Don't Miss!
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೃಜನ್ ಟಾಕೀಸ್‌ಗೆ ಬಂದು 'ಮಜಾ' ಮಾಡಿದ ಪುನೀತ್ ರಾಜ್‌ಕುಮಾರ್
ಕೊರೊನಾ ಬಂದಾಗಿನಿಂದಲೂ ಚಿತ್ರೀಕರಣದಿಂದ ದೂರವೇ ಉಳಿದಿದ್ದ ಪುನೀತ್ ರಾಜ್‌ಕುಮಾರ್, ಇದೀಗ ಸೆಟ್‌ಗೆ ವಾಪಸ್ ಬಂದಿದ್ದಾರೆ ಆದರೆ ಅದು ಕಿರುತೆರೆಗೆ!
Recommended Video
ಹೌದು, ಪುನೀತ್ ರಾಜ್‌ಕುಮಾರ್ ಅವರು, ಮಜಾ ಟಾಕೀಸ್ ಗೆ ಅತಿಥಿಯಾಗಿ ಬಂದಿದ್ದಾರೆ. ಮಜಾ ಟಾಕೀಸ್ ನ ಪುನೀತ್ ರಾಜ್‌ಕುಮಾರ್ ಎಪಿಸೋಡ್ ಈಗಾಗಲೇ ಚಿತ್ರೀಕರಣವಾಗಿದ್ದು, ವಾರಾಂತ್ಯಕ್ಕೆ ಪ್ರಸಾರವಾಗಲಿದೆ.
ಕೊರೊನಾ ಲಾಕ್‌ಡೌನ್ ನಡುವೆ ಸ್ಥಗಿತಗೊಂಡಿದ್ದ ಮಜಾ ಟಾಕೀಸ್, ಆಗಸ್ಟ್ 29 ರಿಂದ ಪುನರ್‌ಆರಂಭಗೊಂಡಿದೆ. ಕೆಲವು ಎಪಿಸೋಡ್‌ಗಳು ಪ್ರಸಾರ ಸಹ ಆಗಿವೆ. ಈ ವಾರಾಂತ್ಯದ ಎಪಿಸೋಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಗಳು ಹರಿದಾಡುತ್ತಿವೆ
ಪುನೀತ್ ರಾಜ್‌ಕುಮಾರ್ ಅವರು ಮಜಾ ಟಾಕೀಸ್‌ನಲ್ಲಿ ಭಾಗವಹಿಸಿರುವ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಜಾ ಟಾಕೀಸ್‌ನ ಹಾಸ್ಯ ಕಲಾವಿದರೊಂದಿಗೆ ಪುನೀತ್ ಹರಟೆ ಹೊಡೆದಿದ್ದಾರೆ.

ಮಜಾ ಟಾಕೀಸ್ ಪವರ್ ಹೆಚ್ಚಿಸಲಿರುವ ಅಪ್ಪು!
ಪುನೀತ್ ರಾಜ್‌ಕುಮಾರ್ ಮಜಾ ಟಾಕೀಸ್‌ಗೆ ಬಂದಿರುವುದು ಮಜಾಟಾಕೀಸ್‌ನ 'ಪವರ್' ಹೆಚ್ಚಿಸಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಾರಾಂತ್ಯದ ಮಜಾ ಟಾಕೀಸ್ ಪುನೀತ್ ಉಪಸ್ಥಿತಿ ಕಾರಣಕ್ಕೆ ವಿಶೇಷವಾಗಿರಲಿದೆ.

ಮಜಾ ಟಾಕೀಸ್‌ಗೆ ಬರುತ್ತಿರುವುದು ಮೊದಲಲ್ಲ
ಪುನೀತ್ ರಾಜ್‌ಕುಮಾರ್ ಮಜಾ ಟಾಕೀಸ್‌ನಲ್ಲಿ ಅತಿಥಿಯಾಗಿ ಭಾಗವಹಿಸುತ್ತಿರುವುದು ಇದು ಮೊದಲೇನಲ್ಲ. ಈ ಮೊದಲು 2017 ರಲ್ಲಿ ಒಮ್ಮೆ ಮಜಾ ಟಾಕೀಸ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು ಪುನೀತ್.

ಯುವರಾಜ ಬಾಕಿ ಚಿತ್ರೀಕರಣ ಪ್ರಾರಂಭವಾಗಬೇಕಿದೆ
ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಪುನೀತ್ ಅವರ ಯುವರಾಜ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ. ಅದನ್ನು ಹೊರತುಪಡಿಸಿ ಇನ್ನೂ ಹಲವು ಸಿನಿಮಾಗಳು ಪುನೀತ್ ಕೈಯಲ್ಲಿವೆ.