»   » ಕಿರುತೆರೆಯಲ್ಲಿಯೂ ಹವಾ ಎಬ್ಬಿಸಲಿದೆ 'ಅಪ್ಪು ಡ್ಯಾನ್'

ಕಿರುತೆರೆಯಲ್ಲಿಯೂ ಹವಾ ಎಬ್ಬಿಸಲಿದೆ 'ಅಪ್ಪು ಡ್ಯಾನ್'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದ ವಾರವಷ್ಟೇ 'ಮಜಾ ಟಾಕೀಸ್' ಗೆ ಬಂದಿದ್ದರು. ಈಗ ಅದರ ಹಿಂದೆಯೇ ಇನ್ನೊಂದು ಕಿರುತೆರೆಯ ಕಾರ್ಯಕ್ರಮದಲ್ಲಿ ಪುನೀತ್ ಭಾಗಿಯಾಗಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಆ ಎಪಿಸೋಡ್ ನ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್ ಗೆ ಅಪ್ಪು ಆಗಮಿಸಿದ್ದಾರೆ. ಪುನೀತ್ ಇಡೀ ಸೌತ್ ಇಂಡಿಯಾದ ಟಾಪ್ ಡ್ಯಾನ್ಸರ್ ಗಳಲ್ಲಿ ಒಬ್ಬರು. ಸೋ, 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದ ರಿಯಲ್ ಖದರ್ ಅಪ್ಪು ಸಂಚಿಕೆಯಲ್ಲಿ ಕಾಣುತ್ತೆ.

ಬೆಂಬಿಡದಂತೆ 'ರಾಜಕುಮಾರ'ನಿಗೆ ಕಾಡುತ್ತಿರುವ ಪೈರಸಿ ಭೂತ

Puneeth Rajkumar in Star Suvarna's Dance Reality Show.

ಅಂದಹಾಗೆ, ಈ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ, ಬಾಲಿವುಡ್ ಡ್ಯಾನ್ಸರ್ ಸಲ್ಮಾನ್ ಮತ್ತು 'ನೆನಪಿರಲಿ' ಪ್ರೇಮ್ ತೀರ್ಪುಗಾರರಾಗಿದ್ದಾರೆ. ಜೊತೆಗೆ ಈ ಹಿಂದಿನ ಸಂಚಿಕೆಯಲ್ಲಿನ ಮಕ್ಕಳ ಪರ್ಫಾಮೆನ್ಸ್ ಎಲ್ಲರ ಗಮನ ಸೆಳೆದಿದೆ. 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Power Star 'Puneeth Rajkumar' takes part as Guest in Star Suvarna's 'Dance Dance Juniors' Reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada