ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ ; ಕಾಗೆ-ನರಿ ಕಥೆ, ಈ ಸಲ ಬಿಗ್ ಬಾಸ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್

ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು. ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಪ್ರಮುಖವಾದ ಕಾರಣ ಸುದೀಪ್. ಕಳೆದ ಹನ್ನೊಂದು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು...

ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ಬಿಗ್ ಬಾಸ್‌ಗೋಸ್ಕರ ಬೆವರು ಸುರಿಸಿದ್ಧಾರೆ.

Promo Breakdown Kiccha Sudeep Reveals the Crow and Fox Twist for Bigg Boss Kannada 12

ಇನ್ನು, ಸುದೀಪ್ ಅವರಿಗೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ.

ಇಂಥಾ ಸುದೀಪ್ ಈ ವರ್ಷ ಬಿಗ್ ಬಾಸ್" ಮನೆಗೆ ಮರಳಿದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈ ಬಾರಿಯ "ಬಿಗ್ ಬಾಸ್" ಸುದೀಪ್ ಅವರ ಪಾಲಿಗೆ ಹೊಸ ಅಧ್ಯಾಯ. ಹಳೆಯ ಮುನಿಸು ಮರೆತು ಸುದೀಪ್ ಮತ್ತೆ ಹೊಸ ಹುರುಪು.. ಹೊಸ ಉತ್ಸಾಹದ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಹಿನ್ನೆಲೆ ಕಾರ್ಯಕ್ರಮ ಹೇಗಿರಬಹುದು ಎನ್ನುವ ಕುತೂಹಲ ಇದ್ದೇ ಇದೆ. ಈ ಕುತೂಹಲಕ್ಕೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆಯಾದರೂ ಸದ್ಯ "ಬಿಗ್ ಬಾಸ್ " ಕಾರ್ಯಕ್ರಮದ ಹೊಸ ಪ್ರೋಮೊ ನಿರೀಕ್ಷೆಯನ್ನು ಮೂಡಿಸಿದೆ.

ಹೌದು, ''ಬಿಗ್ ಬಾಸ್'' ಆರಂಭಕ್ಕೆ ಕೆಲವೇ ದಿನಗಳಿರುವಾಗ ಸದ್ಯ ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆಯಾಗಿದೆ. ಬಿಡುಗಡೆಯಾದ ಈ ಪ್ರೋಮೋದಲ್ಲಿ ಕಾಗೆ ಮತ್ತು ನರಿಯ ಕತೆಯನ್ನು ಸುದೀಪ್ ಹೇಳಿದ್ದಾರೆ. ಕಾಗೆ ಅಜ್ಜಿಯಿಂದ ವಡೆಯೊಂದನ್ನು ಪಡೆದು, ಅದನ್ನು ಬಾಯಲ್ಲಿ ಕಚ್ಚಿಕೊಂಡು ಇನ್ನೇನು ತಿನ್ನಬೇಕು ಎಂದಿದ್ದಾಗ ನರಿ ಬಂದು, ಕಾಗೆ, ನೀನು ಚೆನ್ನಾಗಿ ಹಾಡುತ್ತೀಯ, ನನಗಾಗಿ ಹಾಡು ಹಾಡು ಎನ್ನುವ ಕಥೆಯನ್ನು ಹೇಳಿರುವ ಸುದೀಪ್ ಈ ಕಥೆಯ ಕ್ಲೈಮ್ಯಾಕ್ಸ್ ಬದಲಿಸಿದ್ದಾರೆ. ಈ ವರೆಗೆ 11 ಬಿಗ್​​ಬಾಸ್ ಸೀಸನ್ ಪ್ರಸಾರ ಆಗಿದೆ. ನಮಗೆ ಬಿಗ್​​ಬಾಸ್ ಅರ್ಥವಾಗಿದೆ, ಯಾವಾಗ ಏನಾಗುತ್ತದೆ, ಹೇಗೆ ನಡೆಯುತ್ತದೆ ಎಲ್ಲವೂ ಗೊತ್ತಿದೆ, ನಾವು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಎಲ್ಲವೂ ನಡೆಯುತ್ತದೆ ಎಂದುಕೊಂಡಿದ್ದರೆ ಅದು ತಪ್ಪು ಎಂದು ಹೇಳಿದ್ದಾರೆ.

promo-breakdown-kiccha-sudeep-reveals-the-crow-and-fox-twist-for-bigg-boss-kannada-12

ಈ ಮೂಲಕ ಈ ಬಾರಿಯ ''ಬಿಗ್ ಬಾಸ್'' ನಾವು ಅಥವಾ ನೀವು ಅಂದುಕೊಂಡಂತೆ ಅಲ್ಲ ಎನ್ನುವ ಸುಳಿವನ್ನು ಸುದೀಪ್ ನೀಡಿದ್ದಾರೆ. ಈ ಬಾರಿಯ ಮನೆಯ ಥೀಮ್ ಕುರಿತು ಕೂಡ ಪ್ರಶ್ನೆಯನ್ನು ಹುಟ್ಟು ಹಾಕಿದ್ದಾರೆ. ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಸದ್ಯ ''ಬಿಗ್ ಬಾಸ್‌'' ಕಾರ್ಯಕ್ರಮದ ಈ ನಯಾ ಪ್ರೋಮೋ ಹಲವರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ವೈರಲ್ ಕೂಡ ಆಗಿದೆ. ಇನ್ನುಳಿದಂತೆ ಈ ಬಾರಿಯ ''ಬಿಗ್ ಬಾಸ್'' ಸೆಪ್ಟೆಂಬರ್ 28ರಂದು ಸಂಜೆ 6ಕ್ಕೆ ಶುಭಾರಂಭವಾಗಲಿದೆ. ಈ ಬಾರಿ ಕೂಡ ಎಂದಿನಂತೆ ಹಲವರ ಹೆಸರುಗಳು ಸದ್ಯ ಅಂತೆ ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದ್ದು ಯಾರೆಲ್ಲಾ ಸ್ಫರ್ಧಿಯಾಗಿ ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನುವುದಕ್ಕೆ ಉತ್ತರ ಅವತ್ತೇ ಅಂದರೆ ಸೆಪ್ಟೆಂಬರ್ 28ರಂದು ಸಿಗಲಿದೆ.

More from Filmibeat

English summary
Get ready for the unexpected! Kichcha Sudeep teases a game-changing season of Bigg Boss Kannada 12 in a viral new promo. Find out what the "crow and fox" story reveals and why fans are so excited.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X