»   » ವಿಡಿಯೋ: ಪುನೀತ್ ನಿರೂಪಣೆಯ ಹೊಸ ರಿಯಾಲಿಟಿ ಶೋ ಪ್ರೋಮೋ ನೋಡಿ

ವಿಡಿಯೋ: ಪುನೀತ್ ನಿರೂಪಣೆಯ ಹೊಸ ರಿಯಾಲಿಟಿ ಶೋ ಪ್ರೋಮೋ ನೋಡಿ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಕಿರುತೆರೆಗೆ ಮರಳುವ ಸುದ್ದಿಯನ್ನು ನಿನ್ನೆ ತಾನೇ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿರುತ್ತೀರಿ. ಅದರ ಹಿಂದೆಯೇ ಇದೀಗ ಆ ಕಾರ್ಯಕ್ರಮದ ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಗೆ ಪವರ್ ಸ್ಟಾರ್ ಪುನೀತ್ ನಿರೂಪಕ!

ಕಾರ್ಯಕ್ರಮದ ಪ್ರೋಮೋ ಒಮ್ಮೆ ನೋಡಿದ ತಕ್ಷಣ ಇಷ್ಟವಾಗಿ ಬಿಡುತ್ತದೆ. ಪುನೀತ್ ಚಿಕ್ಕ ವಯಸ್ಸಿನ ಫೋಟೋದೊಂದಿಗೆ ಶುರುವಾಗಿ ಬಳಿಕ ಮಗುವನ್ನು ಮಲಗಿರುವ ದೃಶ್ಯ ಪ್ರೋಮೋದಲ್ಲಿದೆ. ಜೊತೆಗೆ ಪ್ರೋಮೋದಲ್ಲಿ ಅಪ್ಪು ಹಾಡಿರುವ 'ಬಾನ ದಾರಿಯಲ್ಲಿ...' ಹಾಡು ಗಮನ ಸೆಳೆಯುತ್ತದೆ.

Puneeth Rajkumar's new reality show promo out

ಮುಖ್ಯವಾಗಿ ಈ ಪ್ರೋಮೋ ಹೊಸ ಕಾರ್ಯಕ್ರಮ ವಿಭಿನ್ನತೆಯನ್ನು ಹೇಳುತ್ತಿದೆ ಮತ್ತು ಕಾರ್ಯಕ್ರಮದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಒಂದು ಗೇಮ್ ಶೋ ಎಂದು ಹೇಳಲಾಗಿದೆ. 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮ ಮೂಲಕ ಮೊದಲ ಬಾರಿಗೆ ನಿರೂಪಕರಾಗಿದ್ದ ಪುನೀತ್ ಈಗ 5 ವರ್ಷದ ಬಳಿಕ ಮತ್ತೆ ಕಿರುತೆರೆಯ ಒಂದು ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ.

English summary
Watch video : Actor Puneeth Rajkumar's new reality show promo out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada