For Quick Alerts
  ALLOW NOTIFICATIONS  
  For Daily Alerts

  ನಟಿ-ನಿರ್ಮಾಪಕಿ ಶ್ರುತಿ ನಾಯ್ಡು ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಹೇಗಿತ್ತು ಗೊತ್ತಾ?

  |
  ಎಲ್ಲರನ್ನೂ ಒಂದೇ ಸೂರಿನಡಿ ಸೇರಿಸಿದ ಶೃತಿ ನಾಯ್ಡು | Shruti Naidu | Sankrantifestival | filmibeat kannada

  ಮಕರ ಸಂಕ್ರಾಂತಿ ಸಂಭ್ರಮ ರಾಜ್ಯದಲ್ಲಿ ಜೋರಾಗಿತ್ತು. ಅದರಲ್ಲೂ ಸೆಲೆಬ್ರಿಟಿಗಳ ಮನೆಯಲ್ಲಿ ಹಬ್ಬಗಳ ಸಂಭ್ರಮ ಕೇಳಬೇಕಾ. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಅದ್ದೂರಿಯಾಗಿ ಮಕರ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಕಿರುತೆರೆಯ ಸ್ಟಾರ್ ನಿರ್ಮಾಪಕಿ ಮತ್ತು ನಟಿ ಶ್ರುತಿ ನಾಯ್ಡು ಮನೆಯಲ್ಲಿಯೂ ಸಂಕ್ರಾಂತಿ ಸಡಗರ ಜೋರಾಗಿತ್ತು.

  ನಟಿ ಶ್ರುತಿ ನಾಯ್ಡು ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಂಕ್ರಾಂತಿ ಆಚರಿಸಿದ ಶ್ರುತಿ ಕಿರುತೆರೆಯ ಕಲಾವಿದರನ್ನು ಆಹ್ವಾನಿಸಿ ಹಬ್ಬ ಮಾಡಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳ ಕಲಾವಿದರು ಸಂಕ್ರಾಂತಿ ಹಬ್ಬದಲ್ಲಿ ಭಾಗಿಯಾಗಿದ್ದರು.

  ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಶ್ರುತಿ ನಾಯ್ಡುಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಶ್ರುತಿ ನಾಯ್ಡು

  ವೀಣಾ ಸುಂದರ್ ದಂಪತಿ, ಅಂಬುಜಾ, ಬ್ರಹ್ಮಗಂಟು ಧಾರಾವಾಹಿಯ ಕಲಾವಿದರು, ನಟಿ ಪ್ರಮೋದ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಕಿರುತೆರೆಯ ಕಲಾವಿದರು ಒಂದೇ ಸೂರಿನಡಿ ಸೇರಿದ್ದರು. ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ನಟಿ ಶ್ರುತಿ ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದಾರೆ.

  ಪ್ರೀಮಿಯರ್ ಪದ್ಮಿನಿ ಸಿನಿಮಾ ನಿರ್ಮಾಣದ ಮೂಲಕ ಶ್ರುತಿ ನಾಯ್ಡು ಸ್ಯಾಂಡಲ್ ವುಡ್ ನಲ್ಲಿಯೂ ಅದೃಷ್ಟ ಪರೀಕ್ಷೆಗೆ ನಿಂತು ಗೆದ್ದಿದ್ದರು. ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಇನ್ಮುಂದೆ ಸಾಕಷ್ಟು ಸಿನಿಮಾಗಳ ನಿರ್ಮಾಣ ಮಾಡುವ ಕನಸು ಕೂಡ ಶ್ರುತಿ ನಾಯ್ಡು ಅವರಿಗೆ.

  Read more about: shruthi naidu marketing
  English summary
  Kannada Produser come Actress Shruthi Naidu celebrated Sankranthi festival. Small screen artist are participated in Sankranthi at Shruthi Naidu house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X