Punyavathi: ಪದ್ಮಿನಿ ಕಂಡರೆ ಕೆಂಡ ಕಾರುತ್ತಿರುವ ಪೂರ್ವಿ: ಮುಂದೇನು ಮಾಡ್ತಾರೆ ಚಿನ್ನು, ಗೊಂಬೆ?

By Poorva

ಪುಣ್ಯವತಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಚಿನ್ನು ಹಾಗೂ ಗೊಂಬೆಗೆ ಪೂರ್ವಿ ವಿಷ ಕುಡಿದಂತೆ ನಾಟಕ ಆಡುತ್ತಿದ್ದಾಳೆ ಎಂದು ಅವರಿಬ್ಬರಿಗೂ ತಿಳಿದಿದೆ. ಆದರೆ ಅದನ್ನು ಯಾರ ಮುಂದೆಯೂ ಹೇಳದೆ ಗೌಪ್ಯವಾಗಿ ಇಟ್ಟಿದ್ದಾರೆ.

ಇನ್ನೂ ಪೂರ್ವಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಚಿನ್ನು ಹಾಗೂ ಗೊಂಬೆ ಬಹಳ ಪೂರ್ವಿಯ ಸೇವೆ ಮಾಡುವ ಹಾಗೆ ಆಕೆಯನ್ನು ಕಾರಿನಿಂದ ರೂಮ್ ತನಕ ಕರೆದುಕೊಂಡು ಬಂದು ಹಾಸಿಗೆ ಮೇಲೆ ದೂಡುತ್ತಾರೆ. ಇದನ್ನು ನೋಡಿದ ಪೂರ್ವಿಗೆ ಕೊಂಚ ಶಾಕ್ ಆಗುತ್ತದೆ. ಪೂರ್ವಿ ಎದ್ದು ಕುಳಿತು ಚಿನ್ನು ಗೊಂಬೆಯನ್ನು ಕೆಕ್ಕರಿಸಿ ನೋಡುತ್ತಾ ಇರುತ್ತಾಳೆ. ಅವರನ್ನು ನೋಡಿದ ಪೂರ್ವಿಗೆ ಗೊಂಬೆ ಇದ್ದ ನಿಜ ವಿಚಾರವನ್ನು ಪೂರ್ವಿ ಬಳಿ ಹೇಳಿ ಮುಖಕ್ಕೆ ಮಂಗಳಾರತಿ ಎತ್ತುತ್ತಾಳೆ.

punyavathi-serial

ಈ ತಾಳಿ ನನ್ನ ಕುತ್ತಿಗೆಯಲ್ಲಿ ಇರುವವರೆಗೂ ನಾನು ಮಾತ್ರ ಈ ಮನೆ ಬಿಟ್ಟು ಹೋಗುವುದು ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಗೊಂಬೆ ಪೂರ್ವಿಗೆ ಸವಾಲು ಹಾಕುತ್ತಾಳೆ. ಇನ್ನೂ ಪೂರ್ವಿ ಬಳಿ ಮಾತನಾಡಿ ಹೊರ ಬರಬೇಕು ಎನ್ನುವಷ್ಟರಲ್ಲಿ ಪೂರ್ವಿ ವರ್ತನೆ ಕಂಡು ಬಹಳ ಬೇಸರ ಮಾಡಿಕೊಂಡಿದ್ದಾರೆ.

ನಂದನ್ ಪಡೆದುಕೊಳ್ಳುವ ಹಠದಲ್ಲಿ ತನ್ನತನ ಬಿಟ್ಟ ಪೂರ್ವಿ

ಪೂರ್ವಿಗೆ ನಂದನ್ ಬೇಕು ಎನ್ನುವ ಹಠ ಹೆಚ್ಚಾದ ಹಾಗೆ ಎನಿಸುತ್ತಿದೆ ಎಂದು ಮೆತ್ತಗೆ ಹೇಳುತ್ತ ಇರುತ್ತಾರೆ ಚಿನ್ನು, ಗೊಂಬೆ. ಇನ್ನೂ ಪೂರ್ವಿ ಮಾತ್ರ ನಂದನ್ ನನಗೆ ಬೇಕು. ಆತನ ಜೊತೆ ನಾನು ಬಾಳಬೇಕು ಎಂದೆಲ್ಲ ಹೇಳುತ್ತ ಇರುತ್ತಾಳೆ.

punyavathi-serial

ಮನೆ ಮಂದಿಗೆ ಹಬ್ಬದ ಅಡುಗೆ ಮಾಡಿದ ಪದ್ಮಿನಿ

ಇನ್ನೂ ಪದ್ಮಿನಿ ಮನೆಯವರಿಗೆ ಹಬ್ಬದ ಅಡುಗೆಯನ್ನು ಮಾಡುತ್ತಾ ಇರುತ್ತಾಳೆ. ಅದನ್ನು ಪೂರ್ವಿ ಕೆಡಿಸಲು ನೋಡುತ್ತಿರುತ್ತಾಳೆ. ಪೂರ್ವಿ ಮಾತನಾಡುತ್ತಾ ಅಕ್ಕ ಮಾಡಿದ ಪಾಯಸಕ್ಕೆ ಉಪ್ಪು ಸುರಿಯುತ್ತಾಳೆ. ಪದ್ಮಿನಿ ಮಾಡಿದ ಪಾಯಸವನ್ನು ಕೆಡಿಸಿ ಬಿಡುತ್ತಾಳೆ. ಇನ್ನೂ ಮಿಕ್ಕ ಅಡುಗೆಯನ್ನು ಪದ್ಮಿನಿ ಪರ್ಫೆಕ್ಟ್ ಆಗಿ ಮಾಡುತ್ತಾಳೆ.

ಮನೆಮಂದಿ ಎಲ್ಲಾ ಊಟಕ್ಕೆ ಕುಳಿತುಕೊಂಡು ಇರುತ್ತಾರೆ. ಪದ್ಮಿನಿ ಮಾತ್ರ ಬಹಳ ಖುಷಿಯಲ್ಲಿ ಮನೆಮಂದಿಗೆಲ್ಲಾ ಅಡುಗೆ ಬಡಿಸುತ್ತಾಳೆ. ಪದ್ಮಿನಿ ಮಾತಿಗೆ ಎಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ಆಕೆ ಮಾಡಿದ ಅಡುಗೆ ಊಟ ಮಾಡಿ ಇನ್ನೂ ಖುಷಿ ಆಗಿದ್ದಾರೆ.

ಪದ್ಮಿನಿಯನ್ನು ಹೊಗಳಿದ ಮನೆ ಮಂದಿ

ಪದ್ಮಿನಿಯನ್ನು ಎಲ್ಲರೂ ಹೊಗಳುತ್ತಾ ಇದ್ದಾರೆ ಪೂರ್ವಿ ಮಾತ್ರ ಅಕ್ಕ ಮಾಡಿದ ಪಾಯಸ ತಿನ್ನಿ ಇನ್ನೂ ಖುಷಿಯಲ್ಲಿ ತೇಲಾಡುತ್ತೀರ ಎಂದೆಲ್ಲ ಹೇಳುತ್ತ ಇರುವಾಗ ಚಿನ್ನು ಗೊಂಬೆಗೆ ಕೊಂಚ ಕಸಿವಿಸಿ ಎನಿಸುತ್ತದೆ. ಇನ್ನೂ ಪದ್ಮಿನಿ ಎಲ್ಲರಿಗೂ ಪಾಯಸ ಬಡಿಸುತ್ತಾಳೆ. ಪಾಯಸ ಸವಿದ ಮನೆ ಮಂದಿಯ ಮುಖ ಭಾವ ನೋಡಿದಾಗ ಪದ್ಮಿನಿಗೆ ಏನೋ ತಪ್ಪಾಗಿದೆ ಎನಿಸಲು ಶುರುವಾಗುತ್ತದೆ.

More from Filmibeat

English summary
Kannada serial Punyavathi written updated on 13th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X