For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ ಸದಾಕಾಲ ಧರಿಸುವ ಸರದ ರಹಸ್ಯ ಬಯಲು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಿರುತೆರೆಯ ಖ್ಯಾತ ಕಾರ್ಯಕ್ರಮಗಳಲ್ಲಿ ಒಂದು. ಪವರ್ ಸ್ಟಾರ್ ನಡೆಸಿಕೊಡುವ ಈ ಕಾರ್ಯಕ್ರಮ ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ವಾರದ ಕೋಟ್ಯಧಿಪತಿಯಲ್ಲಿ ನವರಸ ನಾಯಕ ಜಗ್ಗೇಶ್ ಭಾಗಿಯಾಗಿದ್ದರು.

  ಪುನೀತ್ ಈ ಸಿನಿಮಾ ಮಾಡಬೇಕು ಅನ್ನೋದು ಪಾರ್ವತಮ್ಮನವರ ದೊಡ್ಡ ಆಸೆ..? | FILMIBEAT KANNADA

  ಯುವ ಸಂಸದರಿಗೆ ನಿಜಕ್ಕೂ 'ಹಾಟ್ ಸೀಟ್‌' ಆದ ಕನ್ನಡದ ಕೋಟ್ಯಧಿಪತಿ!ಯುವ ಸಂಸದರಿಗೆ ನಿಜಕ್ಕೂ 'ಹಾಟ್ ಸೀಟ್‌' ಆದ ಕನ್ನಡದ ಕೋಟ್ಯಧಿಪತಿ!

  ಭರ್ಜರಿ ಮನರಂಜನೆಯ ಜೊತೆಗೆ ಪ್ರಶ್ನೋತರ ಕಾರ್ಯಕ್ರಮ ಕೂಡ ಇಂಟ್ರಸ್ಟಿಂಗ್ ಆಗಿತ್ತು. ಎಂದಿನಂತೆ ಪವರ್ ಸ್ಟಾರ್ ಹಾಡ್ ಸೀಟಿನಲ್ಲಿ ಕೂತವರಿಗೆ ಪ್ರಶ್ನೆಗಳನ್ನು ಕೇಳಿದ್ರೆ, ಹಾಟ್ ಸೀಟಿನಲ್ಲಿದ್ದ ಜಗ್ಗೇಶ್ ಕೂಡ ಅಪ್ಪುಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ರು.

  ತಂದೆ-ತಾಯಿಯ ಯಾವ ವಸ್ತು ನಿಮ್ಮ ಬಳಿ ಇದೆ

  ತಂದೆ-ತಾಯಿಯ ಯಾವ ವಸ್ತು ನಿಮ್ಮ ಬಳಿ ಇದೆ

  ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗಿಯಾಗಿದ್ದ ನವರಸ ನಾಯಕ ಜಗ್ಗೇಶ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂಟ್ರಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದಾರೆ. "ಪ್ರತಿಯೊಬ್ಬರಿಗೂ ತಮ್ಮ ತಂದೆಯ ತಾಯಿಯ ನೆನಪು ಇರುತ್ತೆ. ಅವರನ್ನು ಕಳೆದುಕೊಂಡ ಮೇಲೆ ಅವರ ತುಂಬ ಇಷ್ಟವಾದ ವಸ್ತುವನ್ನು ಇಟ್ಟುಕೊಂಡಿರುತ್ತಾರೆ. ನಿಮ್ಮ ಬಳಿ ಯಾವ ವಸ್ತು ಇದೆ? ಎಂದು ಜಗ್ಗೇಶ್ ಅಪ್ಪುಗೆ ಕೇಳಿದ್ದಾರೆ.

  ಜಗ್ಗೇಶ್ ಹತ್ರ ಕಾಸ್ ಇಲ್ವಾ, ಟೋಕನ್ ಹಾಕಿಯೇ ಹಣ ಮಾಡಬೇಕಾ?ಜಗ್ಗೇಶ್ ಹತ್ರ ಕಾಸ್ ಇಲ್ವಾ, ಟೋಕನ್ ಹಾಕಿಯೇ ಹಣ ಮಾಡಬೇಕಾ?

  ಅಪ್ಪು ಕೊರಳಲ್ಲಿದೆ ಅಣ್ಣಾವ್ರಾ ಸರ

  ಅಪ್ಪು ಕೊರಳಲ್ಲಿದೆ ಅಣ್ಣಾವ್ರಾ ಸರ

  "ನೆನಪುಗಳೆಂದರೆ ಅವರು ಓಡಾಡುತ್ತಿದ್ದ ಜಾಗ ಯವಾಗಲು ನೆನಪಾಗುತ್ತೆ. ಅವರು ಬಳಸುತ್ತಿದ್ದ ಬಟ್ಟೆಗಳಿವೆ. ಕಡೆಯದಾಗಿ ಬಳಸಿದ್ದಂತಹ ಡಾ.ರಾಜ್ ಕುಮಾರ್ ಅವರ ಚಪ್ಪಲಿ ಕೂಡ ಇದೆ". ಅಲ್ಲದೆ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಯಾವಾಗಲು ನಮಸ್ಕಾರ ಮಾಡುತ್ತಿದ್ದ ಫೋಟೋವನ್ನು ಇಟ್ಟುಕೊಂಡಿದ್ದಾರಂತೆ. ಜೊತೆಗೆ ಅಣ್ಣಾವ್ರಾ ಸರ ಪುನೀತ್ ಬಳಿಯೆ ಇರುತ್ತಂತೆ. ಸದಾ ಆ ಸರ ಪುನೀತ್ ಕೊರಳಲ್ಲಿಯೆ ಇರುತ್ತೆ. ಮೊದಲ ಬಾರಿಗೆ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಆ ಸರವನ್ನು ತೋರಿಸಿದ್ದಾರೆ ಅಪ್ಪು.

  ಪುನೀತ್ ಮನೆಯಲ್ಲಿ ಹೆಚ್ಚು ಚರ್ಚೆಯಾಗುವ ವಿಚಾರ

  ಪುನೀತ್ ಮನೆಯಲ್ಲಿ ಹೆಚ್ಚು ಚರ್ಚೆಯಾಗುವ ವಿಚಾರ

  "ನಿಮ್ಮ ಮನೆಯಲ್ಲಿ ಹೆಚ್ಚು ಚರ್ಚೆಯಾಗುವ ವಿಚಾರ ಯಾವುದು ಎಂದು ಜಗ್ಗೇಶ್ ಕೇಳಿದ್ದಾರೆ. ಖಂಡವರ ಮನೆ ಕಥೆ ಕೇಳಲು ಎಲ್ಲರಿಗೂ ಆಸೆ. ನನಗೂ ಆಸೆ" ಎಂದು ಹಾಸ್ಯ ಮಾಡುತ್ತಲೆ ಪುನೀತ್ ಗೆ ಪ್ರಶ್ನೆ ಕೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಪತ್ನಿ ಯಾವಾಗಲು ಬ್ಯುಸಿಯಾಗಿರುತ್ತಾರೆ ಎನ್ನುವ ವಿಚಾರಕ್ಕೆ ಚರ್ಚೆಯಾಗುತ್ತಂತೆ. ಈ ವಿಚಾರವಾಗಿ ಸಿಟ್ಟಾಗಿರುತ್ತಾರೆ. ಆದ್ರೆ ಯಾವತ್ತು ಪತ್ನಿಯ ಮೇಲೆ ರೇಗಾಡುವುದಿಲ್ಲವಂತೆ.

  'ಕನ್ನಡದ ಕೋಟ್ಯಧಿಪತಿ' ಹಾಟ್ ಸೀಟಲ್ಲಿ ಬಿಜೆಪಿಯ ಯಂಗ್ ಲೀಡರ್ಸ'ಕನ್ನಡದ ಕೋಟ್ಯಧಿಪತಿ' ಹಾಟ್ ಸೀಟಲ್ಲಿ ಬಿಜೆಪಿಯ ಯಂಗ್ ಲೀಡರ್ಸ

  ಅಪ್ಪು ಮನಸ್ಸು ಗೆಲ್ಲಲು ಹೀಗೆ ಮಾಡಬೇಕು

  ಅಪ್ಪು ಮನಸ್ಸು ಗೆಲ್ಲಲು ಹೀಗೆ ಮಾಡಬೇಕು

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನಸ್ಸು ಗೆಲ್ಲಬೇಕು ಅಂದ್ರೆ ಅನು ಮಾಡಬೇಕು ಅಂತ ನವರಸ ನಾಯಕ ಕೇಳಿದ ಪ್ರಶ್ನೆಗೆ ಅಪ್ಪು ನಾಟಿ ಕೋಳಿ ಸಾರು ಮತ್ತು ಬಿರಿಯಾನಿ ಕೊಡಿಸಬೇಕು ಎಂದು ಹೇಳಿದ್ದಾರೆ. ಅಪ್ಪುಗೆ ನಾಟಿ ಕೋಳಿ ಸಾರು ಮತ್ತು ಬಿರಿಯಾನಿ ಅಂದ್ರೆ ತುಂಬ ಇಷ್ಟವಂತೆ. ಹಾಗಾಗಿ ಅಪ್ಪು ಮನಸ್ಸು ಗೆಲ್ಲಬೇಕು ಅಂದ್ರೆ ಹೀಗೆ ಮಾಡಬೇಕು.

  English summary
  Kannada actor Puneeth Rajkumar always wear a Rajkumar's neck chain for his father memory

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X