»   » 'ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು?

'ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು?

Posted By:
Subscribe to Filmibeat Kannada
ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು? | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಲಿರುವ ಫ್ಯಾಮಿಲಿ ಪವರ್ ಗೇಮ್ ಶೋ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಕಾರ್ಯಕ್ರದ ರೆಕಾರ್ಡಿಂಗ್ ಶುರುವಾಗಿದೆ.

ಈ ಮಧ್ಯೆ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರು ಶೂಟಿಂಗ್ ಸೆಟ್ ನಿಂದ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಈ ವೇಳೆ ಕಾರ್ಯಕ್ರಮದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡರು.

ಫ್ಯಾಮಿಲಿ ಶೋ ಬಗ್ಗೆ ಪುನೀತ್ ಅವರಿಗೆ ಮೊದಲು ಕೇಳಿದಾಗ, ಅವರ ರಿಯಾಕ್ಷನ್ ಹೇಗಿತ್ತು? ಮತ್ತು ಅವರ ಪತ್ನಿ ಅಶ್ವಿನಿ ಏನಂದ್ರು ಎಂದು ತಿಳಿಯಲು ಮುಂದೆ ಓದಿ.....

ಫ್ಯಾಮಿಲಿ ಶೋ ಶೂಟಿಂಗ್ ಸ್ಟಾರ್ಟ್

'ಫ್ಯಾಮಿಲಿ ಪವರ್' ಕಾರ್ಯಕ್ರಮದ ಚಿತ್ರೀಕರಣ ಆರಂಭವಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಸಾಂಗ್ ಮುಗಿದಿದೆಯಂತೆ. ಬುಧವಾರ ಎಪಿಸೋಡ್ ರೆಕಾರ್ಡ್ ಆಗಲಿದ್ದು, ಈ ವಾರಾಂತ್ಯಕ್ಕೆ 'ಫ್ಯಾಮಿಲಿ ಪವರ್' ನೋಡಬಹುದು.

ಪುನೀತ್ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಯಾವಾಗ ಶುರು..?

ಪುನೀತ್ ಮನೆಗೆ ಹೋದಾಗ...

'ಫ್ಯಾಮಿಲಿ ಪವರ್' ಕಾರ್ಯಕ್ರಮದ ಬಗ್ಗೆ ಪುನೀತ್ ರಾಜ್ ಕುಮಾರ್ ಅವರ ಬಳಿ ಮಾತನಾಡಲು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರು ಮನೆಗೆ ಹೋದಾಗ, ಪುನೀತ್ ಮತ್ತು ಅವರ ಪತ್ನಿ ಅಶ್ವಿನಿ ಇಬ್ಬರು ಇದ್ದರು. ಈ ವೇಳೆ ಮೂರ್ನಾಲ್ಕು ಸಾಲಿನಲ್ಲಿ ಈ ಶೋ ಕಾನ್ಸೆಪ್ಟ್ ಬಗ್ಗೆ ವಿವರಿಸಿದರಂತೆ ನಿರ್ದೇಶಕರು.

ಪುನೀತ್ ಸಾರಥ್ಯದ ಟಿವಿ ಶೋ ಹೆಸರು ಇದೇ ನೋಡಿ.!

ಮೆಚ್ಚಿಕೊಂಡ ದಂಪತಿ

'ಫ್ಯಾಮಿಲಿ ಪವರ್' ಶೋ ಬಗ್ಗೆ ಕಾನ್ಸೆಪ್ಟ್ ಹೇಳಿ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಮೆಚ್ಚಿಕೊಂಡರಂತೆ. ಈ ಶೋ ಸಕ್ಸಸ್ ಆಗುತ್ತೆ ಎಂದು ವಿಶ್ವಾಸವನ್ನ ಕೂಡ ವ್ಯಕ್ತಪಡಿಸಿದರಂತೆ. ಅದು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಜೋಶ್ ಹೆಚ್ಚಿಸಿತು ಎಂದು ನಿರ್ದೇಶಕರು ಹೇಳಿದರು.

ಫ್ಯಾಮಿಲಿಗಳ ನಡುವೆ 'ಗೇಮ್'

ಎರಡು ಕುಟುಂಬದವರು ನಡುವೆ ನಡಯುವ ಗೇಮ್ ಶೋ ಇದು. ಪ್ರಶ್ನೆ ಉತ್ತರ, ಆಟಗಳು ಈ ಕಾರ್ಯಕ್ರಮದಲ್ಲಿ ಇರುತ್ತೆ. ಗೆದ್ದವರಿಗೆ 10 ಲಕ್ಷ ಬಹುಮಾನ ಸಿಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ.

English summary
Power star puneeth rajkumar's new reality show 'Family Power' shooting start. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡುತ್ತಿರುವ 'ಫ್ಯಾಮಿಲಿ ಪವರ್' ಶೋನ ಚಿತ್ರೀಕರಣ ಆರಂಭವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada