ಪುನೀತ್ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಒಪ್ಪಿಕೊಂಡ ಕಾರಣ ಬಹಿರಂಗ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಒಂದಿಷ್ಟು ದಿನಗಳು ಕಿರುತೆರೆಯಿಂದ ದೂರ ಇದ್ದ ಅಪ್ಪು, ಈಗ ಮತ್ತೆ ಮರಳಿದ್ದಾರೆ. ಕನ್ನಡ ಕಿರುತೆರೆಯ ಪ್ರಸಿದ್ಧಿ ರಿಯಾಲಿಟಿ ಶೋಗಳಲ್ಲಿ ಒಂದಾದ 'ಕನ್ನಡದ ಕೋಟ್ಯಾಧಿಪತಿ' ಮತ್ತೆ ಬರ್ತಿದೆ.

ಕೋಟ್ಯಾಧಿಪತಿ ಮೂಲಕ ಪವರ್ ಸ್ಟಾರ್ ಕಿರುತೆರೆಗೆ ವಾಪಸ್ ಆಗುತ್ತಿದ್ದಾರೆ. ಈಗಾಗಲೆ 'ಕನ್ನಡದ ಕೋಟ್ಯಾಧಿಪತಿ ಸೀಸನ್-4' ಗೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು ಪವರ್ ಸ್ಟಾರ್ ಪುನೀತ್ ಅವರ ಒಂದಿಷ್ಟು ಪ್ರೋಮೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಪ್ಪು ಈಗಾಗಲೆ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

ಪುನೀತ್ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡಲು ಒಂದು ಬಲವಾದ ಕಾರಣವಿದೆಯಂತೆ. ಆ ಕರಾಣ ದಿಂದನೆ ಪುನೀತ್ ತುಂಬ ಇಷ್ಟಪಟ್ಟು ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರಂತೆ. ಆ ಕಾರಣನೆ ಬಿ ಗ್ ಬಿ ಅಮಿತಾಭ್ ಬಚ್ಚನ್ ಮತ್ತು ಡಾ.ರಾಜ್ ಕುಮಾರ್ ಅಂತೆ. ಮುಂದೆ ಓದಿ..

ಪುನೀತ್ ಗೆ ಬಿಗ್ ಬಿ ಸ್ಫೂರ್ತಿ

ಪುನೀತ್ ಗೆ ಬಿಗ್ ಬಿ ಸ್ಫೂರ್ತಿ

ಹಿಂದಿಯಲ್ಲಿ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ಬಾರಿ ಖ್ಯಾತಿ ಗಳಿಸಿತ್ತು. ಅಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನೋಡಲು ಇಡೀ ದೇಶವೆ ಕಾತುರದಿಂದ ಕಾಯುತ್ತಿತ್ತು. ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದ ರೀತಿಗೆ ಕಿರುತರೆ ಪ್ರೇಕ್ಷಕರು ಫಿದಾ ಆಗಿದ್ದರು. ಬಿಗ್ ಬಿ ಸ್ಟೈಲ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಇಷ್ಟಪಡುತ್ತಾರಂತೆ. ಹಾಗಾಗಿ ಅಪ್ಪುಗೆ ಬಿಗ್ ಬಿ ನೇ ಸ್ಫೂರ್ತಿ ಅಂತೆ.

ಡ.ರಾಜ್ ಗೆ ತುಂಬ ಇಷ್ಟವಾದ ಕಾರ್ಯಕ್ರಮ

ಡ.ರಾಜ್ ಗೆ ತುಂಬ ಇಷ್ಟವಾದ ಕಾರ್ಯಕ್ರಮ

ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ನಡೆಸಿ ಕೊಡುವ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ಡಾ.ರಾಜ್ ಕುಮಾರ್ ಅವರಿಗೆ ತುಂಬ ಇಷ್ಟವಾದ ಕಾರ್ಯಕ್ರಮ. ಹಾಗಾಗಿ ಪುನೀತ್ ರಾಜ್ ಕುಮಾರ್ ಅವರು 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮ ನಡೆಸಿಕೊಡುವುದರಿಂದ ಅವರಿಗೆ ಗೌರವ ಸಲ್ಲಿದಂತೆ ಆಗುತ್ತೆ ಎನ್ನುವ ಕಾರಣಕ್ಕೆ ಕೋಟ್ಯಾಧಿಪತಿಯಾಗಿ ಪುನೀತ್ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಅಮಿತಾಭ್ ಭೇಟಿಯಾಗಿದ್ದ ಪುನೀತ್

ಅಮಿತಾಭ್ ಭೇಟಿಯಾಗಿದ್ದ ಪುನೀತ್

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗಿದ್ರಂತೆ. ಅಮಿತಾಭ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಹೋಗಿದ್ರಂತೆ. ಆಗ ಅಮಿತಾಭ್ ಅವರನ್ನು ಮಾತನಾಡಿಸಿದ್ದಾರೆ. ಕಾರ್ಯಕ್ರಮದ ಬ್ರೇಕ್ ನಡುವೆ ಪುನೀತ್ ಅವರನ್ನು ಅಮಿತಾಭ್ ವೀಕ್ಷಕರಿಗೆ ಪರಿಚಯಿಸಿಕೊಟ್ಟು, ಕನ್ನಡದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಎಂದು ಪರಿಚಯಿಸಿಕೊಟ್ಟಿದ್ರಂತೆ.

ಕೋಟ್ಯಾಧಿಪತಿಯಲ್ಲಿ ಪುನೀತ್ ಮೆಚ್ಚಿದ ಭಾಗ

ಕೋಟ್ಯಾಧಿಪತಿಯಲ್ಲಿ ಪುನೀತ್ ಮೆಚ್ಚಿದ ಭಾಗ

ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ತುಂಬ ಇಷ್ಟವಾದ ಭಾಗ ಅಂದ್ರೆ ಜನರ ಜೊತೆ ಮಾತನಾಡುವುದಂತೆ. ಜನರಿಂದ ಕೆಲವು ವಿಚಾರಗಳನ್ನು ಕಲಿತುಕೊಳ್ಳುವುದು ಮತ್ತು ಅವರ ಸಂತೋಷವನ್ನು ಹಂಚಿಕೊಳ್ಳುವುದು, ಅವರ ಖುಷಿಯಲ್ಲಿ ಭಾಗಿಯಾಗುವುದು ಅಂದ್ರೆ ಪುನೀತ್ ಗೆ ತುಂಬಾ ಇಷ್ಟವಂತೆ.

More from Filmibeat

English summary
Kannada actor Puneeth Rajkumar revealed acceptance to hosting of 'Kannadada kotyadipathi' reality show. Kannadada kotyadhipathi 4 starts from june 22nd in Colors Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X