For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ ತುಂಬ ಭಯ ಪಡುವುದು ಇವರಿಗೆ ಮಾತ್ರ

  |
  ಗೊತ್ತಿರದ ವಿಷಯಗಳ ಬಗ್ಗೆ ಬಾಯ್ಬಿಟ್ಟ ಪುನೀತ್..? | Puneeth Rajkumar | FILMIBEAT KANNADA

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಗೊತ್ತಿರದ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್. ಇತ್ತೀಚಿಗಷ್ಟೆ ಪ್ರಸಾರವಾದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಗ್ಗೇಶ್ ಪವರ್ ಸ್ಟಾರ್ ಗೆ ಪ್ರಶ್ನೆ ಕೇಳುವ ಮೂಲಕ ಅಪ್ಪು ಬಗ್ಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ.

  ಕಾರ್ಯಕ್ರಮದ ನಿಯಮದ ಪ್ರಕಾರ ಅಪ್ಪು ಹಾಟ್ ಸೀಟಿನಲ್ಲಿದ್ದ ಜಗ್ಗೇಶ್ ಗೆ ಪ್ರಶ್ನೆಗಳನ್ನು ಕೇಳಿದ್ರೆ ನಂತರ ಜಗ್ಗೇಶ್ ಕೂಡ ಪುನೀತ್ ಗೆ ಒಂದೊಂದು ಪ್ರಶ್ನೆಗಳನ್ನು ಕೇಳಿ ಯುವರತ್ನ ಬಗ್ಗೆ ಗೊತ್ತಿರದ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

  ಪುನೀತ್ ರಾಜ್ ಕುಮಾರ್ ಸದಾಕಾಲ ಧರಿಸುವ ಸರದ ರಹಸ್ಯ ಬಯಲುಪುನೀತ್ ರಾಜ್ ಕುಮಾರ್ ಸದಾಕಾಲ ಧರಿಸುವ ಸರದ ರಹಸ್ಯ ಬಯಲು

  ಅಪ್ಪುಗೆ ನವರಸನಾಯಕ ಜಗ್ಗೇಶ್ ಕೇಳಿದ ಪ್ರಶ್ನೆ "ಭಯ ಎನ್ನುವುದು ಸಹಜ. ಮನೆಯಲ್ಲಿ ಯಾರೊ ಒಬ್ಬ ವ್ಯಕ್ತಿಗೆ ಭಯಪಡುತ್ತೀರಿ ಅಂದ್ರೆ ಅದೂ ಯಾರು?" ಅಂತ ಕೇಳಿದ್ದಾರೆ.

  ಇದಕ್ಕೆ ಪುನೀತ್ "ಬಾಲ್ಯದಲ್ಲಿ ಅಪ್ಪನ ಕಂಡರೆ ತುಂಬ ಭಯ. ಆದ್ರೆ ಯಾಕೆ ಅಂತ ಗೊತ್ತಿಲ್ಲ. ಅವರು ಯಾವತ್ತು ಬೈದಿಲ್ಲ. ಹಾಗಾಗಿ ಯಾವತ್ತಾದರು ಬೈದುಬಿಡುತ್ತಾರೆನೋ ಎನ್ನುವ ಭಯ ಇತ್ತು" ಎಂದು ಉತ್ತರಿಸಿದ್ದಾರೆ. ಆದ್ರೆ ಇದು ಅಂದು.

  ಈಗ ಅಪ್ಪು ಭಯಪಡುವುದು ಯಾರಿಗೆ ಗೊತ್ತಾ? ಪುನೀತ್ ರಾಜ್ ಕುಮಾರ್ ಗೆ ಎರಡನೆ ಮಗಳು ಅಂದ್ರೆ ಭಯ ಅಂತೆ. ಅದೂ ಬಿಟ್ರೆ ಯಾರಿಗೂ ಭಯಪಡುವುದಿಲ್ಲ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳಿಗೆ ದೇವರು ಎಷ್ಟು ಶಕ್ತಿ ಕೊಟ್ಟಿದ್ದಾನೆ. ಹೆಣ್ಣುಮಕ್ಕಳು ಕಂಡ್ರೆ ಎಲ್ಲರಿಗೂ ಭಯ ಅಂತ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ರು.

  ನಟ ಜಗ್ಗೇಶ್ ಎರಡನೆ ಬಾರಿಗೆ ಕನ್ನಡದ ಕೊಟ್ಯಧಿಪತಿಯಲ್ಲಿ ಭಾಗಿಯಾಗಿದ್ದಾರೆ. ಅದೂ ಪುನೀತ್ ರಾಜ್ ಕುಮಾರ್ ಗಾಗಿ ಎಂದು ಶೋನಲ್ಲಿ ಹೇಳಿದ್ದಾರೆ. ನೀರಿಗಾಗಿ ಜಗ್ಗೇಶ್ ಕನ್ನಡದ ಕೋಟ್ಯಧಿಪತಿ ಹಾಟ್ ಸೀಟ್ ಏರಿದ್ದಾರೆ.

  English summary
  Kannada actor Power star Puneeth Rajkumar fears for his daughter said in Kannadada Kotyadhipathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X