ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಮಗುವಿಗೆ ನಾಮಕರಣ ಮಾಡಿದ ಪುನೀತ್
ಕನ್ನಡದ ಕೋಟ್ಯಧಿಪತಿ ಪ್ರಶ್ನೆ, ಉತ್ತರ, ಹಣ, ಜ್ಞಾನಾರ್ಜನೆ ಮಾತ್ರವಲ್ಲದೆ ಈ ವೇದಿಕೆಯಲ್ಲಿ ಮತ್ತೊಂದು ವಿಶೇಷ ಸನ್ನಿವೇಶ ನೋಡುಗರ ಮನ ಮುಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಈ ರಿಯಾಲಿಟಿ ಶೋ ಕೋಟ್ಯಾಂತರ ಅಭಿಮಾನಿಗಳ ಹಾಟ್ ಫೇವರಿಟ್ ಕಾರ್ಯಕ್ರಮವಾಗಿದೆ.
ಈ ವೇದಿಕೆಯಲ್ಲಿ ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಟಾಣಿ ಮಗುವಿಗೆ ನಾಮಕರಣ ಮಾಡಿದ್ದಾರೆ. ಹಾಟ್ ಸೀಟಿನಲ್ಲಿ ಕೂತಿದ್ದ ಸ್ಪರ್ಧಿ ಶ್ವೇತಾ ಅವರ ಐದು ತಿಂಗಳ ಮಗುವಿಗೆ ಅಪ್ಪು ಹೆಸರಿಟ್ಟ ಅಪರೂಪದ ಘಳಿಗೆಯನ್ನು ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ನೋಡುಗರು ಕಣ್ತುಂಬಿಕೊಂಡರು.
ಶ್ವೇತಾ ಕುಟುಂಬ, ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಂತೆ. ಡಾ.ರಾಜ್ ಅವರನ್ನು ನೋಡಲು ಸಾಧ್ಯವಾಗಲಿಲ್ಲ ಆದ್ರೆ ಅವರ ಮೂರು ಮುತ್ತುಗಳಂತೆ ಇರುವ ಮಕ್ಕಳನ್ನು ನೋಡುವ ಭಾಗ್ಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಶ್ವೇತಾ, ತನ್ನ ಮಗುವಿಗೆ ಪುನೀತ್ ಅವರೇ ನಾಮಕರಣ ಮಾಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ರು.

ಇನ್ನು ನಾಮಕರಣ ಆಗಿರದ ಐದು ತಿಂಗಳ ಮಗುವಿಗೆ ಅಪ್ಪು ಖುಷಿಯಿಂದಲೆ ನಾಮಕರಣ ಮಾಡಿದ್ದಾರೆ. ಶೌರಿ ಮತ್ತು ಭವಿಕ್ ಎನ್ನುವ ಹೆಸರಿಡುವ ಮೂಲಕ ಶ್ವೇತಾ ಕುಟುಂಬದ ಆಸೆಯನ್ನು ಈಡೇರಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಈ ಸರಳತೆ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ ಗಳ ಮಹಾಪೂರವೆ ಹರಿದುಬರುತ್ತಿದೆ.


Click it and Unblock the Notifications











