'ಕೋಟ್ಯಧಿಪತಿ' ಮಾತ್ರವಲ್ಲ ಪುನೀತ್ ಕೈಯಲ್ಲಿ ಇನ್ನು ಮೂರು ಟಿವಿ ಶೋ ಇದೆ.!

2012ರಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಟ್ಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೊದಲ ಎರಡು ಆವೃತ್ತಿಯನ್ನ ನಿರೂಪಣೆ ಮಾಡಿದ್ದರು. ಅದಾದ ಬಳಿಕ ಸಣ್ಣದೊಂದು ಬ್ರೇಕ್ ತೆಗೆದುಕೊಂಡ ಅಪ್ಪು ಮತ್ತೆ ಕಲರ್ಸ್ ಕನ್ನಡದಲ್ಲಿ 'ಫ್ಯಾಮಿಲಿ ಪವರ್' ಎಂಬ ಗೇಮ್ ಶೋ ನಡೆಸಿಕೊಟ್ಟಿದ್ದರು.

ಇದೀಗ, ಬಹಳ ವರ್ಷದ ನಂತರ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಪುನೀತ್ ಮರಳಿದ್ದು, ಈ ಬಾರಿ ಸುವರ್ಣ ಬದಲು ಕಲರ್ಸ್ ಕನ್ನಡದಲ್ಲಿ ಈ ಶೋ ನಿರೂಪಣೆ ಮಾಡಲಿದ್ದಾರೆ ಅಪ್ಪು. ಇದೇ ಶನಿವಾರದಿಂದ ನಾಲ್ಕನೇ ಆವೃತ್ತಿ ಆರಂಭವಾಗುತ್ತಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕಲರ್ಸ್ ಕನ್ನಡ ವಾಹಿನಿ ಪುನೀತ್ ಅವರೊಂದಿಗೆ ಮಾಧ್ಯಮ ಸಂವಾದ ಏರ್ಪಡಿಸಿತ್ತು. ಈ ವೇಳೆ ಕೋಟ್ಯಧಿಪತಿ ಶೋ ಬಗ್ಗೆ ಸಂತಸ ಹಂಚಿಕೊಂಡು ಪುನೀತ್, ಮತ್ತೊಂದು ಸೀಕ್ರೆಟ್ ಬಿಚ್ಚಿಟ್ಟರು. ಅದೇನಪ್ಪಾ ಅಂದ್ರೆ, ಪುನೀತ್ ಕೈಯಲ್ಲಿ ಇನ್ನು ಮೂರು ಟಿವಿ ಶೋ ಬಾಕಿ ಇದೆಯಂತೆ. ಯಾವುದು ಆ ಶೋಗಳು? ಮುಂದೆ ಓದಿ.....

ಐದು ಶೋ ಒಪ್ಪಂದ ಆಗಿದೆ

ಐದು ಶೋ ಒಪ್ಪಂದ ಆಗಿದೆ

ಕಲರ್ಸ್ ಕನ್ನಡ ವಾಹಿನಿ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಒಟ್ಟು ಐದು ಶೋಗಳನ್ನ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಪವರ್ ಶೋ ಯಶಸ್ವಿಯಾಗಿ ಮುಗಿಸಿದ್ದ ಅಪ್ಪು ಈಗ ಎರಡನೇ ಶೋ ಕನ್ನಡದ ಕೋಟ್ಯಧಿಪತಿ ಕೈಗೆತ್ತಿಕೊಂಡಿದ್ದಾರೆ. ಅಂದ್ರೆ ಇನ್ನು ಮೂರು ಶೋ ಅಪ್ಪು ಜೋಳಿಗೆಯಲ್ಲಿದೆ.

ಕೋಟ್ಯಧಿಪತಿ ಬಳಿಕ ಮತ್ತೆ ಕಿರುತೆರೆಯಲ್ಲಿ ಅಪ್ಪು.!

ಕೋಟ್ಯಧಿಪತಿ ಬಳಿಕ ಮತ್ತೆ ಕಿರುತೆರೆಯಲ್ಲಿ ಅಪ್ಪು.!

ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ಎರಡ್ಮೂರು ತಿಂಗಳು ಪುನೀತ್ ಅವರು ಕಿರುತೆರೆ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ಈ ಶೋ ಮುಗಿಸಿದ ಬಳಿಕ ಅಪ್ಪು ಫ್ಯಾನ್ಸ್ ಬೇಸರ ಮಾಡಿಕೊಳ್ಳುವಂತಿಲ್ಲ. ಯಾಕಂದ್ರೆ, ಅಷ್ಟರಲ್ಲೇ ಪುನೀತ್ ಗಾಗಿ ಮತ್ತೊಂದು ಶೋ ಸಿದ್ಧವಾಗಿರುತ್ತೆ.

ಫ್ಯಾಮಿಲಿ ಆಡಿಯೆನ್ಸ್ ಟಾರ್ಗೆಟ್

ಫ್ಯಾಮಿಲಿ ಆಡಿಯೆನ್ಸ್ ಟಾರ್ಗೆಟ್

ಪುನೀತ್ ಅವರಿಗೆ ಫ್ಯಾಮಿಲಿ ಆಡಿಯೆನ್ಸ್ ಹೆಚ್ಚು ಇದ್ದಾರೆ. ಇದನ್ನೇ ಟಾರ್ಗೆಟ್ ಮಾಡಿರುವ ಕಲರ್ಸ್ ಕನ್ನಡ ಅಪ್ಪುಗಾಗಿ ಫ್ಯಾಮಿಲಿ ಪ್ರೇಕ್ಷಕರನ್ನ ಸೆಳೆಯುವಂತಹ ಶೋಗಳನ್ನ ಪರಿಚಯಿಸುತ್ತಿದೆ. ಅದಕ್ಕೆ ಪುನೀತ್ ಅವರನ್ನ ಸಾರಥಿಯನ್ನಾಗಿಸಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದಾರೆ.

ಸಿನಿಮಾ ಮತ್ತು ಕಿರುತೆರೆ ಮ್ಯಾನೇಜ್ ಮಾಡಬೇಕು

ಸಿನಿಮಾ ಮತ್ತು ಕಿರುತೆರೆ ಮ್ಯಾನೇಜ್ ಮಾಡಬೇಕು

ಸತತವಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಶೋ ಮಾಡಿದ ನಂತರ ಕೆಲವು ತಿಂಗಳು ಕಾಲ ಬ್ರೇಕ್ ಪಡೆದುಕೊಳ್ಳಬೇಕು. ಈ ಗ್ಯಾಪ್ ನಲ್ಲಿ ತಮ್ಮ ಸಿನಿಮಾಗಳನ್ನ ಮಾಡಬೇಕು. ಈಗ ಕೋಟ್ಯಧಿಪತಿ ಬಹುತೇಕ ಎಪಿಸೋಡ್ ಚಿತ್ರೀಕರಣ ಮುಗಿದಿದೆ. ಹಾಗಾಗಿ, ಯುವರತ್ನ ಸಿನಿಮಾದ ಶೂಟಿಂಗ್ ನಲ್ಲಿ ಪುನೀತ್ ಆರಾಮಾಗಿದ್ದಾರೆ. ಅದಾದ ಬಳಿಕ ಚೇತನ್ ಕುಮಾರ್ ಅವರ ಜೇಮ್ಸ್ ಶುರುವಾಗಬಹುದು ಎನ್ನಲಾಗುತ್ತಿದೆ.

More from Filmibeat

English summary
Kannada actor Puneeth rajkumar will do more tv shows in coming days. presently puneeth is ready to host kannadada kotyadhipathi 4 from june 22nd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X