»   » 'ಬಿಗ್ ಬಾಸ್' ಮನೆಯಲ್ಲಿ ಲಿಪ್ ಲಾಕ್ ಮಾಡಿದ 'ಲವ್ ಬರ್ಡ್ಸ್'.!

'ಬಿಗ್ ಬಾಸ್' ಮನೆಯಲ್ಲಿ ಲಿಪ್ ಲಾಕ್ ಮಾಡಿದ 'ಲವ್ ಬರ್ಡ್ಸ್'.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತ್ರಿಕೋನ ಪ್ರೇಮಕಥೆ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಮೇಲೆ ಇವರಿಗೆ ಲವ್, ಇವರ ಮೇಲೆ ಮತ್ತೊಬ್ಬರಿಗೆ ಲವ್ ಎಂಬ ಚರ್ಚೆಗಳು ಶುರುವಾಗಿದೆ.

ಹೀಗಿರುವಾಗ, ಹಿಂದಿ 'ಬಿಗ್ ಬಾಸ್'ನಲ್ಲಿರುವ ಪ್ರೇಮಿಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬಿಗ್ ಮನೆಯಲ್ಲಿ ರೊಮ್ಯಾನ್ಸ್ ಮಾಡ್ತಿದ್ದಾರೆ. ಎಲ್ಲರೂ ಮಲಗಿದ ಮೇಲೆ ಈ ಪ್ರೇಮಿಗಳು ಲಿಪ್ ಲಾಕ್ ಕೂಡ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ.

ಹಾಗಿದ್ರೆ, ಬಿಗ್ ಮನೆಯಲ್ಲಿ ಸುದ್ದಿಯಾಗಿರುವ ಈ ಲವ್ ಬರ್ಡ್ಸ್ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಬಿಗ್ ಮನೆಯ ಲವ್ ಬರ್ಡ್ಸ್ ಇವರೇ

'ಬಿಗ್ ಬಾಸ್' ಮನೆಯ ಸ್ಪರ್ಧಿ ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಲಿಪ್ ಲಾಕ್ ಮಾಡಿರುವ ಲವ್ ಬರ್ಡ್ಸ್. ಈ ದೃಶ್ಯವನ್ನ ವಾರಾಂತ್ಯದಲ್ಲಿ ಸಲ್ಮಾನ್ ಪ್ರಸಾರ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಇವರಿಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್

ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಜೋಡಿ ಮನೆಗೆ ಪ್ರವೇಶ ಮಾಡಿದ ಮೊದಲ ವಾರದಿಂದಲೂ ಗಮನ ಸೆಳೆಯುತ್ತಿದ್ದರು. ಇವರಿಬ್ಬರ ಮಧ್ಯೆ ಸಂಥಿಂಗ್ ಏನೋ ಇದೆ ಎಂದು ಸುಳಿವು ನೀಡುತ್ತಿದ್ದರು. ಆದ್ರೀಗ, ಲಿಪ್ ಲಾಕ್ ಮಾಡುವುದರ ಮೂಲಕ ಅದಕ್ಕೆ ಸಾರ್ವಜನಿಕವಾಗಿ ಸಾಬೀತು ಪಡಿಸಿಕೊಂಡಿದ್ದಾರೆ.

'ಬಿಗ್ ಬಾಸ್' ಬೆಡಗಿ ಶ್ರುತಿ ಪ್ರಕಾಶ್ ಗೆ ಬಾಯ್ ಫ್ರೆಂಡ್ ಇದ್ದಾರಾ.?

ವೀಕ್ಷಕರು ಬೇಸರ

ಹಿಂದಿ 'ಬಿಗ್ ಬಾಸ್' ಮನೆಯಲ್ಲಿ ಲಿಪ್ ಲಾಕ್ ನಡೆದಿರುವುದು ಮತ್ತು ಅದನ್ನ ಪ್ರಸಾರ ಮಾಡಿರುವುದಕ್ಕೆ ಹಿಂದಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ದೃಶ್ಯಗಳನ್ನ ಪ್ರಸಾರ ಮಾಡಬಾರದು, ಇದು ನೋಡುಗರಿಗೆ ಮುಜುಗರ ಉಂಟು ಮಾಡುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜೋಡಿಗೆ ವಾರ್ನ್ ಮಾಡಿದ ಸಲ್ಲು

ಇನ್ನು ಈ ಬಗ್ಗೆ ವಾರಾಂತ್ಯದಲ್ಲಿ ಮಾತನಾಡಿದ ನಿರೂಪಕ ಸಲ್ಮಾನ್ ಇಬ್ಬರಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಪ್ರೀತಿಯನ್ನ ನಿಯಂತ್ರಿಸಿಕೊಳ್ಳಿ ಎಂದು ವಾರ್ನ್ ಮಾಡಿದ್ದಾರೆ.

ದಕ್ಷಿಣ ನಟಿಯರ ಬಗ್ಗೆ 'ಕೀಳಾಗಿ' ಮಾತನಾಡಿದ 'ಬಿಗ್ ಬಾಸ್' ಸ್ಪರ್ಧಿ.!

English summary
Puneesh Sharma and Bandgi Kalra were seen kissing each other under the sheets after the lights went out inside the Bigg Boss 11 house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada