For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕಿರುತೆರೆಯಲ್ಲಿ ಪುನೀತ್ ರಾಜ್ ಕುಮಾರ್: ಪವರ್ ಸ್ಟಾರ್ ಶೋ ಯಾವುದು?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೊತೆಗೆ ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ನಿರ್ಮಾಣದಲ್ಲಿ ಅನೇಕ ಸಿನಿಮಾಗಳು ಮೂಡಿಬರುತ್ತಿವೆ. ಇದೀಗ ಅಪ್ಪು ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಮತ್ತೆ ಕಿರುತೆರೆ ಕಡೆ ಮುಖ ಮಾಡಿದ ಪವರ್ ಸ್ಟಾರ್ | Puneeth Rajkumar

  ವಿಶೇಷ ಎಂದರೆ ಅಪ್ಪು ನಿರ್ಮಾಣ ಮಾಡುತ್ತಿರುವುದು ಭಕ್ತಿ ಪ್ರಧಾನ ಧಾರಾವಾಹಿ. ಅತೀ ಶೀಘ್ರದಲ್ಲೇ ಈ ಧಾರಾವಾಹಿ ಪ್ರಸಾರವಾಗಲಿದ್ದು, ಧಾರಾವಾಹಿಗೆ 'ನೇತ್ರಾವತಿ' ಎಂದು ಹೆಸರಿಡಲಾಗಿದೆ. ಹೆಸರೇ ಹೇಳುವ ಹಾಗೆ ಇದು ಮಂಜುನಾಥ ಸ್ವಾಮಿಯ ಸುತ್ತ ಇರುವ ಇರುವ ಕಥೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

  ಪುನೀತ್ 'ಯುವರತ್ನ' ಸಿನಿಮಾದಲ್ಲಿ 'ರಾಧಾ ರಮಣ' ಖ್ಯಾತಿಯ ನಟಿ ಶ್ವೇತಾ ಪ್ರಸಾದ್

  ಮಹಿಳಾ ಪ್ರಧಾನ ಧಾರಾವಾಹಿ ಇದಾಗಿದ್ದು, ಈ ಧಾರಾವಾಹಿಯ ನಾಯಕಿ ಮಂಜುನಾಥ ಸ್ವಾಮಿಯ ಅಪ್ಪಟ ಭಕ್ತೆಯಾಗಿರುತ್ತಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಂದಹಾಗೆ ಕಾರ್ಯಕ್ರಮದ ಪ್ರಸಾರ ದಿನಾಂಕ, ಸಮಯ ಮತ್ತು ಚಾನಲ್ ಹೆಸರು ಇನ್ನು ರಿವೀಲ್ ಆಗಿಲ್ಲ.

  ಪವರ್ ಸ್ಟಾರ್ ಗೆ ಕಿರುತೆರೆ ಏನು ಹೊಸದಲ್ಲ. ಈ ಮೊದಲು ಜನಪ್ರಿಯ ಶೋ ಕನ್ನಡ ಕೋಟ್ಯಧಿಪತಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ಫ್ಯಾಮಿಲಿ ಪವರ್ ಎನ್ನುವ ಗೇಮ್ ಶೋ ಅನ್ನು ನಡೆಸಿಕೊಟ್ಟಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಅಂದಹಾಗೆ ಪವರ್ ಸ್ಟಾರ್ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಈಗಾಗಲೇ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಕೂಡ ಸೇರ್ಪಡೆಯಾಗಿದ್ದಾರೆ.

  ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬರುತ್ತಿದ್ದು, ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಜೊತೆಗೆ ಅಪ್ಪು ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

  English summary
  Power star Puneeth Rajkumar produce for new serial Nethravathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X