»   » ಪರಮೇಶ್ವರ್ ಗುಂಡ್ಕಲ್ ಗಮನಕ್ಕೆ ಬಾರದೆ 'ಪ್ರೋಮೋ' ಬಿಡುಗಡೆ ಆಗಿದೆ.!

ಪರಮೇಶ್ವರ್ ಗುಂಡ್ಕಲ್ ಗಮನಕ್ಕೆ ಬಾರದೆ 'ಪ್ರೋಮೋ' ಬಿಡುಗಡೆ ಆಗಿದೆ.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೇತೃತ್ವದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ರಿಯಾಲಿಟಿ ಶೋ ಬರುವ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವೇ ವರದಿ ಮಾಡಿದ್ವಿ.

ಇದೇ ಶೋಗೆ ಸಂಬಂಧ ಪಟ್ಟ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ...' ಹಾಡನ್ನು ಗುನುಗುತ್ತಾ ಪುಟ್ಟ ಮಗಳನ್ನು ಮಲಗಿಸುವ ಪುನೀತ್ ರವರ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದೆ. ಮೊದಲ ಪ್ರೋಮೋ ಔಟ್ ಆಗಿದ್ದರೂ, ಶೋ ಹೆಸರು ಹಾಗೂ ಕಾನ್ಸೆಪ್ಟ್ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಸುಳಿವು ನೀಡಿಲ್ಲ.

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಗೆ ಪವರ್ ಸ್ಟಾರ್ ಪುನೀತ್ ನಿರೂಪಕ!

ನೂತನ ಶೋ ಬಗ್ಗೆ ಸಸ್ಪೆನ್ಸ್ ಮೇನ್ಟೇನ್ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ತಂಡ, ಕಲಾವಿದರಿಗೂ ಗುಟ್ಟು ಬಿಟ್ಟು ಕೊಡದೆ ಎರಡನೇ ಪ್ರೋಮೋ ಶೂಟ್ ಮಾಡಿದ್ದಾರೆ. ಎಲ್ಲಕ್ಕಿಂತ ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಸ್ವತಃ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಗಮನಕ್ಕೆ ತಾರದೆ ಕಾರ್ಯಕ್ರಮದ ಎರಡನೇ ಪ್ರೋಮೋ ಅಪ್ಲೋಡ್ ಮಾಡಲಾಗಿದೆ.! ಮುಂದೆ ಓದಿರಿ....

ನಾಲ್ಕು ವರ್ಷಗಳ ಬಳಿಕ ಕಿರುತೆರೆ ಕಡೆ ಪುನೀತ್

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನ ಯಶಸ್ವಿಯಾಗಿ ನಿರೂಪಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದೀಗ ನಾಲ್ಕು ವರ್ಷಗಳ ಬಳಿಕ ಕಿರುತೆರೆ ಕಡೆ ಮುಖ ಮಾಡಿದ್ದಾರೆ.

'ಬಿಗ್ ಬಾಸ್' ಪ್ರೋಮೋದಲ್ಲಿದೆಯಂತೆ ಒಂದು ಸುಳಿವು, ಏನದು?

ಬೆಸೆದ ಬಂಧಗಳನ್ನು ಗಟ್ಟಿ ಮಾಡುವ ಹೊಸ ಶೋ

ಇದು 'ಬೆಸೆದ ಬಂಧಗಳನ್ನು ಗಟ್ಟಿ ಮಾಡುವ ಹೊಸ ಶೋ' ಅಂತ ಮೊದಲ ಪ್ರೋಮೋದಲ್ಲಿ ಹೇಳಲಾಗಿದೆ. ಅಷ್ಟು ಬಿಟ್ಟರೆ, ಕಾರ್ಯಕ್ರಮದ ಹೆಸರಾಗಲಿ ಇನ್ನಿತರ ಮಾಹಿತಿಯನ್ನಾಗಲಿ ಕಲರ್ಸ್ ಕನ್ನಡ ವಾಹಿನಿ ಬಿಟ್ಟುಕೊಟ್ಟಿಲ್ಲ. (ಮೊದಲ ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ)

ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

ಎರಡನೇ ಪ್ರೋಮೋ ಬಿಡುಗಡೆ

ಸದ್ಯ ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. 'ಯಾವ ಕಾರ್ಯಕ್ರಮಕ್ಕಾಗಿ ಪ್ರೋಮೋ ಶೂಟ್ ಮಾಡುತ್ತಿದ್ದೇವೆ ಅಂತ ಸ್ವತಃ ಕಲರ್ಸ್ ಕುಟುಂಬದ ಕಲಾವಿದರಿಗೂ ಗೊತ್ತಾಗದ ಹಾಗೆ ಪ್ರೋಮೋವನ್ನ ಚಿತ್ರೀಕರಿಸಲಾಗಿದೆ.

'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

ಬಿಸಿನೆಸ್ ಹೆಡ್ ಗಮನಕ್ಕೆ ತಾರದೆ ಪ್ರೋಮೋ ಬಿಡುಗಡೆ

ಕಲಾವಿದರಿಗೆ ಮಾಹಿತಿ ನೀಡದೆ ಪ್ರೋಮೋ ಚಿತ್ರೀಕರಿಸಿದಂತೆ, ಬಿಸಿನೆಸ್ ಹೆಡ್ ಗಮನಕ್ಕೆ ತಾರದೆ ಪ್ರೋಮೋ ಅಪ್ಲೋಡ್ ಮಾಡಲಾಗಿದೆ. ಹಾಗಂತ ಸ್ವತಃ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಫ್ಯಾಮಿಲಿ ಶೋ ಅನ್ನೋದು ಪಕ್ಕಾ

ಇದೀಗಷ್ಟೇ ಬಿಡುಗಡೆ ಆಗಿರುವ ಮೇಕಿಂಗ್ ಪ್ರೋಮೋ ನೋಡಿದರೆ, ಇದೊಂದು ಫ್ಯಾಮಿಲಿ ಶೋ ಅನ್ನೋದು ಪಕ್ಕಾ.

ಎರಡನೇ ಪ್ರೋಮೋ ನೋಡ್ಕೊಂಡ್ ಬನ್ನಿ...

ಕಲರ್ಸ್ ಕುಟುಂಬದ ಜೊತೆ ಪುನೀತ್ ರಾಜ್ ಕುಮಾರ್ ಇರುವ ಹೊಸ ರಿಯಾಲಿಟಿ ಶೋದ ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

English summary
Promo of Puneeth Rajkumar's new show in Colors Kannada Channel was uploaded without the knowledge of Parameshwar Gundkal, Business Head of Colors Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada