»   » 'ಕಲರ್ಸ್ ಸೂಪರ್' ವಾಹಿನಿಯ ಸೂಪರ್ ಸ್ಪೆಷಲ್ ಕಾರ್ಯಕ್ರಮಗಳೇನು.?

'ಕಲರ್ಸ್ ಸೂಪರ್' ವಾಹಿನಿಯ ಸೂಪರ್ ಸ್ಪೆಷಲ್ ಕಾರ್ಯಕ್ರಮಗಳೇನು.?

Posted By:
Subscribe to Filmibeat Kannada

''ಕಲರ್ಸ್ ಕನ್ನಡ' ಕಡೆಯಿಂದ ಎರಡನೇ ಮನರಂಜನಾ ಚಾನೆಲ್ ಶುರುವಾಗುತ್ತಿದೆ. ವಯಕಾಮ್ 18 ಸಾರಥ್ಯದಲ್ಲಿ 'ಕಲರ್ಸ್ ಸೂಪರ್' ಆರಂಭವಾಗುತ್ತಿದೆ'' ಎಂಬ ಸುದ್ದಿ ಬಹಿರಂಗವಾದಾಗ, ಈ ವಾಹಿನಿಯಲ್ಲಿ ಏನಿಲ್ಲಾ ಕಾರ್ಯಕ್ರಮಗಳು ಪ್ರಸಾರವಾಗಬಹುದು ಎಂಬ ಕುತೂಹಲ ವೀಕ್ಷಕರಲ್ಲಿತ್ತು.

ಆ ಕುತೂಹಲಕ್ಕೆ ಈಗ ನಾವು ಬ್ರೇಕ್ ಹಾಕಲಿದ್ದೇವೆ. ಸೇಮ್ ಟು ಸೇಮ್ 'ಕಲರ್ಸ್ ಕನ್ನಡ' ರೀತಿಯಲ್ಲೇ 'ಕಲರ್ಸ್ ಸೂಪರ್' ವಾಹಿನಿಯಲ್ಲೂ ಧಾರಾವಾಹಿ, ರಿಯಾಲಿಟಿ ಶೋಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ['ಕಲರ್ಸ್' ಕಡೆಯಿಂದ ಕನ್ನಡಕ್ಕೆ ಮತ್ತೊಂದು ಕಲರ್ ಫುಲ್ ವಾಹಿನಿ.!]

ಪೌರಾಣಿಕ, ಫ್ಯಾಂಟಸಿ, ಸೂಪರ್ ನ್ಯಾಚುರಲ್, ರಿಯಾಲಿಟಿ ಶೋ, ರೋಮ್ಯಾಂಟಿಕ್ ಕಾಮಿಡಿ, ಹೊಚ್ಚ ಹೊಸ ಚಲನಚಿತ್ರಗಳು 'ಕಲರ್ಸ್ ಸೂಪರ್' ನಲ್ಲಿ ಮೂಡಿಬರಲಿದೆ. ಆ ಎಲ್ಲಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ....

ಫ್ಯಾಂಟಸಿ ಧಾರಾವಾಹಿ - 'ಸರ್ಪ ಸಂಬಂಧ'

ಇದು ರಾಗಿಣಿ ಎಂಬ ನವ ವಧುವಿನ ಕಥೆ. ಪ್ರತಿ ಹುಣ್ಣಿಮೆಯಂದು ತನ್ನ ಗಂಡ ಹಾವಿನ ರೂಪದಲ್ಲಿ ಬದಲಾದಾಗ, ರಾಗಿಣಿ ಬದುಕಿನಲ್ಲಿ ನಡೆಯುವ ಘಟನೆಗಳೇ ಈ ಧಾರಾವಾಹಿಯ ಕಥಾನಕ.

ಸಾಮಾಜಿಕ, ಪೌರಾಣಿಕ ಧಾರಾವಾಹಿ - 'ಗಿರಿಜಾ ಕಲ್ಯಾಣ'

ಹದಿನೆಂಟನೇ ಶತಮಾನದ ಕಥೆ ಇದು. ಗಿರಿಜೆ ಎಂಬ ಶಿವಭಕ್ತೆ ಆ ಊರಿನ ದುಷ್ಟರಾಜ ಅಮರದೇವನಿಗೆ ಸವಾಲೊಡ್ಡುತ್ತಾಳೆ. ಲೋಕಕಲ್ಯಾಣಕ್ಕಾಗಿ ಅವಳು ಮಾಡುವ ಕಾರ್ಯಗಳಿಗೆ ಸ್ವತಃ ಶಿವ-ಪಾರ್ವತಿಯರೇ ನೆರವಾಗುವ ಪೌರಾಣಿಕ ಕಥೆ ಹೊಂದಿರುವ ಧಾರಾವಾಹಿ ಇದು.

ರೋಮ್ಯಾಂಟಿಕ್ ಕಾಮಿಡಿ - 'ಮಂಗಳೂರು ಹುಡ್ಗಿ ಹುಬ್ಳಿ ಹುಡ್ಗ'

ಮಂಗಳೂರಿನ ಹುಡುಗಿಯ ಕುಟುಂಬ ಹಾಗೂ ಹುಬ್ಬಳ್ಳಿ ಹುಡುಗನ ಕುಟುಂಬ ಬೆಂಗಳೂರಿಗೆ ಬಂದು ಮನೆ ಬಾಡಿಗೆ ಪಡೆಯುತ್ತಾರೆ. ಈ ಎರಡೂ ಕುಟುಂಬಗಳ ಮಧ್ಯೆ ಭಾಷೆ, ಆಚಾರ, ವಿಚಾರಗಳ ವಿಷಯದಲ್ಲಿ ನಡೆಯುವ ಗೊಂದಲಗಳೇ ಈ ತಮಾಷೆಯ ಧಾರಾವಾಹಿಯ ಕಥಾವಸ್ತು.

ಆಕ್ಷನ್ ರಿಯಾಲಿಟಿ ಶೋ - 'ಚಾಂಪಿಯನ್'

ರಾಜ್ಯದ ವಿವಿದೆಡೆಯಿಂದ ಬಂದ ಹುಡುಗಿಯರು ದೇಶದ ವಿವಿಧ ಜಾಗಗಳಲ್ಲಿ 'ತಾವು ಹುಟ್ಟು ಚಾಂಪಿಯನ್' ಎಂದು ಸಾಬೀತು ಮಾಡಲು ಹೆಣಗಾಡುವ ರಿಯಾಲಿಟಿ ಶೋ ಇದು.

ಸೂಪರ್ ನ್ಯಾಚುರಲ್ - 'ನಾ ನಿನ್ನ ಬಿಡಲಾರೆ'

ನಂದಿನಿ ಎಂಬ ಹುಡುಗಿ ತನ್ನ ಪ್ರಿಯತಮ ಅಕ್ಷಯ್ ಜೊತೆ ಮದುವೆ ಆಗುತ್ತಾಳೆ. ಕಾಂಚನಾ ಎಂಬ ಹುಡುಗಿಯ ಪ್ರವೇಶವಾದ ಮೇಲೆ ಆಕೆಯ ಜೀವನ ಅಲ್ಲೋಲ ಕಲ್ಲೋಲವಾಗುತ್ತದೆ. ಕಾಂಚನಾಳನ್ನು ತಡೆಯುವುದು ಸಾಧ್ಯವೇ ಇಲ್ಲ, ಯಾಕಂದ್ರೆ, ಕಾಂಚನಾ ಸತ್ತು ವರ್ಷಗಳೇ ಉರುಳಿರುತ್ತದೆ ಎಂಬ ಸತ್ಯ ನಂದಿನಿಯನ್ನು ದಿಗ್ಭ್ರಾಂತಳನ್ನಾಗಿ ಮಾಡುತ್ತದೆ.

ಡ್ರಾಮಾ - 'ಬಂಗಾರಿ'

ಹುಡುಗಿಯೊಬ್ಬಳ ಮದುವೆ ನಿಶ್ಚಯವಾಗಿರುತ್ತದೆ. ಸಣ್ಣ ಮುಗ್ಧ ಹೆಣ್ಣು ಮಗುವೊಂದು ಅಕಸ್ಮಾತ್ತಾಗಿ ಆಕೆಯನ್ನು ತನ್ನ ತಾಯಿ ಎಂದು ಕರೆಯುತ್ತಾಳೆ. ಮದುವೆಗೆ ಸಿದ್ಧಳಾಗಿರುವ ಹುಡುಗಿಯ ಇಕ್ಕಟ್ಟಿನ ಪರಿಸ್ಥಿತಿ ಈ 'ಬಂಗಾರಿ'.

ಪ್ರೇಮಕಥೆ - 'ಅನುರಾಗ'

ರಸ್ತೆ ಅಪಘಾತಕ್ಕೊಳಗಾದ ಹುಡುಗಿಯ ರಕ್ಷಣೆಗೆ ಗಾಯಕನೊಬ್ಬ ಧಾವಿಸುತ್ತಾನೆ. ಆದರೆ ಆಕೆಯ ಮನೆಯವರು ಅವನನ್ನು ಆಕೆಯ ಪತಿ ಎಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲಿಂದ ಶುರುವಾಗುವ ಕಥೆಯೇ 'ಅನುರಾಗ'.

ಪ್ರಚಾರ ರಾಯಭಾರಿ ಆಗಿ ಯಶ್.!

'ಕಲರ್ಸ್ ಸೂಪರ್'ಗಾಗಿ ಕರ್ನಾಟಕದ 179 ನಗರ ಮತ್ತು ಪಟ್ಟಣಗಳಲ್ಲಿ ವಯಕಾಮ್ 18 ಭಾರಿ ಪ್ರಚಾರಾಂದೋಲನ ನಡೆಸಲಿದೆ. ಜುಲೈ 24 ರಂದು ಆರಂಭವಾಗಲಿರುವ 'ಕಲರ್ಸ್ ಸೂಪರ್' ವಾಹಿನಿಯ ಪ್ರಚಾರ ರಾಯಭಾರಿ ಆಗಿ ರಾಕಿಂಗ್ ಸ್ಟಾರ್ ಯಶ್ ಆಯ್ಕೆ ಆಗಿರುವುದು ಮತ್ತೊಂದು ವಿಶೇಷ.

English summary
The 2nd Kannada GEC of Colors Kannada Channel is all set to be launched on July 24th. The Channel has been named as 'Colors Super'. Here is the list of Programs which will be aired in 'Colors Super'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada