»   » 'ಬಿಗ್ ಬಾಸ್' ಮನೆಯಾಚೆಗೂ ಮುಂದುವರೆದ ಪ್ರಣಯ ಪಕ್ಷಿಗಳ ಪ್ರೇಮ್ ಕಹಾನಿ

'ಬಿಗ್ ಬಾಸ್' ಮನೆಯಾಚೆಗೂ ಮುಂದುವರೆದ ಪ್ರಣಯ ಪಕ್ಷಿಗಳ ಪ್ರೇಮ್ ಕಹಾನಿ

Posted By:
Subscribe to Filmibeat Kannada

'ಬಿಗ್ ಬಾಸ್' ಅನ್ನೋದೇ ಒಂದು ಸ್ಕ್ರಿಪ್ಟೆಡ್ ಶೋ. ಇಲ್ಲಿ ನಡೆಯುವುದೆಲ್ಲವೂ ಪ್ರೀ-ಪ್ಲಾನ್ಡ್. 'ದೊಡ್ಮನೆ'ಯಲ್ಲಿ ಯಾವುದೂ ರಿಯಾಲಿಟಿ ಇಲ್ಲ ಅಂತ ಎಷ್ಟೋ ಮಂದಿ ಮೂಗು ಮುರಿಯುತ್ತಾರೆ.

'ಬಿಗ್ ಬಾಸ್' ಎಂಬ ಶೋನಲ್ಲಿ ಶುರು ಆಗುವ ಫ್ರೆಂಡ್ ಶಿಪ್, ಲವ್ ರಿಲೇಶನ್ ಶಿಪ್ ಕೂಡ ಬರೀ ಡವ್ವು ಎನ್ನುವವರೂ ಇದ್ದಾರೆ. ಒಂದ್ಸಾರಿ 'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ, ಯಾರು ಯಾರನ್ನೂ ಭೇಟಿ ಮಾಡಲ್ಲ. ಒಳಗಿನ ಸ್ನೇಹ, ಪ್ರೀತಿ ಕೂಡ ಮುಂದುವರೆಯಲ್ಲ ಅಂತ ಹೇಳುವವರೂ ಇದ್ದಾರೆ.

ಆದ್ರೆ, ಅದೆಲ್ಲ ಸುಳ್ಳು ಎಂದು 'ಬಿಗ್ ಬಾಸ್' ಪ್ರಣಯ ಪಕ್ಷಿಗಳು ನಿರೂಪಿಸಿದ್ದಾರೆ. 'ಬಿಗ್ ಬಾಸ್' ಮನೆಯೊಳಗಿನ ತಮ್ಮ ಪ್ರೇಮ, ಕೇವಲ ಕ್ಯಾಮರಾಗಾಗಿ ಮಾತ್ರ ಅಂತ ಎಷ್ಟೋ ಬಾರಿ ಪ್ರತಿಸ್ಪರ್ಧಿಗಳು ಬೆಟ್ಟು ಮಾಡಿ ತೋರಿಸಿದರೂ, ತಮ್ಮ ಪ್ರೇಮ 'ರಿಯಲ್' ಅಂತ ಪುನೀಶ್ ಶರ್ಮಾ ಹಾಗೂ ಬಂದಗಿ ಕಾಲ್ರಾ ಸಾಬೀತು ಮಾಡಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ಪ್ರಣಯ ಪಕ್ಷಿಗಳು

ಹಿಂದಿಯ 'ಬಿಗ್ ಬಾಸ್ 11' ಕಾರ್ಯಕ್ರಮದಲ್ಲಿ 'ಪ್ರೀತಿ, ಪ್ರೇಮ' ವಿಚಾರಕ್ಕೆ ಹೆಚ್ಚು ಸೌಂಡ್ ಮಾಡಿದವರು ಪುನೀಶ್ ಶರ್ಮಾ ಹಾಗೂ ಬಂದಗಿ ಕಾಲ್ರಾ. ಟಿ.ಆರ್.ಪಿಗಾಗಿ ಹಾಗೂ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಲು ಇವರಿಬ್ಬರು ಪ್ರೀತಿಯ ನಾಟಕ ಮಾಡುತ್ತಿದ್ದಾರೆ ಅಂತ ಪ್ರತಿಸ್ಪರ್ಧಿಗಳು ಬಾಯ್ಬಾಯಿ ಬಡ್ಕೊಂಡಿದ್ರು. ಆದ್ರೆ, 'ಬಿಗ್ ಬಾಸ್' ಮನೆಯಿಂದಾಚೆಗೂ ಪುನೀಶ್-ಬಂದಗಿ ಲವ್ ಸ್ಟೋರಿ ಮುಂದುವರೆದಿದೆ.

'ಬಿಗ್ ಬಾಸ್' ಮನೆಯಲ್ಲಿ ಲಿಪ್ ಲಾಕ್ ಮಾಡಿದ 'ಲವ್ ಬರ್ಡ್ಸ್'.!

ಕೈಕೈ ಹಿಡಿದುಕೊಂಡು ಓಡಾಡುತ್ತಿರುವ ಜೋಡಿ

'ಬಿಗ್ ಬಾಸ್' ಕಾರ್ಯಕ್ರಮ ಮುಗಿದ ಮೇಲೂ, ಪುನೀಶ್ ಹಾಗೂ ಬಂದಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲೇ ಹೋದರೂ, ಪುನೀಶ್-ಬಂದಗಿ ಕೈಕೈ ಹಿಡ್ಕೊಂಡು ಓಡಾಡುತ್ತಿದ್ದಾರೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.

ಬಂದಗಿಗೆ ಉಡುಗೊರೆ ಕೊಟ್ಟ ಪುನೀಶ್

ಫೆಬ್ರವರಿ 9 ರಂದು ಬಂದಗಿ ಕಾಲ್ರಾ ಹುಟ್ಟುಹಬ್ಬ. ಅಂದು ತನ್ನ ಮನದನ್ನೆಗೆ ಪುನೀಶ್ ಶರ್ಮಾ ಉಂಗುರವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ ಸಂತಸವನ್ನ ಸ್ವತಃ ಬಂದಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಆಗ್ತಾರಾ.?

ಮದುವೆ ಬಗ್ಗೆ ಇವರಿಬ್ಬರು 'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ ಹಲವು ಬಾರಿ ಮಾತುಕತೆ ನಡೆಸಿದ್ದರು. ಸದ್ಯ ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ಈ ಜೋಡಿ ಯಾವಾಗ ಮದುವೆ ಆಗುತ್ತಾರೋ, ನೋಡ್ಬೇಕು.

English summary
Bigg Boss 11 Contestant Puneesh Sharma gifts a ring to Bandgi Kalra for her birthday on February 9th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada