Punyavathi Serial: ಅಕ್ಕನ ಪ್ರೀತಿ ಮೇಲೆ ಬಿತ್ತ ಪೂರ್ವಿ ಕಣ್ಣು .. ಗೆಲ್ಲೋದು ಪ್ರೀತಿನಾ..? ತಾಳಿನಾ..?

By ಎಸ್ ಸುಮಂತ್

ನಂದನ್ ಮತ್ತು ಪದ್ಮಿನಿ ಬದುಕಲ್ಲಿ ಮದುವೆ ಎಂಬುದು ಬೇರೆ ರೀತಿಯಾಗಿಯೇ ಆಟವಾಡಿದೆ. ಡ್ಯಾನ್ಸ್‌ನಲ್ಲಿಯೇ ಏನಾದರೂ ಸಾಧಿಸಬೇಕು ಎಂಬುದು ಪದ್ಮಿನಿಯ ಆಸೆಯಾಗಿತ್ತು. ಆದರೆ, ಪದ್ಮಿನಿ ತಂದೆಗೆ ಅದು ಇಷ್ಟವಿರಲಿಲ್ಲ. ಆದರೂ ಕದ್ದು ಮುಚ್ಚಿ ಡ್ಯಾನ್ಸ್ ಶೋಗಳನ್ನು ಕೊಡ್ತಾ ಇದ್ದಳು. ಕಿರಾತಕನ ಕೈಗೆ ಸಿಕ್ಕಿ, ಮದುವೆಯ ದಿನಾನೂ ಹಸೆಮಣೆಗೆ ಹೋಗುವುದಕ್ಕೂ ಮುನ್ನವೇ ಡ್ಯಾನ್ಸ್ ಶೋಗೆ ಹೋಗಿದ್ದ, ಪದ್ಮಿನಿ, ನಂದನ್ ಕೈಯಿಂದ ತಾಳಿ ಕಟ್ಟಿಸಿಕೊಳ್ಳಲೇ ಇಲ್ಲ.

ಪದ್ಮಿನಿ ಕೂಡ ಮೊದ ಮೊದಲಿಗೆ ಪೂರ್ವಿಯ ಪರವೇ ಇದ್ದಳು. ಪೂರ್ವಿ, ಪದ್ಮಿನಿ ಪರ ಇದ್ದಳು. ತಾಳಿಗೆ ಬೆಲೆ ಕೊಡು ಅಂತ ಅಕ್ಕ ಅಂದ್ರೆ ಪ್ರೀತಿಗೆ ಬೆಲೆ ಕೊಡು ಅಂತ ತಂಗಿ ಅಂತ ಇದ್ಲು. ಈಗ ಎಲ್ಲವೂ ಉಲ್ಟಾ ಆಗಿದೆ. ತಾಳಿ ಕೊಡು ಪೂರ್ವಿ ಅಂದ್ರೆ ಕೊಡೋದಕ್ಕೆ ರೆಡಿಯಿಲ್ಲ.

punyavathi-kannada-serial

ಪೂರ್ವಿಯ ಬಗ್ಗೆ ನಂದನ್‌ಗೆ ಅನುಮಾನ

ಪೂರ್ವಿ ಬಗ್ಗೆ ನಂದನ್ ಈಗಾಗಲೇ ಅನುಮಾನ ಬಂದಿದೆ. ಅವಳು ತಾಳಿ ಕೊಡೋದಕ್ಕೆ ಒಪ್ಪುತ್ತಾ ಇಲ್ಲ ಅಂತ. ಅದನ್ನು ಪದ್ಮಿಗೆ ಹೇಳಿದ್ರೆ ನಂಬುತ್ತಾ ಇಲ್ಲ. ಹಾಗಂತ ಪೂರ್ವಿಯದ್ದು ತಪ್ಪು ಅಂತ ಅಲ್ಲ. ಪದ್ಮಿನಿ ಭಾವನ ಪ್ರೀತಿಗೂ ಬೆಲೆ ಕೊಡದೆ ಮೋಸ ಮಾಡುತ್ತಿದ್ದಾಳೆ ಎಂದು ತಾಳಿಗೆ ಬೆಲೆ ಕೊಡೋದಕ್ಕೆ ಶುರು ಮಾಡಿದ್ದಾಳೆ.

