ಪುನೀತ್ ರಾಜ್ ಕುಮಾರ್ ಬಳಿ ಇರುವ ತುಂಬಾ ಕಾಸ್ಟ್ಲೀ ವಸ್ತು ಇದೆ
Recommended Video
ಸೆಲೆಬ್ರೆಟಿಗಳು ಎಂದ ಮೇಲೆ ಅವರ ಬಳಿ ಕಾಸ್ಟ್ಲೀ ವಸ್ತುಗಳು, ಅಮೂಲ್ಯವಾದ ವಸ್ತುಗಳು ಇದ್ದೇ ಇರುತ್ತೆ. ಕಾರು, ಬಂಗಲೆ, ಕಾಸ್ಟ್ಯೂಮ್, ವಾಚ್, ಗೋಲ್ಡ್ ಹೀಗೆ ಸಾಕಷ್ಟು ಕಾಸ್ಟ್ಲೀ ವಸ್ತುಗಳ ಒಡೆಯರಾಗಿರುತ್ತಾರೆ. ಪುನೀತ್ ಬಳಿ ಇದೆಲ್ಲ ಇದೆ. ಅದೆಲ್ಲದಕ್ಕಿಂತ ಬೆಲೆ ಬಾಳುವ ವಸ್ತುವೊಂದರ ಬಗ್ಗೆ ಹೇಳಿಕೊಂಡಿದ್ದಾರೆ.
ಪವರ್ ಸ್ಟಾರ್ ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲು ಮಿಂಚುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಆದ್ರೆ ಇತ್ತೀಚಿನ ಶೋ ವೊಂದರಲ್ಲಿ ಸ್ಪರ್ಧಿಗಳಿಗೆ ಪುನೀತ್ ಪ್ರಶ್ನೆ ಕೇಳುವ ಬದಲಿಗೆ ಪುನೀತ್ ಗೆ ಒಬ್ಬರು ಪ್ರಶ್ನೆ ಕೇಳಿದ್ದಾರೆ.
ನಿರೂಪಕ ಅಕುಲ್ ಬಾಲಾಜಿ ಅಪ್ಪುಗೆ ಒಂದಿಷ್ಟು ಇಂಟ್ರಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅಪ್ಪು ಬಳಿ ಇರುವ ತುಂಬಾ ಕಾಸ್ಟ್ಲೀ ವಸ್ತು ಯಾವುದು? ಎಂದು ಅಕುಲ್ ಕೇಳಿದ ಪ್ರಶ್ನೆಗೆ, ಪುನೀತ್ ಯೋಚಿಸುತ್ತಿದ್ದರು. ಆಗ ಅಕುಲ್ ನಾನೆ ಹೇಳುತ್ತೀನಿ ಎಂದು ಉತ್ತರಿಸಿದ್ದಾರೆ. ಪುನೀತ್ ಬಳಿ ಇರುವ ಕಾಸ್ಟ್ಲೀ ವಸ್ತು ಅಂದ್ರೆ "ಕರ್ನಾಟಕ ಜನರ ಪ್ರೀತಿ".

"ಇದಕ್ಕೆ ಬೆಲೆ ಕಟ್ಟಲು ಆಗಲೆ ಸಾಧ್ಯನೇ ಇಲ್ಲ. ಹಣದ ದೃಷ್ಟಿಯಲ್ಲಿ ಯಾವತ್ತು ಯೋಚಿಸಿಯೆ ಇಲ್ಲ. ಗುಣದ ದೃಷ್ಟಿಯಲ್ಲಿಯೆ ಬೇಕು. ನಟ ಆದ್ಮೇಲೆ ಅತೀ ದೊಡ್ಡ ಶ್ರೀಮಂತ ಆಗುತ್ತಾನೆ. ಯಾಕಂದ್ರೆ ಕಡೆ ದಿನಗಳ ವರೆಗೂ ಎಲ್ಲೇ ಹೋದ್ರು ಕಡೆಗೆ ಒಂದು ಕಪ್ ಕಾಫಿ ಮತ್ತು ಊಟ ಖಂಡಿತಾ ಸಿಗುತ್ತೆ. ಒಂದು ಸರಿ ಹೀರೋ ಆದ್ರೆ ಅವನು ಇಷ್ಟ ಪಡುವಂತಹ ಅಭಿಮಾನಿಗಳು ಯಾವಾಗಲು ಅವನಿಗೆ ಹೀರೋ ಆಗಿರುತ್ತಾರೆ" ಎಂದು ಅಭಿಮಾನಿ ದೇವರುಗಳನ್ನು ಕೊಂಡಾಡಿದ್ದಾರೆ.
ಪವರ್ ಸ್ಟಾರ್ ಮಾತುಗಳಿಗೆ ಅಭಿಮಾನಿಗಳ ಮೆಚ್ಚುಗೆಯ ಮಹಾಪೂರವೆ ಹರಿದು ಬಂದಿದೆ. ಪುನೀತ್ ಸರಳತೆಗೆ ಅಭಿಮಾನಿಗಳ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











