Punyavathi Serial: 'ಪುಣ್ಯವತಿ' ಧಾರಾವಾಹಿಯಲ್ಲಿ ಕುವೆಂಪು ಪ್ರೇಮ ಕಾವ್ಯ.. ವೀಕ್ಷಕರು ದಿಲ್ ಖುಷ್

By ಎಸ್ ಸುಮಂತ್

ಕುವೆಂಪು ಅವರ ಬರಹ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಕುವೆಂಪು ಅವರಿಗಿಂತ ಸುಂದರವಾಗಿ ನಿಸರ್ಗದ ಸೌಂದರ್ಯವನ್ನು ವರ್ಣಿಸಲು ಬೇರೆ ಯಾರಿಂದಲಾದರೂ ಸಾಧ್ಯವಿದೆಯಾ..? ಅವರ ಪುಸ್ತಕ ಪ್ರೇಮಿಗಳೇ ಹೆಚ್ಚಿನವರಿದ್ದಾರೆ. ಅವರ ಪ್ರೇಮ ಕವನಗಳಲ್ಲಿ ಪ್ರೇಮಿಗಳ ಮನಮುಟ್ಟುವಂತ ಸಾಲುಗಳಿವೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ತೆರೆದರೆ ಸಾಕು ಕುವೆಂಪು ಅವರ 'ನಾ ನಿನಗೆ, ನೀ ಎನಗೆ ಜೇನಾಗುವ. ರಸದೈವ ಗಂಗೆಯಲಿ ಮೀನಾಗುವ' ಎಂಬ ಸಾಲುಗಳು.

ಇದೀಗ 'ಪುಣ್ಯವತಿ' ಧಾರಾವಾಹಿಯಲ್ಲೂ ಈ ಸಾಲುಗಳು ರಾರಾಜಿಸುತ್ತಿವೆ. ನಂದನ್, ಪದ್ಮಿನಿಗೆ ಈ ಸಾಲುಗಳನ್ನು ಹೇಳಿದ್ದಾನೆ. ತನ್ನ ಪ್ರೀತಿ ಪಾತ್ರಳಾದ ಪದ್ಮಿನಿಗೆ ಕುವೆಂಪು ಅವರ ಪ್ರೇಮದ ಕವನಗಳ ಸಾಲನ್ನು ಹೇಳಿದ್ದಾನೆ.

Punyavathi serial Written Update on September 6th episode

ದೇವಸ್ಥಾನದಲ್ಲಿ ಪ್ರೇಮಿಗಳು

ಪದ್ಮಿನಿ ಮತ್ತು ನಂದನ್ ಒಟ್ಟಿಗೆ ಇರುವುದಕ್ಕೆ ಅಮ್ಮಾಜಿ ಬಿಡುತ್ತಾ ಇರಲಿಲ್ಲ. ಆದರೆ, ಈಗ ಅಮ್ಮಾಜಿ ಕೂಡ ಬದಲಾಗಿದ್ದಾರೆ. ಪದ್ಮಿನಿಗೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಮನಸ್ಸಿಂದ ಮದುವೆಯಾಗಿರುವ ಜೋಡಿಯನ್ನು ಒಟ್ಟು ಮಾಡಲು ಹೊರಟಿದ್ದಾರೆ. ಅದೇ ಖುಷಿಯಲ್ಲಿ ಪದ್ಮಿನಿ ಹಾಗೂ ನಂದನ್‌ನನ್ನು ದೇವಸ್ಥಾನಕ್ಕೆ ಕಳುಹಿಸಿದ್ದಾರೆ. ದೇವಸ್ಥಾನದಲ್ಲಿ ಗಂಡ ಹೆಂಡತಿ ಸೇರಿ ಪೂಜೆ ಮುಗಿಸಿ, ನಿರಾಳತೆಯ ಮನೋಭಾವದಿಂದ ಬಂದಿದ್ದಾರೆ. ಇದೆ ವೇಳೆ ನಂದನ್, ಪದ್ಮಿನಿ ಕಂಡು ಕುವೆಂಪು ಅವರ ಸಾಲುಗಳನ್ನು ಹೇಳಿದ್ದಾನೆ.

ಅಮ್ಮಾಜಿಯ ನಿರ್ಧಾರಕ್ಕೆ ನಂದನ್ - ಪದ್ಮಿನಿ ಸಂತಸ

ಮನೆಯಲ್ಲಿ ಅಮ್ಮಾಜಿಯದ್ದೇ ದೊಡ್ಡ ಸಮಸ್ಯೆಯಾಗಿತ್ತು. ಇಷ್ಟು ದಿನ ನಂದನ್ ಮತ್ತು ಪದ್ಮಿನಿ ಮದುವೆ ವಿಚಾರ ನಮ್ಮ ಮೂವರಿಗೆ ಮಾತ್ರ ಗೊತ್ತಿದೆ ಎಂದೇ ಭಾವಿಸಿದ್ದರು. ಆದ್ರೆ ಅಮ್ಮಾಜಿಗೂ ವಿಚಾರ ತಿಳಿದಿತ್ತು. ಹೀಗಾಗಿಯೇ ನಂದನ್ ಮತ್ತು ಪದ್ಮಿನಿಯನ್ನು ದೂರ ಮಾಡಿ, ಪೂರ್ವಿಯನ್ನು ಹತ್ತಿರ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ, ಈಗ ಅಮ್ಮಾಜಿಯೇ ತನ್ನ ನಿರ್ಧಾರವನ್ನು ಬದಲಾಯಿಸಿದ್ದಾರೆ. ಅಮ್ಮಾಜಿಯೇ ಪೂರ್ವಿಯ ಮದುವೆ ಮಾಡಲು ಓಕೆ ಎಂದಿದ್ದಾರೆ. ಹೀಗಾಗಿ ಪದ್ಮಿನಿ ಮತ್ತು ನಂದನ್ ತುಂಬಾ ಖುಷಿಯಲ್ಲಿದ್ದಾರೆ.

Punyavathi serial Written Update on September 6th episode

ಗೊಂಬೆ -ಚಿನ್ನು ಮಾತು ಕೇಳಿದ ಅಮ್ಮಾಜಿ

ಮದುವೆ ಅಂದ್ರೆ ತಾಳಿಯನ್ನೇ ಕಟ್ಟಬೇಕು. ದೇವರ ಅನುಗ್ರಹವಿಲ್ಲದೆ ಈ ಕಾರ್ಯ ನಡೆದಿರುವುದಕ್ಕೆ ಸಾಧ್ಯವಿಲ್ಲ ಎಂದೇ ಅಮ್ಮಾಜಿ ನಂಬಿದ್ದರು. ಅದಕ್ಕಾಗಿಯೇ ಪೂರ್ವಿಯ ಮೇಲೆ ಅತಿಯಾದ ಸಲುಗೆ ತೋರಿದ್ದರು. ಇದು ಮನೆಯವರಿಗೆಲ್ಲಾ ಇರಿಸು ಮುರಿಸು ಆಗುತ್ತಿತ್ತು. ಇದೀಗ ಗೊಂಬೆ ಚಿನ್ನು ಬಂದ ಮೇಲೆ ಮನಸ್ಸಿನ ಪ್ರೀತಿಗೂ, ತಾಳಿ ಮೇಲಿರುವ ಬೆಲೆಗೂ ಸಾಕಷ್ಟು ವ್ಯತ್ಯಾಸವಿದೆ ಎಂದೇ ಹೇಳಿದ್ದರು. ಆಗ ಅಮ್ಮಾಜಿಯೂ ಅದನ್ನು ನಂಬಿದರು, ಸರಿ ಎಂದು ಒಪ್ಪಿಕೊಂಡು ಈಗ ನಂದನ್ ಮತ್ತು ಪೂರ್ವಿಯನ್ನು ಒಂದು ಮಾಡಲು ಹೊರಟಿದ್ದಾರೆ.

ಅಮ್ಮಾಜಿ ಬಳಿ ಸತ್ಯ ಹೇಳಲು ಬಂದ ಪೂರ್ವಿ

ಚಿನ್ನು ಮತ್ತು ಗೊಂಬೆ ಮಾತು ಕೇಳಿ ಅಮ್ಮಾಜಿ ನಿರ್ಧಾರ ಬದಲಿಸಿದ್ದಾರೆ. ಪೂರ್ವಿಗೆ ಹುಡುಗನನ್ನು ಹುಡುಕಲು ಸಿದ್ಧರಾಗಿದ್ದಾರೆ. ಇದನ್ನು ಕಂಡ ಪೂರ್ವಿ ಗಾಬರಿಯಾಗಿದ್ದಾಳೆ‌. ಏನು ಮಾಡಬೇಕೆಂದು ತಿಳಿಯದೆ ಅಮ್ಮಾಜಿ ಬಳಿ ಸತ್ಯ ಹೇಳಲು ಹೊರಟಿದ್ದಾಳೆ. "ನನಗೆ ಅದಾಗಲೇ ಮದುವೆಯಾಗಿದೆ. ನನ್ನ ಕುತ್ತಿಗೆಯಲ್ಲಿ ತಾಳಿ ಇದೆ" ಎಂದಿದ್ದಾಳೆ. ಇದಕ್ಕೆ ಅಮ್ಮಾಜಿ ಏನು ಗೊತ್ತಿಲ್ಲದವರಂತೆ, ಆಶ್ಚರ್ಯವಾದಂತೆ ನಡೆದುಕೊಂಡಿದ್ದಾರೆ. ಆಗ ನನಗೆ ತಾಳಿ ಕಟ್ಟಿದ್ದು ನಂದನ್ ಎಂದಿದ್ದಾಳೆ. ಈಗ ಅಮ್ಮಾಜಿ ಪೂರ್ವಿಯ ಮನಸ್ಸನ್ನು ಬದಲಿಸಬೇಕಿದೆ. ಮೊಮ್ಮಗನ ಸಂಸಾರವನ್ನು ಉಳಿಸಬೇಕಿದೆ.

More from Filmibeat

English summary
Punyavathi serial Written Update on September 6th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X