Punyavathi Serial: ನಂದನ್ -ಪದ್ಮಿಸಿ ಸಂಸಾರ ಉಳಿಸಲು ಬಂದ ಗೊಂಬೆ -ಚಿನ್ನು.. ಮುಂದೇನು?

By ಎಸ್ ಸುಮಂತ್

ಅಮ್ಮಾಜಿ ಮನೆಯಲ್ಲಿ ಪ್ರೀತಿ ಮದುವೆ - ತಾಳಿ ಮದುವೆಯ ನಡುವೆ ಯುದ್ಧ ಶುರುವಾಗಿದೆ. ತಾಳಿ ಕಟ್ಟಿದವಳು ನನ್ನ ಗಂಡನನ್ನು ಬಿಟ್ಟುಕೊಡಲ್ಲ ಅಂತಿದ್ರೆ, ಪ್ರೀತಿ ಮಾಡುತ್ತಿರುವವಳು ಆ ತಾಳಿಯನ್ನೇ ಮತ್ತೆ ಕಟ್ಟಿಸಿಕೊಳ್ಳುತ್ತೀನಿ ಅಂತಿದ್ದಾಳೆ. ಇದರ ನಡುವೆ ಸಿಲುಕಿರುವ ನಂದನ್‌ಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.

ಪ್ರೀತಿ ಮಾಡಿದ ಹುಡುಗಿಯ ವಿಚಾರದಲ್ಲಿ ನಂದನ್ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಪೂರ್ವಿಗೆ ಅದಾಗಲೇ ಸ್ಪಷ್ಟ ಪಡಿಸಿ ಆಗಿದೆ. ತಾಳಿ ಕುತ್ತಿಗೆಯಲ್ಲೇ ಇದ್ದರೂ, ಯಾವುದೇ ಭಾವನೆ ಬದಲಾಗಲ್ಲ ಎಂಬುದನ್ನು ತೋರಿಸಿದ್ದಾಗಿದೆ. ‌ಆದರೂ, ಪೂರ್ವಿ ಅದನ್ನು ತಳ್ಳಿ ಹಾಕಿ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾಳೆ. ಈಗ ನಂದನ್ ಜೊತೆಗೆ ಗೊಂಬೆ ಮತ್ತೆ ಚಿನ್ನು ಜೊತೆಯಾಗಿ ನಿಂತಿದ್ದಾರೆ.

punyavathi-kannada-serial

ಗೊಂಬೆ ಚಿನ್ನು ನೋಡಿ ಫ್ಯಾನ್ಸ್ ಖುಷಿ

'ಪುಣ್ಯವತಿ' ಧಾರಾವಾಹಿಯಲ್ಲಿ ತಾಳಿ ಸಂಬಂಧ ಮತ್ತು ಪ್ರೀತಿ ಸಂಬಂಧ ಕಥೆ ನಡೆಯುತ್ತಾ ಇದೆ. ಪ್ರೀತಿ ಉಳಿಸಿಕೊಳ್ಳುವುದೇ ನಂದನ್‌ಗೆ ಸಿಕ್ಕಾಪಟ್ಟೆ ಸವಾಲಾಗಿದೆ. ನಂದನ್ ಮತ್ತು ಪದ್ಮಿನಿಗೆ ಮನೆಯಲ್ಲಿ ಸಹಾಯ ಮಾಡುವುದು ಯಾರು ಇಲ್ಲ. ಈಗ ಗೊಂಬೆ ಮತ್ತು ಚಿನ್ನು ಎಂಟ್ರಿ ಕೊಟ್ಟಿದ್ದಾರೆ. ನಂದನ್ ಸಮಸ್ಯೆಗೊಂದು ಪರಿಹಾರ ಹುಡುಕಲು ಬಂದಿದ್ದಾರೆ. ನಂದನ್ ಮತ್ತು ಗೊಂಬೆ ಮೊದಲಿನಿಂದಾನೂ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಹೀಗಾಗಿ ಫ್ರೆಂಡ್ ಕಷ್ಟ ಕೇಳೋಕೆ ಬಂದಿದ್ದಾಳೆ. ಜೊತೆಗೆ ಚಿನ್ನುನು ಕರೆದುಕೊಂಡು ಬಂದಿದ್ದಾಳೆ.

ಗೊಂಬೆ ಬದುಕಲ್ಲೂ ನಡೆದಿತ್ತು ಆ ಘಟನೆ

ಕಲರ್ಸ್ ಕನ್ನಡದಲ್ಲಿ ಈ ಮೊದಲು 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಮತ್ತು ಚಿನ್ನು ಇಬ್ಬರು ಬೆಸ್ಟ್ ಸಿಸ್ಟರ್ಸ್ ಆಗಿದ್ರು. ಅದರ ಜೊತೆಗೆ ಚಿನ್ನು ಕೂಡ ತನ್ನ ಗಂಡನ ಹೆಂಡತಿಯೇ ಆಗಿದ್ದಳು. ಆದರೆ, ಇಬ್ಬರ ನಡುವಿನ ಬಾಂಧವ್ಯ ಹೇಗಿತ್ತು ಅಂದ್ರೆ ಅಕ್ಕನ ಸಂಸಾರಕ್ಕಾಗಿ ಚಿನ್ನು ತನ್ನ ಸುಖವನ್ನೇ ತ್ಯಾಗ ಮಾಡಿದ್ದಳು. ಆದರೆ, ಈಗ ನಂದನ್ ಜೀವನದಲ್ಲೂ ಇಬ್ಬರೇ ಬಂದಿದ್ದಾರೆ. ತ್ಯಾಗ ಮಾಡೋದಕ್ಕೆ ಪೂರ್ವಿ ರೆಡಿಯಾಗಿಲ್ಲ.

punyavathi-kannada-serial

ಸಮಸ್ಯೆ ಹೇಳಿಕೊಂಡ ನಂದನ್

ಚಿನ್ನು ಮತ್ತು ಗೊಂಬೆಯನ್ನ ದೇವಸ್ಥಾನದಲ್ಲಿ ಭೇಟಿ ಮಾಡಿದ್ದಾನೆ. ತನ್ನ ಜೀವನದಲ್ಲಿ ಆದಂತ ಸಮಸ್ಯೆಗಳನ್ನು ಹೇಳಿಕೊಂಡಿದ್ದಾನೆ. ಪದ್ಮಿನಿಯನ್ನು ಲವ್ ಮಾಡಿದ್ದೆ, ಮದುವೆ ಸಮಯದಲ್ಲಿ ಪೂರ್ವಿಗೆ ತಾಳಿ ಕಟ್ಟಿದೆ. ಈಗ ಪೂರ್ವಿ ಮನೆಯಲ್ಲಿಯೇ ಇದ್ದಾಳೆ. ಅಮ್ಮಾಜಿ ನೋಡಿದ್ರೆ ಪೂರ್ವಿಗೆ ಗಂಡು ಬಂದಾಗಲೂ ಒಪ್ಪುತ್ತಿಲ್ಲ ಅಂತ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಅಮ್ಮಾಜಿಯ ನಡವಳಿಕೆಯಿಂದ ನಂದನ್‌ಗೆ ಗೊಂದಲ ಶುರುವಾಗಿದೆ. ಈ ಕಡೆ ಪೂರ್ವಿ ಕೂಡ ಬೇರೆ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದಾಳೆ.

ಅಮ್ಮಾಜಿಯನ್ನು ಬದಲಿಸುತ್ತಾರಾ..?

ನಂದನ್ ಕಥೆ ಕೇಳಿದ ಗೊಂಬೆ ಮತ್ತು ಚಿನ್ನು ಇದಕ್ಕೊಂದು ಪರಿಹಾರ ಹುಡುಕುವುದು ಅನಿವಾರ್ಯತೆಯಾಗಿದೆ. ನಂದನ್‌ಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಪ್ರಾಮೀಸ್ ಮಾಡಿದ್ದಾರೆ. ದೇವಸ್ಥಾನದಲ್ಲಿಯೇ ಅಮ್ಮಾಜಿಗಾಗಿ ಕಾಯುತ್ತಾ ಕೂತಿದ್ದಾರೆ. ಅದೇ ಸಮಯಕ್ಕೆ ಅಮ್ಮಾಜಿ ದೇವಸ್ಥಾನಕ್ಕೆ ಬಂದಿದ್ದಾರೆ. ಅಮ್ಮಾಜಿಯಿಂದ ಎಲ್ಲಾ ಸತ್ಯ ತಿಳಿಯುವ ಪ್ರಯತ್ನ ಮಾಡಲಿದ್ದಾರೆ. ಆದರೆ, ಅಮ್ಮಾಜಿ ಮನೆಯವರ ಬಳಿಯೂ ಯಾರಿಗೂ ಹೇಳದ ವಿಚಾರವನ್ನು ಗೊಂಬೆಗೂ ಚಿನ್ನುಗೂ ಹೇಳುವುದು ಕಷ್ಟ ಸಾಧ್ಯ. ಆದರೆ, ಅಮ್ಮಾಜಿ ತಾಳಿಗೆ ಬೆಲೆ ಕೊಡುತ್ತಾರೆ. ಅದಕ್ಕೆಂದೇ ಪೂರ್ವಿಯನ್ನು ಪ್ರೀತಿ ಮಾಡುತ್ತಾರೆ. ಪದ್ಮಿನಿಯನ್ನು ಮನೆಯಿಂದ ಹೊರಗೆ ಕಳುಹಿಸುವುದಕ್ಕೆ ನೋಡುತ್ತಿದ್ದಾಳೆ. ಹೇಗಾದರೂ ಮಾಡಿ, ದೇವರು ಆಶೀರ್ವಾದ ಮಾಡಿದ ಮದುವೆಯನ್ನೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಅಮ್ಮಾಜಿ.

More from Filmibeat

English summary
Punyavathi Serial Written Update on September 1st episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X