ನನ್ನ ತಂಗಿ ಎದುರೇ ನನ್ನ ಜೀನ್ಸ್ ಒಳಗೆ ಕೈ ಹಾಕಿದ ; ಕರಾಳ ಅನುಭವ ನೆನೆದು ಬಿಕ್ಕಿದ ಚೆಲುವೆ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆ ಆದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ ಕೂಡ ಇವೆ.
ಕೇವಲ ಚಿತ್ರರಂಗ ಮಾತ್ರ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾನಸಿಕ ನೆಮ್ಮದಿ ಹಾಳು ಮಾಡಲು ಈ ಕಾ*ಮಾಂಧರು ಇದ್ದೇ ಇರುತ್ತಾರೆ. ಆದರೆ ಚಿತ್ರರಂಗದಲ್ಲಿ ಈ ಸಂಖ್ಯೆ ತುಸು ಹೆಚ್ಚೇ ಇದೆ. ಇದಕ್ಕೆ ಪುರಾವೆ ಎಂಬಂತೆ ಹಲವರು ಇಲ್ಲಿಯವರೆಗೆ ತಮ್ಮ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಚಿತ್ರರಂಗದಲ್ಲಿ ಹೇಗೆ ಹಲವರು ಮುಖವಾಡದ ಬದುಕು ಬದುಕುತ್ತಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಉದಾಹರಣೆಗೆ ಸಿಮ್ರಾನ್ ಖಾನ್.

ಹೌದು, ಸಿಮ್ರಾನ್ ಖಾನ್.. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಮುಸ್ಲಿಂ ಚೆಲುವೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಬಾಲ್ಯದಿಂದಲೇ ಬಣ್ಣದ ಕಡೆ ಆಕರ್ಷಿತರಾದ ಸಿಮ್ರಾನ್ ಖಾನ್ ರೀಲ್ಸ್ ಮಾಡುವ ಮೂಲಕ ಬೆಳಕಿಗೆ ಬಂದರು. ಲಕ್ಷಾಂತರ ಜನ ಫಾಲೋವರ್ಸ್‌ಗಳನ್ನು ಸಂಪಾದಿಸಿದರು.
ಇವರ ಇದೇ ಜನಪ್ರಿಯತೆ ಇವರನ್ನು MTVಯ ಪ್ರಖ್ಯಾತ ಕಾರ್ಯಕ್ರಮ ''ಸ್ಪಿಟ್ಸ್‌ವಿಲ್ಲಾ'' ಆರನೇ ಸೀಸನ್‌ವರೆಗೆ ಕರೆ ತಂದಿತು. ಈ ಕಾರ್ಯಕ್ರಮದಲ್ಲಿ ತಮ್ಮ ಬೋಲ್ಡ್ ಲುಕ್ ಮತ್ತು ನೇರ ನುಡಿಯಿಂದ ಹೆಸರುವಾಸಿಯಾದರು ಸಿಮ್ರಾನ್ ಖಾನ್.
ಇಂಥಾ ಸಿಮ್ರಾನ್ ಖಾನ್ ಈಗ ತಮಗೆ ಹೆಸರು ನೀಡಿದ ''ಸ್ಪಿಟ್ಸ್‌ವಿಲ್ಲಾ'' ಕಾರ್ಯಕ್ರಮದಲ್ಲಿನ ಮಾಜಿ ಸ್ಫರ್ಧಿ ಮತ್ತು ವೃತ್ತಿಯಲ್ಲಿ ಕೊರಿಯೋಗ್ರಾಫರ್ ಆಗಿರುವ ಸಚಿನ್ ಶರ್ಮಾ ವಿರುದ್ದ ಲೈಂ*ಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
''ಭವ್ಯಾ ಸಿಂಗ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಿಮ್ರಾನ್ ಖಾನ್, ''ಸ್ಪಿಟ್ಸ್‌ವಿಲ್ಲಾ'' ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ತಾವು ಡ್ಯಾನ್ಸ್ ಕ್ಲಾಸ್‌ವೊಂದಕ್ಕೆ ಹೋಗುತ್ತಿದ್ದಾಗಿ ಹೇಳಿದ್ದಾರೆ.

ಆ ಡ್ಯಾನ್ಸ್ ಕ್ಲಾಸ್‌ನಲ್ಲಿ ಸಚಿನ್ ಶರ್ಮಾ ನನ್ನ ಸೀನಿಯರ್ ಆಗಿದ್ದರು ಎಂದು ಹೇಳಿರುವ ಸಿಮ್ರಾನ್ ಖಾನ್, ಅದೊಂದು ನಾವು ಇಬ್ಬರು ಒಂದು ಪಾರ್ಟಿಯಲ್ಲಿ ಮುಖಾಮುಖಿಯಾದೆವು, ಮಾತುಕಥೆಯ ನಂತರ ಪರಸ್ಪರ ಫೋನ್ ನಂಬರ್ ಹಂಚಿಕೊಂಡೆವು ಎಂದಿದ್ಧಾರೆ.
ಈ ಭೇಟಿಯ ನಂತರ ಸಚಿನ್, ನನ್ನನ್ನು ಭೇಟಿಯಾಗಲು ತಮ್ಮ ಮನೆಗೆ ಕರೆದರು ಎಂದು ಹೇಳಿರುವ ಸಿಮ್ರಾನ್, ನನ್ನ ಮೇಲೆ ನನ್ನ ತಂಗಿಯ ಜವಾಬ್ದಾರಿ ಇತ್ತು. ಆಕೆಗೆ ಕೇವಲ ನಾಲ್ಕು ವರ್ಷ ಆಗ. ಹೀಗಾಗಿ ಅವಳನ್ನು ನೋಡಿಕೊಳ್ಳಬೇಕಾದ ಕಾರಣ ನಾನು ಬರಲು ಸಾಧ್ಯ ಇಲ್ಲ ಎಂದು ಹೇಳಿದೆ ಎಂದಿದ್ದಾರೆ.
ನನ್ನ ಈ ಮಾತು ಕೇಳದ ಸಚಿನ್ ತಂಗಿಯನ್ನೂ ಜೊತೆಯಲ್ಲೇ ಕರೆದುಕೊಂಡು ಬಾ ಎಂದು ಒತ್ತಾಯ ಮಾಡಿದರು ಎಂದು ಹೇಳಿರುವ ಸಿಮ್ರಾನ್, ಅವರ ಒತ್ತಾಯಕ್ಕೆ ಮಣಿದು ನಾನು ನನ್ನ ತಂಗಿಯ ಜೊತೆ ಅವರ ಮನೆಗೆ ಹೋದೆ ಎಂದು ಹೇಳಿದ್ದಾರೆ.
ಅಲ್ಲಿ ಹೋದ ನಂತರ ಸಚಿನ್ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡು, ತಪ್ಪು ರೀತಿಯಲ್ಲಿ ಸ್ಪರ್ಶಿಸಿದರು ಎಂದು ನನ್ನ ರಿಪ್ಡ್ ಜೀನ್ಸ್ (ಹರಿದ ವಿನ್ಯಾಸದ ಜೀನ್ಸ್) ಒಳಗೆ ಸಚಿನ್ ಕೈ ಹಾಕಿದ್ದರು, ಅದು ಕೂಡ ನನ್ನ 4ವರ್ಷದ ಪುಠಾಣಿ ತಂಗಿಯ ಮುಂದೆಯೇ ಎಂದು ಬಿಕ್ಕಿದ್ದಾರೆ. ಇದಾದ ನಂತರ ತಮ್ಮ ಕೃತ್ಯಕ್ಕೆ ಸಚಿನ್ ನನ್ನ ಬಳಿ ಕ್ಷಮೆ ಕೇಳಿದ್ದರು ಎಂದಿದ್ದಾರೆ.
ಸಿಮ್ರಾನ್ ಖಾನ್ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಲವರು ನೃತ್ಯ ನಿರ್ದೇಶಕ ಸಚಿನ್ ಶರ್ಮಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲವೂ ಪಬ್ಲಿಸಿಟಿ ಗಿಮಿಕ್, ಪ್ರಚಾರಕ್ಕಾಗಿ ಸಿಮ್ರಾನ್ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications