್ಟು? ಪ್ರತಿದಿನ ಎಷ್ಟು ಜನ ಕೆಲಸ ಮಾಡ್ತಾರೆ?

ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಕಂಟಕ ಶುರುವಾಗಿದೆ. ಏಕಾಏಕಿ ಶೋ ನಡೆಯುತ್ತಿದ್ದ ಬಿಗ್‌ಬಾಸ್ ಮನೆಯಿಂದ ಸ್ಪರ್ಧಿಗಳು, ತಂತ್ರಜ್ಞರು, ಸಿಬ್ಬಂದಿ ಎಲ್ಲರೂ ಗಂಟುಮೂಟೆ ಕಟ್ಟಿಕೊಂಡು ಹೊರಬಂದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್‌ ಸ್ಟುಡಿಯೋಗೆ ಶಾಕ್ ಕೊಟ್ಟಿದೆ. ಅದರ ಪರಿಣಾಮ ಅಲ್ಲೇ ನಡೆಯಿತ್ತಿದ್ದ ಬಿಗ್‌ಬಾಸ್ ಶೋಗೂ ಎದುರಾಗಿದೆ.

ಜಾಲಿವುಡ್ ಸ್ಟುಡಿಯೋದಲ್ಲಿ ದೊಡ್ಮನೆ ಸೆಟ್ ಹಾಕಿ ಈ ಬಾರಿ ಬಿಗ್‌ಬಾಸ್ ಶೋ ನಡೆಸಲಾಗುತ್ತಿತ್ತು. ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಸರಿಯಾಗಿ ಮಾಡ್ತಿಲ್ಲ ಎಂದು ಜಾಲಿವುಡ್ ಸ್ಟುಡಿಯೋ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಆರೋಪಿಸಿ ನೋಟಿಸ್ ನೀಡಿದೆ. ಅದಕ್ಕೆ ಮ್ಯಾನೇಜ್‌ಮೆಂಟ್ ಪ್ರತಿಕ್ರಿಯಿಸದೇ ಇದ್ದಾಗ ಅಧಿಕಾರಿಗಳು ಬಂದು ಗೇಟ್ ಬಂದ್ ಮಾಡಿ ಬೀಗ ಹಾಕಿದ್ದಾರೆ. ಒಳಗೆ ಬಿಗ್‌ಬಾಸ್ ಮನೆ ಸೆಟ್‌ನಲ್ಲಿ ಇದ್ದವರನ್ನು ಆಯೋಜಕರು ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ.

Production of Bigg Boss Kannada Season 12 Suspended After Studio Sealed for Violations

ಕೋಟಿ ಕೋಟಿ ಸುರಿದು ಬಿಗ್‌ಬಾಸ್ ಮನೆ ಸೆಟ್ ನಿರ್ಮಾಣ ಮಾಡಲಾಗುತ್ತದೆ. ಪ್ರತಿದಿನ ನೂರಾರು ಜನ ಕೆಲಸ ಮಾಡುತ್ತಿರುತ್ತಾರೆ. ಆದರೆ ಅದೆಲ್ಲದಕ್ಕೂ ಈಗ ವಿಘ್ನ ಎದುರಾಗಿದೆ. ನಮಗೆ ಪ್ರತಿದಿನ ಬಿಗ್‌ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳು ಮಾತ್ರ ಕಾಣುತ್ತಾರೆ. ಆದರೆ ಅಷ್ಟು ದೊಡ್ಡ ಶೋ ಪ್ರಸಾರದ ಹಿಂದೆ ಸಾಕಷ್ಟು ಜನರ ಪರಿಶ್ರಮ ಇರುತ್ತದೆ. ಆಯೋಜರು ಕೋಟಿ ಕೋಟಿ ಹಣ ಸುರಿಯುತ್ತಾರೆ. ಅದಕ್ಕೆಲ್ಲಾ ಈಗ ಏಕಾಏಕಿ ವಿಘ್ನ ಎದುರಾಗಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ನೂರಾರು ಜನರಿಗೆ ಈಗ ಕೆಲಸ ಇಲ್ಲದಂತಾಗಿದೆ. ಪ್ರತಿ ವರ್ಷ 3 ತಿಂಗಳ ಕಾಲ ಬಿಗ್‌ಬಾಸ್ ಹಬ್ಬ ನಡೆಯುತ್ತದೆ. ಅದಕ್ಕೂ ಮುನ್ನವೇ ಕೆಲಸ ಶುರುವಾಗುತ್ತದೆ. ನೂರಾರು ಜನರಿಗೆ ನಾಲ್ಕೈದು ತಿಂಗಳು ಕೆಲಸ ಸಿಗುತ್ತದೆ. ಬಿಗ್‌ಬಾಸ್ ಶೋ ಎಷ್ಟು ಕಲರ್‌ಫುಲ್ ಆಗಿರುತ್ತೋ ಅಷ್ಟೇ ಕಲರ್‌ಫುಲ್ ಆಗಿ ಪ್ರತಿವರ್ಷ ಮನೆಯನ್ನು ನಿರ್ಮಿಸಲಾಗುತ್ತದೆ. ಒಮ್ಮೆ ಶೋ ಮುಗಿದ ಬಳಿಕ ಅದನ್ನು ಕೆಡವಿ ಮುಂದಿನ ವರ್ಷಕ್ಕೆ ಹೊಸ ರೀತಿಯಲ್ಲಿ ಮನೆಯನ್ನು ನಿರ್ಮಿಸಲಾಗುತ್ತದೆ.

ಈ ಬಾರಿ ದಸರಾ ಹಬ್ಬದ ಸಂಭ್ರಮದಲ್ಲೇ ಬಿಗ್‌ಬಾಸ್ 12 ಶೋ ಶುರುವಾಗಿತ್ತು. ಮೈಸೂರು ಅರಮನೆ ಶೈಲಿಯಲ್ಲಿ ಬಹಳ ಅದ್ಧೂರಿಯಾಗಿ, ಕರ್ನಾಟಕದ ಶ್ರೀಮಂತ ಇತಿಹಾಸ - ಸಂಸ್ಕೃತಿ ಸಾರುವ ರೀತಿ ಬಿಗ್‌ಬಾಸ್ ಮನೆ ಸೆಟ್ ನಿರ್ಮಾಣವಾಗಿತ್ತು. ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಯಕ್ಷಗಾನ, ದಸರಾ ಆನೆ, ಡೊಳ್ಳು ಕುಣಿತ, ಹಂಪಿ ಕಲ್ಲಿನ ರಥ ಸೇರಿದಂತೆ ಸಾಕಷ್ಟು ಅಂಶಗಳು ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಮೇಳೈಸಿತ್ತು. ಈ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಒಂದು ಅಂದಾಜಿನ ಪ್ರಕಾರ ಬಿಗ್‌ಬಾಸ್ ಸೆಟ್ ನಿರ್ಮಾಣಕ್ಕೆ 5 ಕೋಟಿ ರೂ.ಗೂ ಅಧಿಕ ವೆಚ್ಚ ತಗುಲುತ್ತದೆ. ಬಿಗ್‌ಬಾಸ್ ಮನೆ ಸೆಟ್ ಹೆಚ್ಚು ಕಮ್ಮಿ 10 ರಿಂದ 15 ಗುಂಟೆ ಜಾಗದಲ್ಲಿ ನಿರ್ಮಾಣವಾಗುತ್ತದೆ. ಅದರ ಸುತ್ತಾ ಅಂದಾಜು 2 ಎಕರೆ ಜಾಗ ಬೇಕು. ಅಲ್ಲೇ ಎಡಿಟಿಂಗ್ ಸೂಟ್, ಸ್ಟೇಜ್ ಅದೂ ಇದೂ ಅಂತ ದೊಡ್ಡ ಸೆಟಪ್ ಬೇಕು. ಎಲ್‌ಇಡಿ ಸ್ಕ್ರೀನ್ ಸೇರಿದಂತೆ ಎಲ್ಲವನ್ನು ಖರೀದಿಸಬೇಕು. ಒಂದಷ್ಟು ಸೆಟ್ ಪ್ರಾಪರ್ಟಿ ಎಂಡಮಾಲ್ ಬಳಿ ಇರುತ್ತದೆ. ಇನ್ನುಳಿದಿದ್ದನ್ನು ಹೊಸದಾಗಿ ಖರೀದಿಸಿ ಬಳಸಬೇಕು.

ಸದ್ಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಹಾಗೂ ತಂತ್ರಜ್ಞರು ವಾಸ್ತವ್ಯ ಹೂಡಿದ್ದಾರೆ. ಅಲ್ಲಿ ಕೂಡ ಸ್ಪರ್ಧಿಗಳಿಗೆ ಕಠಿಣ ನಿಯಮ ಮುಂದುವರೆದಿದೆ. ಮತ್ತೊಂದು ಕಡೆ ಜಾಲಿವುಡ್ ಸ್ಟುಡಿಯೋ ಮ್ಯಾಜೇನ್‌ಮೆಂಟ್ ಹಾಗೂ ಬಿಗ್‌ಬಾಸ್ ಆಯೋಜಕರು ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಕೋರ್ಟ್ ಆದೇಶದ ಬಳಿಕ ಬಿಗ್‌ಬಾಸ್ ಕಥೆ ಏನಾಗುತ್ತದೆ? ಎಂದು ಗೊತ್ತಾಗುತ್ತಿದೆ.

More from Filmibeat

English summary
Bigg Boss Kannada 12 Hit by Pollution Row; Jollywood Studio Locked Down
Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X