ಜನಾದೇಶಕ್ಕೆ ತಲೆ ಬಾಗಿದ ಕನ್ನಡದ 'ಬಿಗ್ ಬಾಸ್', ರಕ್ಷಿತಾಗೆ ಮತ್ತೆ ಸಿಕ್ತು ರತ್ನಗಂಬಳಿ ಸ್ವಾಗತ

''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗ ಈ ಕಾರ್ಯಕ್ರಮವನ್ನು ನೋಡುತ್ತಲೇ ಬೈಯುತ್ತಾರೆ. ಬೈಯುತ್ತಲೇ ನೋಡುತ್ತಾರೆ. ಇನ್ನೂ ಸಾಮಾನ್ಯವಾಗಿ ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ಈ ''ಬಿಗ್ ಬಾಸ್‌'' ನಲ್ಲಿ ನಾನಾ ಕಸರತ್ತುಗಳಾಗುತ್ತವೆ.

ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್‌ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ. ಇದಕ್ಕೆ ಒಂದು ಉದಾಹರಣೆ ಕನ್ನಡ ''ಬಿಗ್ ಬಾಸ್'' ಸುತ್ತ ಮುತ್ತ ಈ ವರ್ಷದ 12ನೇ ಸೀಸನ್‌ನ ಆರಂಭದಲ್ಲಿಯೇ ನಡೆದ ಬೆಳವಣಿಗೆ.

PUBLIC WINS Rakshitha Shetty Returns to BBK 12 After Shocking Day 1 Exit

ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ವಾರ ಕನ್ನಡದಲ್ಲಿ ''ಬಿಗ್ ಬಾಸ್'' 12ನೇ ಸೀಸನ್ ಅದ್ಧೂರಿಯಾಗಿ ಶುರುವಾಗಿದೆ. ಆದರೆ.. ಹೀಗೆ ಶುರುವಾದ ಈ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಇರುವ ಎಲ್ಲರನ್ನೂ ಬಿಟ್ಟು ಮನೆಯ ಒಳಗಡೆ ಖುಷಿ ಖುಷಿಯಿಂದ ಹೋಗಿದ್ದ ಉಡುಪಿಯ ರಕ್ಷಿತಾ ಅವರನ್ನು ಕೇವಲ 24 ಗಂಟೆಯಲ್ಲಿಯೇ ಮನೆಯಿಂದ ಹೊರಗಡೆ ಕಳುಹಿಸಲಾಗಿತ್ತು.

ಸಹಜವಾಗಿ ''ಬಿಗ್ ಬಾಸ್‌''ನ ಈ ಅನಿರೀಕ್ಷಿತ ನಡೆಯಿಂದ ಕೆರಳಿ ಕೆಂಡವಾಗಿದ್ದ ಅನೇಕರು ''ಬಿಗ್ ಬಾಸ್‌''ನ ತರಾಟೆಗೆ ತೆಗೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಹನೆ-ಅಸಮಾಧಾನ ಹೊರ ಹಾಕಿದ್ದರು. ಮನೆಯೊಳಗೆ ಬರಲು ಮತ್ತೆ ಮನೆಯಾಚೆ ಹೋಗಲು ಇರುವ ಮಾನದಂಡಗಳೇನು ಎಂದು ಪ್ರಶ್ನೆ ಮಾಡಿದ್ದರು.

ನಿಜಾ.. ರಕ್ಷಿತಾ ಅವರನ್ನು ಮನೆಯ ಹೊರಗೆ ಕಳುಹಿಸಿದ ನಂತರದ ಮರು ಕ್ಷಣದಿಂದ ಇದು ''ಬಿಗ್ ಬಾಸ್'' ಪ್ರೇಕ್ಷಕರಿಗೆ ನೀಡುತ್ತಿರುವ ಚಮಕ್ ಎಂದು ಎಲ್ಲರಲ್ಲಿ ಅನುಮಾನ ಇತ್ತಾದರೂ ''ಬಿಗ್ ಬಾಸ್‌''ನ ಈ ನಿಲುವು ಪರ- ವಿರೋಧದ ಚರ್ಚೆಗೆ ನಾಂದಿಯಂತೂ ಹಾಡಿತ್ತು.

ಇಷ್ಟೆಲ್ಲಾ ಆಗಿ ಈಗ ಒಂದು ವಾರದ ನಂತರ ಸದ್ಯ.. ಇದೀಗ ಮನೆಯಿಂದ ಹೊರ ಹೋಗಿದ್ದ ರಕ್ಷಿತಾ ಅವರನ್ನು ಮತ್ತೆ ಮನೆಯೊಳಗೆ ಕಳುಹಿಸಲಾಗಿದೆ. ರತ್ನಗಂಬಳಿ ಹಾಕಿ ಸ್ವಾಗತವನ್ನು ಕೋರಲಾಗಿದೆ. ಈ ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ''ಬಿಗ್ ಬಾಸ್'' ಚಮಕ್ ನೀಡಿದೆ.

PUBLIC WINS Rakshitha Shetty Returns to BBK 12 After Shocking Day 1 Exit

ಸದ್ಯ ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಮತ್ತೆ ''ಬಿಗ್ ಬಾಸ್‌''ಗೆ ವೆಲ್‌ಕಂ ಮಾಡಿದ್ದುಮನೆಯ ಒಳಗೆ ಬರಲು ಮತ್ತು ಹೋಗುವುದಕ್ಕೆ ಇದೇನು ನಿಮ್ಮ ಉಡುಪಿ ಅಂದುಕೊಂಡ್ರಾ..? ಎಂದು ಸುದೀಪ್ ಮನೆಗೆ ಬಂದ ರಕ್ಷಿತಾ ಶೆಟ್ಟಿ ಅವರ ಕಾಲೆಳೆದಿದ್ದಾರೆ. ಸುದೀಪ್ ಅವರ ಈ ಮಾತುಗಳಿಗೆ ಹೌದು, ಸರ್ ಮನೆಯಿಂದ ಎಲ್ಲರೂ ಸೇರಿ ಹೊರಗಡೆ ಹಾಕಿದರು ಎಂದು ಹೇಳಿರುವ ರಕ್ಷಿತಾ ಮನೆಯೊಳಗೆ ಹೋಗಿ ನನ್ನ ಮನೆಯಾಚೆ ಹಾಕಲು ನಿಜವಾದ ಕಾರಣವೇನು ಎಂದು ಕೇಳುತ್ತೇನೆ ಎಂದು ಹೇಳಿದ್ದಾರೆ.

ನಾನು ಹೋಗುವಾಗ ಎಲ್ಲರೂ ಬಂದು ನನ್ನ ಸಮಾಧಾನ ಮಾಡಿದರು ಹೊರತು ಯಾರೂ ಕೂಡ ನನ್ನ ಪರವಾಗಿ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ ಎಂದಿರುವ ರಕ್ಷಿತಾ ಅವರೆಲ್ಲಾ ಜಸ್ಟ್ ಕವರ್ ನೋಡಿ ಜಡ್ಜ್ ಮಾಡಿದರು. ನಾನು ಹೇಗೆ ಆಡ್ತೀನಿ ಅಂತ ಅವರಿಗೆ ಇನ್ನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸುದೀಪ್ ಅವರಿಗೆ ಚೆನ್ನಾಗಿ ಆಡುವ ಭರವಸೆಯನ್ನು ನೀಡಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಸದ್ಯ ಪ್ರೋಮೋ ಬಿಡುಗಡೆಯಾಗಿದ್ದು ಇಂದಿನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಕುತೂಹಲ ಕೆರಳಿಸಿದೆ.

More from Filmibeat

English summary
Rakshitha Shetty has re-entered the Bigg Boss Kannada Season 12 house! Read the full details on her dramatic return just days after being the season's first and most shocking eviction
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X