ಟಿವಿಗೆ 'ಜೇಮ್ಸ್': ಮನೆ ಮನೆಗೂ ಬರುತ್ತಿದ್ದಾರೆ ಪುನೀತ್ ರಾಜ್‌ಕುಮಾರ್!

ಕನ್ನಡಿಗರ ಹೃದಯಗಳಲ್ಲಿ ವಿರಾಜಮಾನರಾಗಿರುವ ಪುನೀತ್ ರಾಜ್‌ಕುಮಾರ್ ಇದೀಗ ಕನ್ನಡಿಗರ ಮನೆ-ಮನೆಗೂ ಬರಲಿದ್ದಾರೆ!

ಪುನೀತ್ ರಾಜ್‌ಕುಮಾರ್ ನಿಧನರಾದ ಬಳಿಕ ಬಿಡುಗಡೆ ಆದ 'ಜೇಮ್ಸ್' ಸಿನಿಮಾ ಚಿತ್ರಮಂದಿರಗಳಲ್ಲಿ ಬೃಹತ್ ದಾಖಲೆ ನಿರ್ಮಿಸಿತ್ತು. ಚಿತ್ರಮಂದಿರಗಳಿಂದ ವಿಮುಖರಾಗಿದ್ದವರು ಸಹ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸಿದ್ದರು.

ಆದರೂ ಎಷ್ಟೋ ಮಂದಿ 'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವುದರಿಂದ ವಂಚಿತರಾಗಿ ನಿರಾಸೆ ಅನುಭವಿಸಿದ್ದರು. ಆದರೀಗ 'ಜೇಮ್ಸ್' ಸಿನಿಮಾ ಕಿರುತೆರೆಗೆ ಬರುತ್ತಿದೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ಕಿರುತೆರೆಗೆ ಬರುತ್ತಿದ್ದು, ವೀಕ್ಷಕರು ಅಪ್ಪುವನ್ನು ಮನೆಯಲ್ಲಿಯೇ ಕೂತು ಕಣ್ತುಂಬಿಕೊಳ್ಳಬಹುದಾಗಿದೆ.

ಜುಲೈ 17 ರಂದು ಪ್ರಸಾರವಾಗಲಿದೆ

ಜುಲೈ 17 ರಂದು ಪ್ರಸಾರವಾಗಲಿದೆ

ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಜುಲೈ 17 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಜೆ 5:30ಕ್ಕೆ ಪ್ರಸಾರವಾಗಲಿದೆ. 'ಜೇಮ್ಸ್' ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ದುಬಾರಿ ಬೆಲೆಗೆ ಸ್ಟಾರ್ ಸುವರ್ಣ ವಾಹಿನಿ ಖರೀದಿಸಿತ್ತು. ಇದೀಗ ಉತ್ತಮ ಸಮಯ ನೋಡಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ.

ಟಿಆರ್‌ಪಿ ದಾಖಲೆಗಳನ್ನು ಪುಡಿ ಮಾಡುವ ನಿರೀಕ್ಷೆ

ಟಿಆರ್‌ಪಿ ದಾಖಲೆಗಳನ್ನು ಪುಡಿ ಮಾಡುವ ನಿರೀಕ್ಷೆ

ಚಿತ್ರಮಂದಿರಗಳಲ್ಲಿ ದಾಖಲೆ ನಿರ್ಮಿಸಿದ 'ಜೇಮ್ಸ್' ಸಿನಿಮಾ ಟಿವಿಯಲ್ಲಿಯೂ ದಾಖಲೆ ನಿರ್ಮಿಸುವ ನಿರೀಕ್ಷೆ ಇದೆ. ಈ ಹಿಂದಿನ ಟಿಆರ್‌ಪಿ ದಾಖಲೆಗಳನ್ನೆಲ್ಲ ಪುಡಿಗಟ್ಟಿ ಹೊಸ ದಾಖಲೆಯನ್ನು 'ಜೇಮ್ಸ್' ಸಿನಿಮಾ ಗಳಿಸುವ ಸಾಧ್ಯತೆ ಇದೆ. ವಾಹಿನಿ ಸಹ ಅದಕ್ಕೆ ಪೂರಕವಾದ ಪ್ರಚಾರವನ್ನು ಮಾಡುತ್ತಿದೆ. ಈಗಾಗಲೇ ಪುನೀತ್ ಅಭಿಮಾನಿಗಳು ಸಹ 'ಜೇಮ್ಸ್' ಸಿನಿಮಾ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಖುಷಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಚಿತ್ರಮಂದಿರ, ಒಟಿಟಿಯಲ್ಲಿ ಅಬ್ಬರಿಸಿದ 'ಜೇಮ್ಸ್'

ಚಿತ್ರಮಂದಿರ, ಒಟಿಟಿಯಲ್ಲಿ ಅಬ್ಬರಿಸಿದ 'ಜೇಮ್ಸ್'

ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಮಾರ್ಚ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಅಪ್ಪು ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದರು. ರಾಜ್ಯದಾದ್ಯಂತ ಭಾರಿ ಸಂಖ್ಯೆಯ ಜನ 'ಜೇಮ್ಸ್' ಸಿನಿಮಾ ವೀಕ್ಷಿಸಿದ್ದರು. ಆ ಬಳಿಕ ಏಪ್ರಿಲ್ 14 ರಂದು ಸೋನಿ ಲಿವ್ ಒಟಿಟಿಯಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಟಿವಿಯಲ್ಲಿ ಸಿನಿಮಾ ಬಿಡುಗಡೆ ಆಗಲಿಕ್ಕಿದೆ.

ಇನ್ನೂ ಎರಡು ಸಿನಿಮಾ ತೆರೆಗೆ ಬರಲಿಕ್ಕಿವೆ

ಇನ್ನೂ ಎರಡು ಸಿನಿಮಾ ತೆರೆಗೆ ಬರಲಿಕ್ಕಿವೆ

'ಜೇಮ್ಸ್' ಸಿನಿಮಾ ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ. ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದರು, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದದರು. 'ಜೇಮ್ಸ್' ಬಳಿಕ ಡಾರ್ಲಿಂಗ್ ಕೃಷ್ಣ ನಟಿಸಿರುವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಪುನೀತ್ ನಟಿಸಿದ್ದಾರೆ. 'ಗಂಧದ ಗುಡಿ' ಹೆಸರಿನ ಡಾಕ್ಯುಸಿನಿಮಾದಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರಲಿದೆ.

More from Filmibeat

English summary
Puneeth Rajkumar's James world television premiere on July 17th on Star Suvarna channel. Fans awaiting for the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X