'ಗಿಚ್ಚಿ ಗಿಲಿ ಗಿಲಿ'ಯಲ್ಲಿ ಬರುವ ಅಮೃತಾ ಉಪ್ಪಾರ್‌ ಯಾರು ಗೊತ್ತೆ..?

By ಪ್ರಿಯಾ ದೊರೆ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಸಾಕಷ್ಟು ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ರಂಜಿಸಿದೆ. 'ರಾಜಾ-ರಾಣಿ', 'ನಮ್ಮಮ್ಮ ಸೂಪರ್‌ ಸ್ಟಾರ್‌', 'ಮಜಭಾರತ' ಸೇರಿದಂತೆ ಹಲವು ಕಾರ್ಯಕ್ರಮಗಳು ರಂಜಿಸಿವೆ. ಹಲವಾರು ಕಾರ್ಯಕ್ರಮಗಳನ್ನು ಹಾಗೂ ರಿಯಾಲಿಟಿ ಶೋಗಳನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅವುಗಳಲ್ಲಿ ಹೆಚ್ಚು ಜನಪ್ರಿಯ ಕಾರ್ಯಕ್ರಮ ಎಂದರೆ, ಗಿಚ್ಚಿ ಗಿಲಿ ಗಿಲಿ.

ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಇಂದಿಗೂ ಫೇಮಸ್‌ ಆಗಿರುವಂತಹ ಕಾರ್ಯಕ್ರಮ. ಈಗಾಗಲೇ ಮೊದಲ ಸೀಸನ್ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ಈಗ ಎರಡನೇ ಸೀಸನ್ ಕೂಡ ಪ್ರಸಾರ ಕಾಣುತ್ತಿದೆ. ಮೊದಲ ಸೀಸನ್‌ನಂತೆಯೇ ಈಗಲೂ ಪ್ರೇಕ್ಷಕರು 'ಗಿಚ್ಚಿ ಗಿಲಿ ಗಿಲಿ' ಶೋ ನೋಡಲು ವೀಕೆಂಡ್‌ಗಾಗಿ ಕಾಯುತ್ತಿರುತ್ತಾರೆ. ಇನ್ನು ಮೊದಲ ಸೀಸನ್‌ ಮುಗಿದ ಮೇಲೆ 'ಗಿಚ್ಚಿ ಗಿಲಿ ಗಿಲಿ' ಎರಡನೇ ಸೀಸನ್ ಅನ್ನು ಕೂಡ ಪ್ರಾರಂಭ ಮಾಡಲಾಗಿದೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ನಗುವಿನ ರಥವನ್ನು ಎಳೆದಿದ್ದರು.

Profile and Biography of Gicchi Gili Gili Reality show contestant Amrutha Uppar

ಈ ಕಾರ್ಯಕ್ರಮವನ್ನು ನಿರಂಜನ್ ದೇಶಪಾಂಡೆ ನಿರೂಪಕರಾಗಿ ಮುಂದುವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಸಾಧುಕೋಕಿಲ ಹಾಗೂ ಖ್ಯಾತ ನಟಿ ಶೃತಿ ಅವರು ತೀರ್ಪುಗಾರರಾಗಿದ್ದಾರೆ. 'ಗಿಚ್ಚಿ ಗಿಲಿ ಗಿಲಿ' ಸೀಸನ್‌ ಒಂದರಲ್ಲಿ ಭಾಗವಹಿಸಿದ್ದ ನಿವೇದಿತಾ ಗೌಡ, ಜಗ್ಗಪ್ಪ, ಪ್ರಶಾಂತ್, ಚಂದ್ರಪ್ರಭಾ ಅವರೇ ಮುಂದುವರೆದಿದ್ದು, ಇವರ ಜೊತೆಗೆ ಹೊಸಬರು ಕೂಡ ಇದ್ದಾರೆ. ಇದರಲ್ಲಿ, ವಿನೋದ್‌ ಗೊಬ್ರಗಾಲ, ಸುಷ್ಮಿತಾ ಸೇರಿದಂತೆ ಎಲ್ಲರೂ ಅದ್ಭುತವಾಗಿ ನಟಿಸುತ್ತಿದ್ದಾರೆ.

ಇನ್ನು 'ಗಿಚ್ಚಿ ಗಿಲಿ ಗಿಲಿ' ಕಾರ್ಯಕ್ರಮದಲ್ಲಿ ಅಮೃತಾ ಉಪ್ಪಾರ್‌ ಅವರು ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರು ಅಮೃತಾ ಉಪ್ಪಾರ್‌ ಅವರ ಕಾಮಿಡಿ ನೋಡಲು ಕಾಯುತ್ತಿರುತ್ತಾರೆ. ಹೀಗಾಗಿ ಕಳೆದ ಎರೆಡು ವಾರದಿಂದ ಅಮೃತಕ್ಕಾಗಿ ಹೋರಾಟ ಎಂದು ವಿನೋದ್‌ ಗೊಬ್ರಗಾಲ ಹಾಗೂ ಚಂದ್ರಾಪ್ರಭಾ ಇಬ್ಬರೂ ಟಾಸ್ಕ್‌ಗಳನ್ನು ಆಡುತ್ತಿದ್ದಾರೆ. ಪ್ರೇಕ್ಷಕರು ಕೂಡ ಇದನ್ನು ಇಷ್ಟ ಪಡುತ್ತಿದ್ದಾರೆ. ಹಾಗಾಗಿ ಅಮೃತಾ ಉಪ್ಪಾರ್‌ ಅವರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ.

ಅಮೃತಾ ಉಪ್ಪಾರ್‌ ಅವರು ಮೂಲತಃ ಬಳ್ಳಾರಿ ಅವರು. ಸದ್ಯ ಅಮೃತಾ ಉಪ್ಪಾರ್‌ ಅವರು ನೆಲೆಸಿರುವುದು ಬೆಂಗಳೂರಿನಲ್ಲಿ. ಅಮೃತಾ ಉಪ್ಪಾರ್ ಅವರು, ಸೆಂಟ್‌ ಜೋಸೆಫ್ ಗರ್ಲ್ಸ್‌ ಹೈಯರ್ ಸೆಕೆಂಡರಿ ಅಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಬಳಿಕ ದಯಾನಂದ್‌ ಸಾಗರ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಅನ್ನು ಓದಿದ್ದಾರೆ. ಪದವಿ ಪಡೆದ ಬಳಿಕ ಅಮೃತಾ ಉಪ್ಪಾರ್‌ ಅವರಿಗೆ ಮಾಡೆಲ್‌ ಆಗುವ ಆಸೆ ಇತ್ತಂತೆ. ಹಾಗಾಗಿ ಓದು ಮುಗಿದ ಬಳಿಕ ಮಾಡೆಲ್‌ ಆಗಿ ಹಲವು ಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶಾರ್ಟ್‌ ಮೂವಿಗಳಲ್ಲೂ ನಟಿಸಿದ್ದಾರೆ. ಹಾರರ್‌ ಶಾರ್ಟ್‌ ಸೀರೀಸ್ ಆದ 'ವಾಮಿಕಾ' ಎಂಬ ಸಿರೀಸ್‌ನಲ್ಲಿ ಪಾವನಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಸಿನಿಮಾದಲ್ಲಿ ನಟಿಸಿದ್ದು, ಕರ್ತ ಕರ್ಮಾ ಕ್ರಿಯಾದಲ್ಲಿ ನಟಿಸಿದ್ದಾರೆ.

Profile and Biography of Gicchi Gili Gili Reality show contestant Amrutha Uppar

ಸಿರಿ ಕನ್ನಡ ವಾಹಿನಿಯ ಹಲವು ರಿಯಾಲಿಟಿ ಶೋಗಳಲ್ಲಿ ಆಂಕರ್‌ ಆಗಿ ಕಾಣಿಸಿಕೊಂಡಿದ್ದಾರೆ. ಸಿರಿಗನ್ನಡದ ಕಾಮಿಡಿ ಶೋ ಅನ್ನು ಹೋಸ್ಟ್‌ ಮಾಡಿದ್ದರು. ಬಳಿಕ ಸಿರಿ ಕನ್ನಡದಲ್ಲೇ ಮೂಡಿ ಬಂದ 'ನಾರಿಗೊಂದು ಸೀರೆ' ಹಾಗೂ 'ದಸರಾ ಸಂಭ್ರಮ' ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಸುವರ್ಣ ಸೂಪರ್‌ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಅಮೃತಾ ಉಪ್ಪಾರ್ ಅವರು ಕ್ಲಾಸಿಕಲ್‌ ಸಿಂಗರ್‌ ಕೂಡ ಹೌದು. ಇವಿಷ್ಟು ಅಮೃತಾ ಉಪ್ಪಾರ್ ಅವರ ಬಗೆಗಿನ ಮಾಹಿತಿ.

More from Filmibeat

English summary
Profile and Biography of Gicchi Gili Gili Reality show contestant Amrutha Uppar. Here Is details about Actress Personal Life and Career. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X