'ವೀಕೆಂಡ್ ವಿತ್ ರಮೇಶ್'ನಲ್ಲಿ ಅಪ್ಪುಗೆ ಬಹಳ ಇಷ್ಟ ಆಗುವುದಿದು

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಶುರು ಆಗುತ್ತಿದ್ದು, ನಟ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆ.

ವಿಶೇಷ ಅಂದರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೊದಲ ಅತಿಥಿಯಾಗಿದ್ದು ಪುನೀತ್ ರಾಜ್ ಕುಮಾರ್. ಪವರ್ ಸ್ಟಾರ್ ಮೂಲಕವೇ ಈ ಕಾರ್ಯಕ್ರಮ ಶುಭಾರಂಭವಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಅಪ್ಪುಗೆ ತುಂಬ ಇಷ್ಟ ಆಗುವುದು ರಮೇಶ್ ಅವರ ನಿರೂಪಣೆಯಂತೆ.

ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಪುನೀತ್ ''ನಾನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 90 ರಷ್ಟು ಕಾರ್ಯಕ್ರಮವನ್ನು ನೋಡಿದ್ದೇನೆ. ನನಗೆ ಈ ಕಾರ್ಯಕ್ರಮಕ್ಕೆ ಕರೆದಾಗ ತುಂಬ ಖುಷಿ ಆಯ್ತು. ಎಲ್ಲ ಕಲಾವಿದರನ್ನು ರಮೇಶ್ ಸರ್ ಮಾತನಾಡಿಸುವ ರೀತಿ ತುಂಬ ಇಷ್ಟ ಆಗುತ್ತದೆ.'' ಎಂದಿದ್ದಾರೆ.

puneeth rajkumar wishes to weekend with ramesh 4

''ರಮೇಶ್ ಸರ್ ನಮ್ಮ ಅಣ್ಣನ ರೀತಿ. ಅವರು ಒಂದು ಕಾರ್ಯಕ್ರಮದಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ ಎಂದಾಗ ನಮ್ಮ ಮನಸ್ಸಿನಲ್ಲಿ ಇರುವುದನ್ನು ಹಾಗೆಯೇ ಹೇಳುತ್ತೇವೆ. ನಮ್ಮ ತಾಯಿ ಕೂಡ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅದು ತುಂಬ ವಿಶೇಷವಾಗಿತ್ತು. ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಶೀಘ್ರದಲ್ಲೇ ಶುರು ಆಗುತ್ತಿದ್ದು, ಈಗಾಗಲೇ ಪ್ರೋಮೋ ಹೊರಬಂದಿದೆ.

More from Filmibeat

English summary
Kannada actor Puneeth Rajkumar wishes to Zee kannada channel popular program 'Weekend With Ramesh 4'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X