»   » ವೇಶ್ಯಾವಾಟಿಕೆ ಜಾಲ : ಕಿರುತೆರೆ ನಟಿ ಬಂಧನ

ವೇಶ್ಯಾವಾಟಿಕೆ ಜಾಲ : ಕಿರುತೆರೆ ನಟಿ ಬಂಧನ

Posted By:
Subscribe to Filmibeat Kannada
Prostitution racket busted : Telugu TV actress arrested
ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಓರ್ವ ಉದಯೋನ್ಮುಖ ತೆಲುಗು ಟಿವಿ ನಟಿ ಸೇರಿದಂತೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವೇಶ್ಯಾವಾಟಿಕೆ ಅಡ್ಡಾ ಮೇಲೆ ದಾಳಿ ಮಾಡಿದ ಬಂಜಾರಾ ಹಿಲ್ಸ್‌ ಪೊಲೀಸರು ಖ್ಯಾತ ಟಿವಿ ನಟಿ ಸೇರಿ ನಾಲ್ವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾಂಸ ದಂಧೆ ನಡೆಯುತ್ತಿದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಂಜಾರಾ ಹಿಲ್ಸ್ ಪೊಲೀಸರು ಯಲ್ಲಾರೆಡ್ಡಿಗುಡದಲ್ಲಿರುವ ಪ್ರಗತಿ ನಗರದಲ್ಲಿನ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಪುಷ್ಪಾಂಜಲಿ ಅಲಿಯಾಸ್ ಪುಷ್ಪಾ ಎಂಬ 22 ವರ್ಷದ ಟಿವಿ ನಟಿ ಮತ್ತು ಶ್ರೀಕಾಕುಲಂನ ಮತ್ತೊಬ್ಬ ನಹನಟಿ 24 ವರ್ಷದ ಸಪ್ನಾ ಎಂಬಾಕೆಯನ್ನು ಬಂಧಿಸಿದರು.

ಇವರಿಬ್ಬರ ಜೊತೆ ರಾಜು ಅಲಿಯಾಸ್ ರಾಜೇಶ್ ಎಂಬ ನಿರ್ಮಾಪಕನನ್ನೂ ತಮ್ಮ ವಶಕ್ಕೆ ಪೊಲೀಸರು ತೆಗೆದುಕೊಂಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲೋಕೇಶ್ ಎಂಬ ಪಿಂಪ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಯುವ ನಟಿಯರನ್ನು ಕರೆತರುವ ಕೆಲಸ ರಾಜು ಮಾಡುತ್ತಿದ್ದರೆ, ವಿಟರನ್ನು ಸೆಳೆಯುವ ಕೆಲಸ ಲೋಕೇಶ್ ಮಾಡುತ್ತಿದ್ದ.

ಟಿವಿ ಮತ್ತು ಸಿನೆಮಾದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ನಿರ್ಮಾಪಕ ರಾಜೇಶ್ ಯುವ ಮತ್ತು ಅಮಾಯಕ ನಟಿಯರನ್ನು ಈ ಜಾಲದಲ್ಲಿ ಎಳೆದುತರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಯುವ ನಟಿಯರನ್ನು ನಿರ್ಮಾಪಕರು ದುರ್ಬಳಸಿಕೊಳ್ಳುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.

ಕಳೆದ ವರ್ಷ ಬೆಂಗಳೂರಿನ ಲೊಟ್ಟೆಗೊಲ್ಲನಹಳ್ಳಿಯಲ್ಲಿ ನಡೆದ ದಾಳಿಯಲ್ಲಿ ಕನ್ನಡದ ಕಿರುತೆರೆ ನಟಿ ರೂಪಾ ಎಂಬಾಕೆಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದರು. ಆಕೆಯ ಜೊತೆ ಮೂವರು ನಿರೂಪಕಿಯರನ್ನು ಕೂಡ ಪೊಲೀಸರು ಬಂಧಿಸಿದ್ದರು.

English summary
An upcoming TV artist Pusha has been arrested along with another side artist and a producer by Banjara Hills police in Hyderabad on Sunday, who were involved in prostitution. The producer Rajesh used to lure innocent artists with job offer and drag them into prostitution.
Please Wait while comments are loading...