Punyavathi: ಪ್ರೀತಿಸಿದ ಜೋಡಿ ಮತ್ತೆ ಒಂದಾಗುತ್ತಾ? ಪದ್ಮಿನಿ ಹಾಗೂ ನಂದನ್ ಕಥೆಯೇನು?
'ಪುಣ್ಯವತಿ' ಧಾರಾವಾಹಿ ಇದೀಗ ಬಹಳ ಕುತೂಹಲಕಾರಿ ಆಗಿದೆ. ಇದೀಗ ಪದ್ಮಿನಿ ತನ್ನ ಗಂಡನ ಸೇವೆಯಲ್ಲಿ ತೊಡಗಿದ್ದಾರೆ. ಆದರೆ ನಂದನ್‌ಗೆ ಇದು ಇಷ್ಟ ಆಗುತ್ತಿಲ್ಲ. ಯಾಕೆಂದರೆ, ಪದ್ಮಿನಿ ಮಾಡಿದ ಕೆಲಸ ಹಾಗಿದೆ. ಅದಕ್ಕೆ ನಂದನ್‌ಗೆ ಕೋಪ ಬಂದಿದೆ. ಪದ್ಮಿನಿ ತನ್ನ ಗಂಡನ ಬಳಿ ನಿಜ ವಿಚಾರವನ್ನು ಹೇಳಿದಾಗ ನಂದನ್ ಕೋಪ ಮಾಡಿಕೊಂಡಿದ್ದಾರೆ. ಆ ಬಳಿಕ ಪದ್ಮಿನಿ ಜೊತೆ ಮಾತನಾಡಲು ಹಿಂದೇಟು ಹಾಕಿತ್ತಾನೆ.
ಪದ್ಮಿನಿ ಮಾತ್ರ ಏನು ಆಗೇ ಇಲ್ಲ ಎನ್ನುವ ಹಾಗೆ ಇರುತ್ತಾಳೆ. ಇನ್ನು ಪದ್ಮಿನಿಯನ್ನು ಉಳಿಸಲು ಹೋಗಿ ನಂದನ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದರೆ, "ಅಮ್ಮಾಜಿ ಮಾತ್ರ ಎಲ್ಲರ ಬಳಿ ಎಣ್ಣೆ ಯಾರು ಚೆಲ್ಲಿದ್ದು?" ಎಂದು ಕೇಳಿದಾಗ, ಎಲ್ಲರೂ ಪದ್ಮಿನಿಯತ್ತ ನೋಡಿದಾಗ ಪದ್ಮಿನಿ ಮಾತ್ರ ತಾನು ಎಣ್ಣೆ ಚೆಲ್ಲಿಲ್ಲ ಎಂದು ಹೇಳಿದ್ದರು. ಹೀಗಾಗಿ ಎಲ್ಲರೂ ಆರೋಪದ ಸುರಿಮಳೆಯನ್ನೇ ಸುರಿಸುತ್ತಾರೆ.

ನಂದನ್ ವಿಚಾರದಲ್ಲಿ ಖಡಕ್ ಆದ ಆಮ್ಮಾಜಿ
"ಕೊಂಚ ಖಡಕ್ ಆಗಿ ಯಾರು ಏನು ಹೇಳಲು ಬರಬೇಡಿ. ನನಗೆ ಪದ್ಮಿನಿ ಏನು ಎಂಬುವುದು ಗೊತ್ತು" ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿ ಬಿಡುತ್ತಾರೆ. ಪೂರ್ವಿ ತನ್ನಿಂದಾ ಆಗಿ ಅಕ್ಕ ಬಾವ ಗಲಾಟೆ ಮಾಡುವ ಹಾಗೆ ಆಗ್ತಿದೆ. ಕುತ್ತಿಗೆಯಿಂದ ತಾಳಿ ತೆಗೆಯಲು ಆಗದೆ ಒದ್ದಾಟ ಆಗುತ್ತಿದೆ ಎನು ಮಾಡಲಿ ಎಂದೆಲ್ಲ ಯೋಚನೆ ಮಾಡುತ್ತಿದ್ದಾಳೆ.
ಪದ್ಮಿನಿ, ನಂದನ್‌ಗಾಗಿ ತಾನು ಇಷ್ಟ ಪಟ್ಟ ಡಾನ್ಸ್ ನಿಂದ ದೂರ ಉಳಿಯುತ್ತಿದ್ದಾಳೆ. ಆದರೆ, ಇದಾವುದೂ ನಂದನ್‌ಗೆ ತಿಳಿದರು ಆತ ಮಾತ್ರ ತನಗೆ ಮೋಸ ಮಾಡಿ ಸಂಕಷ್ಟ ಕೊಟ್ಟು ಬಿಟ್ಟೆಯಲ್ಲ ಎಂದು ಎಲ್ಲರೆದುರು ಚುಚ್ಚು ಮಾತನಾಡುತ್ತಾರೆ. ಆದರೆ ಪದ್ಮಿನಿ ಮಾತ್ರ ನಂದನ್ ಬಳಿ ಕೇಳಿಕೊಳ್ಳುತ್ತಾರೆ. "ಈ ವೇಳೆ ಆದರೂ, ನನಗೆ ಒಂದು ಅವಕಾಶವನ್ನು ಕೊಡಿ. ನನ್ನ ತಪ್ಪನ್ನು ಕ್ಷಮಿಸಿ ಬಿಡಿ" ಎಂದು ಹೇಳುತ್ತಾರೆ.

