twitter
    For Quick Alerts
    ALLOW NOTIFICATIONS  
    For Daily Alerts

    'ವೈಲ್ಡ್ ಕರ್ನಾಟಕ'ದ ಹಿಂದಿನ ರೂವಾರಿಗಳಿಗೆ ಪುನೀತ್ ರಾಜ್ ಕುಮಾರ್ ಅಭಿನಂದನೆ

    |

    ಇಡೀ ಜಗತ್ತಿಗೆ ಕರ್ನಾಟಕದ ಹೆಮ್ಮೆಯನ್ನು ಸಾರುವ 'ವೈಲ್ಡ್ ಕರ್ನಾಟಕ' ಸಾಕ್ಷ್ಯ ಚಿತ್ರ ಡಿಸ್ಕವರಿ ಚಾನೆಲ್ ಮತ್ತು ಅನಿಮಲ್ ಪ್ಲಾನೆಟ್‌ಗಳಲ್ಲಿ ಜೂನ್ 5ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಭಾರತದ ಅರಣ್ಯ ಮತ್ತು ವನ್ಯಜೀವಿಗಳ ಕುರಿತಾದ ಮೊದಲ ವಿಶಿಷ್ಟ ಸಾಕ್ಷ್ಯವಿತ್ರವಿದು.

    Recommended Video

    ಗಿಡ ನೆಟ್ಟು ವಿಶ್ವ ಪರಿಸರ ದಿನದ ಶುಭಾಶಯ ಹೇಳಿದ ಕಿಚ್ಚ ಸುದೀಪ್ | Sudeep | FILMIBEAT KANNADA

    ಈ ಚಿತ್ರ ತಯಾರಿಸಲು ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ದಾಳಿಯ ಭೀತಿಯ ನಡುವೆಯೇ ಸಾವಿರಾರು ಗಂಟೆಗಳ ಕಾಲ ಚಿತ್ರೀಕರಣ ನಡೆಸಿದ್ದ ನಿರ್ದೇಶಕರಾದ ಅಮೋಘವರ್ಷ ಮತ್ತು ಕಲ್ಯಾಣ್ ವರ್ಮಾ ಅವರನ್ನು ನಟ ಪುನೀತ್ ರಾಜ್ ಕುಮಾರ್ ಅಭಿನಂದಿಸಿದ್ದಾರೆ. ಕರ್ನಾಟಕದ ಅರಣ್ಯಗಳಲ್ಲಿನ ಜೀವ ವೈವಿಧ್ಯವನ್ನು ಇಡೀ ಜಗತ್ತಿಗೆ ತೋರಿಸುವ ಹೆಮ್ಮೆಯ ಕಾರ್ಯಕ್ರಮ ಇದಾಗಿದೆ. ಮುಂದೆ ಓದಿ...

    ನಿರ್ದೇಶಕರಿಗೆ ಅಭಿನಂದನೆ

    ನಿರ್ದೇಶಕರಿಗೆ ಅಭಿನಂದನೆ

    ಈ ನಿರ್ದೇಶಕದ್ವಯರಿಗೆ ಮೈಸೂರು ಪೇಟ, ಶಾಲು ಹಾಗೂ ಹೂವಿನ ಹಾರ ಹಾಕಿ ಸನ್ಮಾನಿಸಿರುವ ಚಿತ್ರವನ್ನು ಹಂಚಿಕೊಂಡಿರುವ ಪುನೀತ್, ಸಾಕ್ಷ್ಯಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಪ್ರಯತ್ನಕ್ಕಾಗಿ ಇಬ್ಬರೂ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರ

    ತಂಡಕ್ಕೆ ಶುಭ ಹಾರೈಕೆ

    ತಂಡಕ್ಕೆ ಶುಭ ಹಾರೈಕೆ

    'ಕರ್ನಾಟಕದ ಎಲ್ಲೆಡೆ ಇರುವ ವೈವಿಧ್ಯಮಯ ಆವಾಸ ಸ್ಥಾನ ಹಾಗೂ ವಿವಿಧ ಬಗೆಯ ಜೀವಿಗಳನ್ನು ಸೆರೆ ಹಿಡಿದಿರುವುದಕ್ಕೆ ವೈಲ್ಡ್ ಕರ್ನಾಟಕ ತಂಡಕ್ಕೆ ಶುಭ ಹಾರೈಕೆಗಳು. ವೈಲ್ಡ್ ಕರ್ನಾಟಕ ಮೊದಲ ಬಾರಿಗೆ ಒಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ' ಎಂದು ಪುನೀತ್ ತಿಳಿಸಿದ್ದಾರೆ.

    ಕನ್ನಡ ಭಾಷೆಯಲ್ಲಿಯೇ ಆನಂದಿಸಿ

    ಕನ್ನಡ ಭಾಷೆಯಲ್ಲಿಯೇ ಆನಂದಿಸಿ

    ಡಿಸ್ಕವರಿ ಮತ್ತು ಅನಿಮಲ್ ಪ್ಲಾನೆಟ್‌ನಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮ ನಮ್ಮದೇ ಭಾಷೆಯಲ್ಲಿ ಸಿಗಲಿದೆ. ಇಂಗ್ಲಿಷ್‌ನಲ್ಲಿ ಡೇವಿಡ್ ಅಟೆನ್ ಬರೊ ಹಿನ್ನೆಲೆ ನಿರೂಪಣೆ ಮಾಡಿರುವ ಸಾಕ್ಷ್ಯಚಿತ್ರಕ್ಕೆ ಕನ್ನಡದಲ್ಲಿ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಧ್ವನಿ ನೀಡಿದ್ದಾರೆ. ಹಾಗೆಯೇ ತಮಿಳು ಮತ್ತು ತೆಲುಗಿನಲ್ಲಿ ಪ್ರಕಾಶ್ ರೈ ಹಾಗೂ ಹಿಂದಿಯಲ್ಲಿ ರಾಜ್ ಕುಮಾರ್ ರಾವ್ ನಿರೂಪಣೆ ಮಾಡಿದ್ದಾರೆ.

    ವೈಲ್ಡ್ ಕರ್ನಾಟಕ ಕಿರುಚಿತ್ರ ನೋಡಿದ ಯಡಿಯೂರಪ್ಪ

    ಡಿಡಿ ಚಂದನದಲ್ಲಿ ಪ್ರಸಾರ

    ಡಿಡಿ ಚಂದನದಲ್ಲಿ ಪ್ರಸಾರ

    ಡಿಸ್ಕವರಿ ಮತ್ತು ಅನಿಮಲ್ ಪ್ಲಾನೆಟ್ ಚಾನೆಲ್‌ಗಳು ನಮ್ಮ ಮನೆಯಲ್ಲಿ ಬರುವುದಿಲ್ಲ ಎಂದು ಈ ಅಪರೂಪದ ಸಾಕ್ಷ್ಯಚಿತ್ರ ವೀಕ್ಷಿಸುವ ಅವಕಾಶ ತಪ್ಪಿಸಿಕೊಳ್ಳುವ ಬೇಸರದಲ್ಲಿರುವ ಜನರಿಗೆ ಖುಷಿಯ ಸಂಗತಿಯೂ ಇದೆ. ಈ ಕಾರ್ಯಕ್ರಮ ಡಿಡಿ ಚಂದನದಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

    ಪುನೀತ್ ರಾಜ್‌ಕುಮಾರ್ ವಿಡಿಯೋ ನೋಡಿ ಶಾಕ್ ಆದ ಅಲ್ಲು ಅರ್ಜುನ್ ತಮ್ಮಪುನೀತ್ ರಾಜ್‌ಕುಮಾರ್ ವಿಡಿಯೋ ನೋಡಿ ಶಾಕ್ ಆದ ಅಲ್ಲು ಅರ್ಜುನ್ ತಮ್ಮ

    English summary
    Actor Puneeth Rajkumar wishes the directors of Wild Karnataka documentary Amoghavarsha and Kalyan Varma.
    Friday, June 5, 2020, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X