ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ 'ಇದನ್ನ' ಕಂಡ್ರೆ ಈಗಲೂ ಭಯ.!

Recommended Video

Puneeth Rajkumar has Revealed About His Afraid | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಪುನೀತ್ ರಾಜ್ ಕುಮಾರ್ ಅಂದ್ರೆ ಒಂಥರಾ ಹೈ ವೋಲ್ಟೇಜ್ ಕರೆಂಟ್ ಇದ್ದ ಹಾಗೆ. ತೆರೆ ಮೇಲೆ ರೌಡಿಗಳನ್ನ ಚೆಂಡಾಡಿ ಪವರ್ ಸ್ಟಾರ್ ಅಂತ ಬಿರುದು ಪಡೆದುಕೊಂಡವರು ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್.

ಬಾಲ ನಟನಾಗಿ ತೆರೆಗೆ ಎಂಟ್ರಿಕೊಟ್ಟು ಸಕ್ಸಸ್ ಫುಲ್ ಹೀರೋ ಆಗಿ ಬೆಳೆದು ನಿಂತಿರುವ ಪುನೀತ್ ರಾಜ್ ಕುಮಾರ್ ಅಪ್ಪನಂತೆಯೇ ಸರಳ ವ್ಯಕ್ತಿತ್ವದ ಮನುಷ್ಯ. ದೈಹಿಕ ಕಸರತ್ತು, ಜಿಮ್ ವರ್ಕೌಟ್ ಮಾಡಿ ಫಿಟ್ ಆಗಿ, ಪಾದರಸದಂತೆ ಡ್ಯಾನ್ಸ್ ಮಾಡಿ ಅಭಿಮಾನಿಗಳಿಂದ ಚಪ್ಪಾಳೆಗಿಟ್ಟಿಸಿಕೊಂಡವರು ಅಪ್ಪು.

puneeth-rajkumar-is-afraid-of-injections

ಹೀಗಿರುವ ಪವರ್ ಸ್ಟಾರ್ ಗೂ ಸಾಮಾನ್ಯರಂತೆ ಈ ವಸ್ತುವನ್ನು ಕಂಡರೆ ಭಯವಂತೆ. ಅಷ್ಟೊಂದು ಖಡಕ್ ಆಗಿರುವ ಹೀರೋಗೂ ಭಯ ಹುಟ್ಡಿಸುವ ಆ ವಸ್ತು ಯಾವುದು ಅಂತೀರಾ...ಅದೇ ಇಂಜೆಕ್ಷನ್.!

ಹೌದು, ಇಂಜೆಕ್ಷನ್ ಕಂಡ್ರೆ ಪುನೀತ್ ರಾಜ್ ಕುಮಾರ್ ಗೆ ಇನ್ನಿಲ್ಲದ ಭಯ. ಹುಷಾರಿಲ್ಲ ಅಂತ ಡಾಕ್ಟರ್ ಬಳಿಗೆ ಹೋದಾಗ ಇಂಜೆಕ್ಷನ್ ಕೊಡುವ ಸನ್ನಿವೇಶ ಬಂದಾಗಲೂ ಮಾತ್ರೆಯಿಂದ ವಾಸಿಯಾಗೋದಾದ್ರೆ ಅದನ್ನೇ ಕೊಡಿ ಅಂತ ಡಾಕ್ಟರ್ ಅವರನ್ನ ಕೇಳಿಕೊಳ್ತಾರಂತೆ ಪುನೀತ್. ಅದ್ಯಾಕೆ ಅವರಿಗೆ ಇಂಜೆಕ್ಷನ್ ಮೇಲೆ ಭಯವೋ ಅವರಿಗೇ ಗೊತ್ತಿಲ್ಲವಂತೆ.

ಹಾಗಂತ ಸ್ವತಃ ಪುನೀತ್ ರಾಜ್ ಕುಮಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಧಿಪತಿ' ವೇದಿಕೆಯಲ್ಲಿ ಈ ಇಂಜೆಕ್ಷನ್ ಭಯದ ಸೀಕ್ರೆಟ್ ನ ಬಿಚ್ಚಿಟ್ಟರು.

More from Filmibeat

English summary
Kannada Actor Puneeth Rajkumar has revealed that he is afraid of Injections.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X