ಪದ್ಮಿನೀ ಮಾತು ಕೇಳದ ನಂದನ್
ಇದನ್ನು ಕೇಳಿದ ನಂದನ್ ಸುಮ್ಮನೆ ಇರುತ್ತಾನೆ. ಇನ್ನು ನಂದನ್‌ಗೆ ಮೈ ಉಜ್ಜಲು ಪದ್ಮಿನಿ ಬಂದಾಗ ನಂದನ್ ಜೋರಾಗಿ ಹೇಳುತ್ತಾನೆ. ಇದೆಲ್ಲ ಬೇಡ ಎಂದು ಹೇಳಿದಾಗ "ಆಯ್ತು ಹಾಗಾದರೆ ಅಮ್ಮಾಜೀ ಬಳಿ ಹೇಳುತ್ತೇನೆ" ಎಂದಾಗ ಮೈ ಉಜ್ಜಲು ನಂದನ್, ಪದ್ಮಿನಿಗೆ ಬಿಡುತ್ತಾನೆ.
ಆದರೆ ಕಣ್ಣುಮುಚ್ಚಿಕೊಂಡು ಮೈ ಒರೆಸಲು ಹೇಳುತ್ತಾನೆ. ನಂದನ್‌ಗೆ ಪದ್ಮಿನಿ ಮೈ ಒರೆಸುವ ವೇಳೆ ಮುಜುಗರ ಆಗುತ್ತದೆ. ಅದಕ್ಕಾಗಿ ನಂದನ್ ಪದ್ಮಿನಿ ಬಳಿ ಕಣ್ಣು ಮುಚ್ಚಿ ಮೈ ಒರೆಸಲು ಹೇಳುತ್ತಾನೆ . ಆದರೆ ಪದ್ಮಿನಿಗೆ ಇದು ದೊಡ್ಡ ಟಾಸ್ಕ್ ಆಡಿದ ಹಾಗೆ ಆಗುತ್ತದೆ. ಕಣ್ಣು ಮುಚ್ಚಿಕೊಂಡು ಅದು ಹೇಗೆ ಮೈ ಒರೆಸಲು ಸಾಧ್ಯ ಎಂಬುವುದು ಪದ್ಮಿನಿ ಚಿಂತೆ. ಆದರೆ, ನಂದನ್ ಮಾತ್ರ ಪದ್ಮಿನಿಗೆ ಬಯ್ಯುತ್ತಲೆ ಇರುತ್ತಾನೆ.
ಪದ್ಮಿನಿ ಅದೆಲ್ಲವನ್ನೂ ಸಹಿಸಿಕೊಂಡು ನಂದನ್ ಸೇವೆ ಮಾಡುತ್ತಾ ಇದ್ದಾಳೆ. ಇನ್ನಾದರೂ ನಂದನ್ ಹಾಗೂ ಪದ್ಮಿನಿ ಮಧ್ಯೆ ಚಿಗುರಿದ್ದ ಪ್ರೀತಿ ಗಾಢವಾಗಿ ಬೆಳೆಯುತ್ತಾ ಎಂಬುವುದನ್ನು ನೋಡಬೇಕಷ್ಟೇ.


Click it and Unblock the Notifications