ನಂದನ್ ಕನಸಿಗೆ ತಣ್ಣೀರು

ಆ ತಾಳಿ ಎಂಬುದಕ್ಕೆ ಕಟ್ಟು ಬಿದ್ದಿರುವುದು ಪದ್ಮಿನಿ. ನಂದನ್‌ಗೆ ಆ ಕಡೆ ಕೂಡ ಗಮನವಿಲ್ಲ. ಪ್ರೀತಿಗಷ್ಟೇ ಬೆಲೆ ಅಂತಾನೆ. ಆದ್ರೆ ಪೂರ್ವಿಯ ಕೊರಳಲ್ಲಿರುವ ತಾಳಿ ತನ್ನ ಕೊರಳಿಗೆ ಬಂದ ಮೇಲೆ ಸಂಸಾರ ಶುರು ಮಾಡಬೇಕು ಎಂಬ ಹಠ ಪದ್ಮಿನಿಯದ್ದು. ಅದಕ್ಕೆಂದೇ ಪೂರ್ವಿ ಬಳಿ ಇರುವ ತಾಳಿಯನ್ನು ತೆಗೆದುಕೊಳ್ಳಲು ನಂದನ್ ಸಾಕಷ್ಟು ಪ್ರಯತ್ನ ಪಟ್ಟಿದ್ದಾನೆ. ಇವತ್ತು ಕೂಡ ಕೇಳಿದ್ದಾನೆ. ಪೂರ್ವಿ ಈಗ ಧೈರ್ಯವಾಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾಳೆ. ತಾಳಿ ಸುಮ್ಮ ಸುಮ್ಮನೆ ಕೊರಳಿಗೆ ಬೀಳೋದಿಲ್ಲ. ಇದಕ್ಕೆ ಒಂದು ಅರ್ಥ ಸಿಗುವ ತನಕ ತೆಗೆಯಲ್ಲ ಎಂದಿದ್ದಾಳೆ.

punyavathi-kannada-serial

ಪದ್ಮಿನಿಯನ್ನು ಉಳಿಸಿಕೊಳ್ಳುವ ಸವಾಲು

ಪದ್ಮಿನಿಯನ್ನು ಒಪ್ಪಿಸುವ ಪ್ರಯತ್ನವನ್ನು ನಂದನ್ ಮಾಡಿದ್ದಾನೆ. ತಾಳಿಯೇ ಮುಖ್ಯ, ದೇವರ ಆಶೀರ್ವಾದ ಅಂತೆಲ್ಲ ಅಂದುಕೊಂಡು ಪದ್ಮಿನಿ ತವರು ಸೇರಿದ್ದಳು. ಬಳಿಕ ಪ್ರೀತಿಯೇ ಮುಖ್ಯ ಎಂದು ಅರ್ಥವಾದ ಮೇಲೆ ಗಂಡನ ಮನೆಗೆ ವಾಪಾಸ್ ಬಂದಿದ್ದಾಳೆ. ಆದರೆ, ಆ ತಾಳಿ ತನಗೆ ಬೇಕು ಎಂದೇ ಹಠ ತೊಟ್ಟಿದ್ದಾಳೆ. ಆ ಕಡೆ ಪೂರ್ವಿ‌ ಕೊಡ್ತಿಲ್ಲ. ಈ ಕಡೆ ಪದ್ಮಿನಿ ಬಿಡ್ತಿಲ್ಲ.

ಅಮ್ಮಾಜಿಯಿಂದ ಪೂರ್ವಿಯ ಜೀವನ ಬದಲು

ಅಮ್ಮಾಜಿಗೆ ಸತ್ಯಾಂಶ ಗೊತ್ತಾಗಿದೆ. ನಂದನ್ ತಾಳಿ ಕಟ್ಟಿರುವುದು ಪದ್ಮಿನಿಗೆ ಅಲ್ಲ ಪೂರ್ವಿಗೆ ಅನ್ನೋದು. ಅದಕ್ಕೆಂದೇ ಪೂರ್ವಿಯನ್ನು ಕಾವಲಾಗಿ ಕಾಯುತ್ತಿದ್ದಾಳೆ. ಬೇರೆ ಯಾರಿಗೂ ವಿಚಾರ ತಿಳಿಸದೆ ತಾನೇ ಪ್ಲ್ಯಾನ್ ಮಾಡುತ್ತಿದ್ದಾರೆ. ಪೂರ್ವಿ ನೋಡಲು ಹುಡುಗ ಬಂದಾಗಲೂ ಅಮ್ಮಾಜಿ ಅದಕ್ಕೆ ಆಸ್ಪದ ನೀಡಿಲ್ಲ. ಇದು ಮನೆಯವರಿಗೆಲ್ಲಾ ಅನುಮಾನ ಮೂಡಿಸಿದೆ. ನಂದನ್ ಗಂತು ಈ ಮದುವೆ ನಿಂತು ಹೋಗಿದ್ದಕ್ಕೆ ಹೆಚ್ಚಿನ ಕೋಪವೇ ಬಂದಿದೆ. ಪದ್ಮಿನಿ ಬಿಟ್ಟು ಪೂರ್ವಿ ಮೇಲೆ ನಂದನ್‌ಗೆ ಭಾವನೆ ಬರುವುದಕ್ಕೆ ಸಾಧ್ಯವೆ ಇಲ್ಲ. ತಾಳಿನಾ..? ಪ್ರೀತಿನಾ ಎಂಬ ಆಯ್ಕೆ ಇಟ್ಟರೆ ನಂದನ್ ಆಯ್ದುಕೊಳ್ಳೋದು ಪ್ರೀತಿ ಮಾತ್ರ. ಇದಕ್ಕೆ ಪದ್ಮಿನಿ ಒಪ್ಪಬೇಕು ಅಷ್ಟೇ.

More from Filmibeat

English summary
Punyavathi serial Written Update on August 31st episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X