»   » ಪುನೀತ್ ಫ್ಯಾಮಿಲಿಯಲ್ಲಿ ಯಾರ ಸ್ವಭಾವ ಹೇಗೆ? ಅಪ್ಪು ಬಿಚ್ಚಿಟ್ಟ ಸಂಗತಿ.!

ಪುನೀತ್ ಫ್ಯಾಮಿಲಿಯಲ್ಲಿ ಯಾರ ಸ್ವಭಾವ ಹೇಗೆ? ಅಪ್ಪು ಬಿಚ್ಚಿಟ್ಟ ಸಂಗತಿ.!

Posted By:
Subscribe to Filmibeat Kannada
ಪುನೀತ್ ಫ್ಯಾಮಿಲಿಯಲ್ಲಿ ಯಾರ ಸ್ವಭಾವ ಹೇಗೆ? ಅಪ್ಪು ಬಿಚ್ಚಿಟ್ಟ ಸಂಗತಿ | Filmibeat Kannada

'ಕನ್ನಡ ರಾಜರತ್ನ' ಪುನೀತ್ ರಾಜ್ ಕುಮಾರ್ ಕಿರುತೆರೆಗೆ ಕಾಲಿಟ್ಟಿದ್ದು, ಈ ವಾರದಿಂದ ಪುನೀತ್ ನಿರೂಪಣೆ ಮಾಡಿಕೊಡಲಿರುವ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಆರಂಭವಾಗಲಿದೆ.

ಇದೊಂದು ಪಕ್ಕಾ ಫ್ಯಾಮಿಲಿ ಗೇಮ್ ಶೋ ಆಗಿದೆ. ಹಾಗಿದ್ರೆ, ಪುನೀತ್ ಫ್ಯಾಮಿಲಿ ಬಗ್ಗೆ ನಿಮಗೆಷ್ಟು ಗೊತ್ತು? ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಯಾರು ಹೇಗಿರುತ್ತಾರೆ? ಪಾರ್ವತಮ್ಮ ಅವರಿಗೆ ಅಪ್ಪು ಕಂಡ್ರೆ ಯಾಕೆ ಅಷ್ಟೊಂದು ಇಷ್ಟ? ಈ ಎಲ್ಲ ಕುತೂಹಲಗಳಿಗೆ ಸ್ವತಃ ಪವರ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ.

'ಫ್ಯಾಮಿಲಿ ಪವರ್' ಶೋನವರು ಪುನೀತ್ ಅವರ ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಪುನೀತ್ ತಮ್ಮ ಫ್ಯಾಮಿಲಿ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

ಇಷ್ಟ ಪಡುವ ಹಬ್ಬ

''ತುಂಬ ಇಷ್ಟ ಪಟ್ಟು ಮಾಡುವ ಹಬ್ಬ ದಸರಾ. ನಾವು ಬಳಸುವ ಎಲ್ಲ ವಸ್ತುಗಳನ್ನ ಅಂದವಾಗಿ ಒಂದೆಡೆ ಶೃಂಗಾರ ಮಾಡಿ, ಸಂಪ್ರದಾಯವಾಗಿ ಪೂಜೆ ಮಾಡುವುದು. ದೀಪಾವಳಿ ಅಂದ್ರೆನೂ ಇಷ್ಟ'' - ಪುನೀತ್ ರಾಜ್ ಕುಮಾರ್, ನಟ

'ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು?

ಮಕ್ಕಳನ್ನ ನಾನು ಬೈಯಲ್ಲ

''ನಾನು ಯಾವತ್ತು ಮಕ್ಕಳನ್ನ ಬೈಯ್ದಿಲ್ಲ, ರೇಗಾಡಿಲ್ಲ. ಸಣ್ಣ ಪುಟ್ಟ ದೂರುಗಳು ಬರುತ್ತೆ. ಆದ್ರೆ, ಯಾವಾಗಲೂ ಖುಷಿ ಖುಷಿ ಇರಬೇಕು. ಜಾಸ್ತಿ ತಲೆಕೆಡಿಸಿಕೊಳ್ಳಬಾರದು.'' - ಪುನೀತ್ ರಾಜ್ ಕುಮಾರ್, ನಟ

'ಅಂಜನೀಪುತ್ರ' ಪುನೀತ್ ಕೆರಿಯರ್ ನ ಮೈಲಿಗಲ್ಲು ಸಿನಿಮಾ, ಕಾರಣ ಏನು..?

ತುಂಬಾ ಹರಟೆ ಹೊಡೆಯುವುದು ಯಾರು?

''ನಮ್ಮ ಮನೆಯಲ್ಲಿ ಜನರಲ್ ನಾಲೆಡ್ಜ್ ಅಂದ್ರೆ, ಅದು ನನ್ನ ವೈಫ್. ಅವರು ಹೆಚ್ಚಾಗಿ ಪೇಪರ್ ಓದುತ್ತಾರೆ. ತುಂಬ ಹರಟೆ ಹೊಡೆಯುವುದು ಅಂದ್ರೆ ನಾನೇ. ಅಂದ್ರೆ, ಮನೆಯವರು, ಫ್ಯಾಮಿಲಿ ಜೊತೆ ಮಾತನಾಡುವಾಗ ಅಷ್ಟೆ'' - ಪುನೀತ್ ರಾಜ್ ಕುಮಾರ್, ನಟ

ನಮ್ಮ ಅಮ್ಮ ಯಾರಿಗೂ ಹೋಲಿಸಿಲ್ಲ

''ನಮ್ಮ ತಾಯಿ ನನ್ನನ್ನ ಯಾರಿಗೂ ಹೋಲಿಕೆ ಮಾಡುತ್ತಿರಲಿಲ್ಲ. ಅದು ಖುಷಿಯ ವಿಚಾರ. ಯಾವಾಗಲೂ ನನ್ನ ಮಗ ಎನ್ನುತ್ತಿದ್ದರು. ಅವರಿಗೆ ನನ್ನ ಮೇಲೆ ಒಂಥರಾ ನಂಬಿಕೆ ಅನ್ನಿಸುತ್ತೆ. ಅದನ್ನ ನಾನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದೇನೋ ಗೊತ್ತಿಲ್ಲ. ಆದ್ರೆ, ಯಾರು ಜೊತೆನೂ ಹೋಲಿಸಿ ನೋಡುತ್ತಿರಲಿಲ್ಲ. ತಂದೆ ಜೊತೆಗೆ ನಾವು ಯಾವುದು ಚಾಡಿ ಹೇಳುತ್ತಿರಲಿಲ್ಲ'' - ಪುನೀತ್ ರಾಜ್ ಕುಮಾರ್, ನಟ

ಡಿಸೆಂಬರ್ ಧಮಾಕ: ಕನ್ನಡ ಸಿನಿಮಾ vs ಪರಭಾಷೆ ಸಿನಿಮಾಗಳು

ಶಿವಣ್ಣನ ಬಗ್ಗೆ ಅಪ್ಪು ಅಭಿಮಾನ

''ಶಿವಣ್ಣ ಸೂಪರ್ ಆಕ್ಟರ್. ನನ್ನ ಜೀವನದಲ್ಲಿ ಬೆಸ್ಟ್ ಎನರ್ಜಿಟಿಕ್ ಪರ್ಸನ್ ಶಿವಣ್ಣ. ನನಗೆ ಏನಾದರೂ ಎನರ್ಜಿ ಬೇಕು ಅಂದ್ರೆ ಶಿವಣ್ಣ ಅವರನ್ನೇ ನೆನಪಿಸಿಕೊಳ್ಳುವುದು'' ಪುನೀತ್ ರಾಜ್ ಕುಮಾರ್, ನಟ

English summary
Power Star Puneet Rajkumar shares his family's sweet memories in Family Power Show Promo. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದ ಸಿಹಿ ಘಟನೆಗಳನ್ನ ಹಂಚಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada