ಹೊಸ ಗೌನ್ ಧರಿಸಿ ಅಭಿಮಾನಿಗಳ ಕಣ್ಮನ ಸೆಳೆದ ನಟಿ ಸಂಜನಾ ಬುರ್ಲಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನ್ಯಾಯಕ್ಕೋಸ್ಕರ ಹೋರಾಡುವ ಸ್ನೇಹಾ ಈಗ ಅತ್ತೆ ಹಾಗೂ ಮಾವನ ಬಗ್ಗೆ ಕಾಳಜಿ ವಹಿಸುವಲ್ಲಿ ಬ್ಯುಸಿಯಾಗಿದ್ದಾಳೆ.
ಸ್ನೇಹಾ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ. ಆದರೆ ಕೊಂಚ ಸಿಡುಕು ಬುದ್ಧಿ ಇರುವುದೇ ಮನೆಯವರಿಗೆ ಕಷ್ಟವಾಗಿದೆ.
ಕೆಎಎಸ್ ಆಗುವ ಕನಸಿನ ಹಾದಿಯಲ್ಲಿ ಸ್ನೇಹಾ ಇದ್ದು, ಇದರ ಜೊತೆ ಜೊತೆಗೆ ಸದಾ ನ್ಯಾಯಕ್ಕಾಗಿ ಹೋರಾಡುತ್ತಿರುತ್ತಾಳೆ. ನ್ಯಾಯ ಮಾತಾಡುತ್ತಾ, ಸದಾ ಸಿಡುಕುವ ಸ್ನೇಹಾಳನ್ನು ಕಂಡರೆ ಊರಿನವರಿಗೆಲ್ಲಾ ಸ್ವಲ್ಪ ಭಯ. ತನ್ನ ಜೋರು ಬಾಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದಾಳೆ.

ರ್ಯಾಂಕ್ ಸ್ಟುಡೆಂಟ್ ಸಂಜನಾ
ನಟಿ ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ಸಂಜನಾ ಇಂಜಿನಿಯರಿಂಗ್ ಸ್ಟೂಡೆಂಟ್. ರ್ಯಾಂಕ್ ಸ್ಟೂಡೆಂಟ್ ಆಗಿರುವ ಸಂಜನಾಗೆ ಓದುವುದು ದೊಡ್ಡ ಕನಸಾದರೆ, ನಟನೆ ಪ್ಯಾಷನ್ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸಂಜನಾ ಅವರ ಮೊದಲ ಧಾರಾವಾಹಿ 'ಪತ್ತೆದಾರಿ ಪ್ರತಿಭಾ'. ಈ ಹಿಂದೆ 'ಲಗ್ನಪತ್ರಿಕೆ' ಎಂಬ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ಒಳ್ಳೆಯ ಬ್ರೇಕ್ ಕೊಡುತ್ತೆ ಎಂದುಕೊಂಡಿದ್ದರು. ಆದರೆ ಅದು ಅರ್ಧಕ್ಕೆ ನಿಂತಾಗ ಬೇಸರಗೊಂಡಿದ್ದರು. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ.
ಸಂಜನಾ ಅವರ ಇತರೆ ಪ್ರಾಜೆಕ್ಟ್ಗಳು
ಮೊದಲು ಸಂಜನಾ ಬುರ್ಲಿ 'ಸ್ನೇಹರ್ಷಿ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಕಳೆದ ವರ್ಷ ಆಕೆ 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ಮಿಂಚಿದ್ದರು. ಇದರ ಟ್ರೈಲರ್ ಹಾಗೂ ಹಾಡು ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗಾಗಿ ಸಂಜನಾ ಕಾಯುತ್ತಿದ್ದಾರೆ. ಇನ್ನು ಅನಂತ್ ನಾಗ್ ಜೊತೆಗೆ 'ವೀಕೆಂಡ್' ಸಿನಿಮಾ ಹಾಗೂ 'ನಾನ್ ವೆಜ್' ಎಂಬ ಚಿತ್ರದಲ್ಲೂ ಸಂಜನಾ ನಟಿಸಿದ್ದು, ತಮಿಳಿನ ಚಿತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಮುಂದಿನ ದಿನಗಳಲ್ಲೂ ಒಳ್ಳೆಯ ಪಾತ್ರಗಳು ಬಂದರೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಫೋಟೋಶೂಟ್ ಮಾಡಿಸುವ ನಟಿ
ಸಂಜನಾ ಬುರ್ಲಿ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಆಗಾಗ ಫೋಟೋಶೂಟ್ ಮಾಡಿಸುವ ಸಂಜನಾ ಅವರು, ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟು ನೋಡುಗರ ಮನ ತಣಿಸುತ್ತ ಇರುತ್ತಾರೆ. ಅಭಿಮಾನಿಗಳ ಕಮೆಂಟ್‌ಗೆ ರಿಪ್ಲೈ ಮಾಡುವುದು, ಲೈಕ್ ಕೊಡುವುದು ಕೂಡ ಮಾಡುತ್ತಾರೆ. ಅಭಿಮಾನಿಗಳ ಜೊತೆಗೆ ಟಚ್‌ನಲ್ಲಿ ಇರಲು ಬಯಸುವ ಸಂಜನಾ ಈಗ ಅಭಿಮಾನಿಗಳು ಜೀವನದಲ್ಲಿ ಎದುರಿಸುವ ಬೇಸರ, ಗೊಂದಲ ಹಾಗೂ ಇತರೆ ಸಮಸ್ಯೆಗಳಿಗೆ ಪರಿಹಾರವನ್ನು ರೀಲ್ಸ್ ಮೂಲಕ ನೀಡಿದ್ದರು.
ವೈನ್ ಬಣ್ಣದ ಗೌನ್‌ನಲ್ಲಿ ಬೆಡಗಿ
ಇದೀಗ ಕ್ರಿಸ್‌ಮಸ್ ನೆಪದಲ್ಲಿ ವೈನ್ ಬಣ್ಣದ ಗೌನ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದು, ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ. ಸಂಜನಾ ಬ್ಯೂಟಿಗೆ ಫಿದಾ ಆಗಿದ್ದಾರೆ. ಪ್ರತಿಯೊಂದು ಫೋಟೋಗಳಿಗೂ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಸಂಜನಾ ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ಎಂದು ಹಲವರು ಹೇಳಿದ್ದರೆ, ಕೆಲವರು ಕವಿತೆಯನ್ನೂ ಬರೆದಿದ್ದಾರೆ. ಸಂಜನಾಗೆ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಈವರೆಗೆ 472 ಪೋಸ್ಟ್‌ಗಳನ್ನು ಮಾಡಿದ್ದಾರೆ.


Click it and Unblock the Notifications











