ಪಬ್ಲಿಕ್ ಟಿವಿ ಕನ್ನಡ ಚಾನಲ್ ಈಗ ನಂ. 2
ಪತ್ರಕರ್ತರೇ ಮಾಲೀಕರಾಗಿರೋ ಯಶಸ್ವಿ ಮಾಧ್ಯಮ ಸಂಸ್ಥೆಗಳು ದೇಶದಲ್ಲಿ ತುಂಬಾ ಕಡಿಮೆ. ಪತ್ರಕರ್ತ ಸ್ವಾವಲಂಬಿ, ಸ್ವಾಭಿಮಾನಿಯಾಗಿ ಕೆಲಸ ಮಾಡೋಕೆ, ಪತ್ರಕರ್ತರೇ ಮಾಲೀಕರಾಗಿರೋ ಸಂಸ್ಥೆಗಳಲ್ಲಿ ಅವಕಾಶ ಹೆಚ್ಚು. ಅಂತಹ ಧ್ಯೇಯೋದ್ದೇಶದೊಂದಿಗೆ ಆರಂಭವಾದ ಪಬ್ಲಿಕ್ ಟಿವಿ ಅತ್ಯಲ್ಪ ಅವಧಿಯಲ್ಲಿ ಕರ್ನಾಟಕದ ನಂ 2 ಸುದ್ದಿ ವಾಹಿನಿಯಾಗಿ ಹೊರಹೊಮ್ಮಿದೆ.
"ಪಬ್ಲಿಕ್ ಟಿವಿ ಕರ್ನಾಟಕದ ಅತಿ ಜನಪ್ರಿಯ ನ್ಯೂಸ್ ಚಾನೆಲ್. ಕನ್ನಡದ ಏಳು ನ್ಯೂಸ್ ಚಾನೆಲ್ ಪೈಕಿ "ನಿಮ್ಮ ಪಬ್ಲಿಕ್ ಟಿವಿ"ಗೆ ಎರಡನೇ ಸ್ಥಾನ ಸಿಕ್ಕಿದೆ. ಪ್ರತಿ ವಾರ ಪ್ರಕಟವಾಗುವ ಟ್ಯಾಮ್ (Television Audience Measurement) ಸಮೀಕ್ಷೆ ಪ್ರಕಾರ ಪಬ್ಲಿಕ್ ಟಿವಿಗೆ ಈ ಸ್ಥಾನ ಲಭಿಸಿದೆ" ಎಂದು ವಾಹಿನಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
2012ರ ಫೆಬ್ರವರಿ 12ರಂದು ಚಾನಲ್ ಅನಾವರಣ ಆಯಿತು. 'ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ' ಎಂಬುದು ನಮ್ಮ ಘೋಷ ವಾಕ್ಯವಾಯ್ತು. 27 ವರ್ಷ ಪತ್ರಿಕೋದ್ಯಮದ ನಾನಾ ಜವಾಬ್ದಾರಿ ನಿಭಾಯಿಸಿರುವ ಅನುಭವಿ ಪತ್ರಕರ್ತ ಎಚ್.ಆರ್. ರಂಗನಾಥ್ ಅವರ ಕನಸಿನ ಕೂಸು ರೈಟ್ ಮನ್ ಮೀಡಿಯಾದ ಪಬ್ಲಿಕ್ ಟಿವಿ. ಚಾನಲ್‌ನ ಸಿಇಓ ಅರುಣ್ ಕುಮಾರ್.

ಪಬ್ಲಿಕ್ ಟಿವಿಗೆ ಈಗ 11 ತಿಂಗಳ ಹರೆಯ. ಕನ್ನಡದ ಏಳು ನ್ಯೂಸ್ ಚಾನೆಲ್ ಪೈಕಿ ಪಬ್ಲಿಕ್ ಟಿವಿಗೆ ಎರಡನೇ ಸ್ಥಾನ ಸಿಕ್ಕಿದೆ. (ಮೊದಲ ಸ್ಥಾನ ಟಿವಿ9) ಪ್ರತಿ ವಾರ ಪ್ರಕಟವಾಗುವ ಟ್ಯಾಮ್ ಸಮೀಕ್ಷೆ ಪ್ರಕಾರ ಪಬ್ಲಿಕ್ ಟಿವಿಗೆ ಈ ಸ್ಥಾನ ಲಭಿಸಿದೆ. ಟಿವಿ ಚಾನೆಲ್ ಗಳನ್ನು ಅಳೆಯುವುದೇ ಈ ಸಮೀಕ್ಷೆಯಿಂದ. ಈ ಖುಷಿಯ ಕ್ಷಣಗಳನ್ನು ವೀಕ್ಷಕರರೊಂದಿಗೆ ಮತ್ತು ವಾಚಕರೊಂದಿಗೆ ಹಂಚಿಕೊಳ್ಳಲು ಸಂತವಾಗುತ್ತಿದೆ ಎಂದು ಚಾನಲ್ ನ ಪ್ರಕಟಣೆ ತಿಳಿಸಿದೆ.
ಕನ್ನಡದ ಇತರ ಚಾನಲ್ಲುಗಳ ಟ್ಯಾಮ್ ರಿಪೋರ್ಟ್ ಗಳನ್ನು ಗ್ರಾಫಿಕ್ ನಲ್ಲಿ ನೋಡಲು ಇಲ್ಲಿಗೆ ಹೋಗಿ.


Click it and Unblock the Notifications











