Comedy Kiladigalu: ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಅಪ್ಪು!; ನೋಡುಗರ ಮನದಲ್ಲಿ ನೋವು, ಕಣ್ಣೀರು

By ಎಸ್ ಸುಮಂತ್

ಅಪ್ಪು ಫೋಟೋ ನೋಡಿದರೆ.. ಅಪ್ಪು ಸಾಂಗ್ಸ್ ಕೇಳಿದ್ರೆ.. ಅಪ್ಪು ಡೈಲಾಗ್‌ಗಳನ್ನ ಕೇಳುತ್ತಾ ಇದ್ದರೆ ಎಂಥವರಿಗೂ ನೋವಾಗುತ್ತೆ. ನಮ್ಮ ಅಪ್ಪು ಇರಬೇಕಿತ್ತು ಎನಿಸುತ್ತದೆ. ಇಷ್ಟು ಬೇಗ ಆ ದೇವರು ಅನ್ಯಾಯ ಮಾಡಬಾರದಿತ್ತು ಎಂಬ ಬೇಸರ ಮೂಡುತ್ತದೆ. ಆದರೆ ಸತ್ಯವನ್ನ ಅರ್ಥ ಮಾಡಿಕೊಂಡು ಸುಮ್ಮನೆ ಇದ್ದು ಬಿಡಬೇಕು ಅಷ್ಟೇ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗಿದ್ದ ಅಭಿಮಾನಿಗಳ ಬಳಗ ಕಡಿಮೆ ಏನು ಅಲ್ಲ. ಅದು ಅವರ ನಿಧನದ ಬಳಿಕವೇ ಗೊತ್ತಾಗಿದ್ದು. ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಅವರಾಡುವ ಮಾತುಗಳು ಇಂದಿಗೂ ಅವರ ವ್ಯಕ್ತಿತ್ವವನ್ನ ಕಣ್ಣ ಮುಂದೆ ತಂದು ನಿಲ್ಲಿಸುತ್ತೆ.

Puneeth rajkumar entry in comedy khiladigalu show fans break into tears

ಹಿರಿಯರು ಹೇಳ್ತಾರೆ ಜಾಸ್ತಿ ಒಳ್ಳೆಯವನಾಗಬೇಡ. ಒಳ್ಳೆಯವರಿಗೆ ಇದು ಕಾಲ ಅಲ್ಲ ಅಂತ. ಆ ಗಾದೆ‌ ಮಾತೇ ಅಪ್ಪು ಬದುಕಲ್ಲಿ ಸತ್ಯ ಆಗಿ ಬಿಡ್ತಾ? ಅನ್ನೋ ಬೇಸರ ಅಭಿಮಾನಿಗಳದ್ದು. ಈಗ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಅವರ ಪ್ರತಿರೂಪ ಕಂಡು ಕಣ್ಣುಗಳು ಒದ್ದೆಯಾಗಿದೆ.

ಹಾಸ್ಯ ಮಾತ್ರವಲ್ಲ ಎಮೋಷನ್ಸ್ ಕೂಡ

ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಶೋ ಶುರುವಾಗಿದೆ. ಕಾಮಿಡಿ ಶೋನಲ್ಲಿ ಜನಗಳನ್ನು ನಗಿಸುವುದಕ್ಕೆ ಬಗೆ ಬಗೆ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಕಾಮಿಡಿಗಿಂತ ಭಾವನಾತ್ಮಕ ಸನ್ನಿವೇಶಗಳು ಕೂಡ ನಡೆಯುತ್ತವೆ. ಅದರಲ್ಲಿ ಅಪ್ಪು ಕರೆತಂದಿರುವುದು ಒಂದು.

ವೇದಿಕೆ ಬಂದ್ರು ಅಪ್ಪು ಪ್ರತಿರೂಪ

ಜಗ್ಗಪ್ಪ ಈ ಸ್ಕಿಟ್ ಮಾಡಿದ್ದು, ಟೈಮ್ ಮಷಿನ್ ಮೂಲಕ 2021ಕ್ಕೆ ಹೋಗುವಂತೆ ಹೇಳಿದ್ದಾರೆ. ಆಗ ವೇದಿಕೆ ಮೇಲೆ ಅಪ್ಪು ಪ್ರತಿರೂಪದ ವ್ಯಕ್ತಿ(ಜ್ಯೂನಿಯರ್ ಪುನೀತ್ ರಾಜ್‌ಕುಮಾರ್) ಪ್ರತ್ಯಕ್ಷರಾಗಿದ್ದಾರೆ. 'ಜೇಮ್ಸ್' ಸಿನಿಮಾದಲ್ಲಿ ಕಂಡಂತೆ ಅಪ್ಪು ವೇದಿಕೆ ಮೇಲೆ ಕಂಡಿದ್ದಾರೆ. ಅವರನ್ನೇ ನೋಡಿದ ಭಾವನೆ ಎಲ್ಲರಿಗೂ ಮೂಡಿದೆ.

Puneeth rajkumar entry in comedy khiladigalu show fans break into tears

ಎದ್ದು ನಿಂತು ಗೌರವ

ಅಪ್ಪು ಪ್ರತ್ಯಕ್ಷರಾಗುತ್ತಿದ್ದಂತೆ ಜಗ್ಗಪ್ಪ ಓಡಿ ಹೋಗಿದ್ದಾರೆ. ಈ ವೇಳೆ ಅಪ್ಪು ಹಾಡಿದ್ದ ಕೊನೆಯ ಹಾಡು, ಅಣ್ಣಾವ್ರಿಗೆ ಅರ್ಪಿಸಿದ ಹಾಡು 'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ' ಹಾಡು ಹಿನ್ನೆಲೆಯಲ್ಲಿ ಬಂದಿದೆ. ವೇದಿಕೆ ಮೇಲಿದ್ದವರು ಎದ್ದು ನಿಂತು ಗೌರವ ಸೂಚಿಸಿದ್ದಾರೆ.

ಅಪ್ಪು ನೋಡಿ ಮನಸ್ಸಿಗೆ ನೋವು

ಅಪ್ಪು ಅಲ್ಲಿ ಇಲ್ಲದೆ ಇರಬಹುದು. ವೇದಿಕೆ ಮೇಲೆ ಪ್ರತಿರೂಪವೇ ಬಂದಿರಬಹುದು. ಆದರೆ ಆ‌ ಕ್ಷಣ ಅಪ್ಪು ಎಂಬ ಛಾಯೆ ಕಣ್ಣ ಮುಂದೆ ಬರುತ್ತದೆ. ಅಪ್ಪು ಅವರ ಸಿನಿಮಾಗಳು, ಅವರಿದ್ದ ರೀತಿ ಕಣ್ಣೆದುರು ಬರುತ್ತದೆ. ಅವರಿನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಈಗಲೂ ಕಷ್ಟವಾಗುತ್ತದೆ. ಅನುಶ್ರೀ ಅಂತು ಅಪ್ಪು ಅವರ ಪಕ್ಕಾ ಫ್ಯಾನ್ ಅಂತಾನೇ ಗುರುತಿಸಿಕೊಂಡವರು. ಅವರಿಗೂ ದುಃಖ ತಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ತರುಣ್ ಸುದೀರ್, ಅನುಶ್ರೀ, ಕುರಿ ಪ್ರತಾಪ್ ಎಲ್ಲರು ಎದ್ದು ನಿಂತು ಗೌರವ ಸೂಚಿಸಿದರು.

ಅಪ್ಪು ಅಂದ್ರೇನೆ ಡ್ಯಾನ್ಸ್

ಜಗ್ಗಪ್ಪ ವೇದಿಕೆ ಮೇಲೆ ಅವರನ್ನು ಮಾತನಾಡಿಸಿದ್ದಾರೆ. ಅಳುತ್ತಿದ್ದ ಜಗ್ಗಪ್ಪನಿಗೆ ಜಗ್ಗಪ್ಪ ನೀವೂ ಮೊದಲು ಅಳು ನಿಲ್ಲಿಸಿ ಎಂಬ ಮಾತು ಬರುತ್ತದೆ. ಆ ವಾಯ್ಸ್ ಸಿನಿಮಾದಲ್ಲಷ್ಟೇ ಕೇಳುವುದಕ್ಕೆ ಸಾಧ್ಯವಿತ್ತು. ಆದರೆ ವೇದಿಕೆ ಮೇಲೆ ಕೇಳಿ ಅಪ್ಪು ಅವರೇ ಮಾತಾಡಿದರು ಎಂಬಷ್ಟು ಸ್ಪಷ್ಟವಾಗಿ ಕೇಳಿಸಿದೆ. ಇದು ಖುಷಿ ಹಾಗೂ ದುಃಖ ಎರಡು ಒಟ್ಟೊಟ್ಟಿಗೆ ಆಗುವಂತ ಸನ್ನಿವೇಶ. ಜೀ ಕನ್ನಡ ಕಾಮಿಡಿ‌ ಕಿಲಾಡಿಗಳು ವೇದಿಕೆ ಇಂತಾದೊಂದು ಸನ್ನಿವೇಶ ನಿರ್ಮಾಣ ಮಾಡಿತ್ತು. ಕೊನೆಗೆ ಡ್ಯಾನ್ಸ್ ಕೂಡ ಮಾಡಿದರು. ಅಣ್ಣಾ ಬಾಂಡ್ ಡ್ಯಾನ್ಸ್. ಅದು ಕೂಡ ಅಪ್ಪು ಅವರ ಸ್ಟೆಪ್ ಅನ್ನೇ ನೆನಪಿಸಿತ್ತು.

More from Filmibeat

English summary
Puneeth rajkumar in comedy khiladigalu show Time travel skit;
Read more about: tv sumanth reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X