'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ
Recommended Video

ಕನ್ನಡದ ಕೋಟ್ಯಧಿಪತಿಯಲ್ಲಿ ಈ ವಾರ ಕಿರುತೆರೆ ಕಲಾವಿದರ ಶೋ. ಟಿವಿ ನಿರೂಪಕ, ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಹಾಸನ್ ಮೊದಲ ಸ್ಪರ್ಧಿಯಾಗಿ ಭಾಗವಹಿಸಿ 1.60 ಲಕ್ಷ ಗೆದ್ದಕೊಂಡು ಹೋದರು. ಬಳಿಕ 'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಸುತ್ತಿನಲ್ಲಿ ಅತಿ ವೇಗವಾಗಿ ಮತ್ತು ಸರಿಯಾಗಿ ಉತ್ತರ ನೀಡಿದ 'ಪುಟ್ಟಗೌರಿ ಮದುವೆ' ಖ್ಯಾತಿಯ ಮಹೇಶ (ನಿಜವಾದ ಹೆಸರು ರಕ್ಷಿತ್) ಹಾಟ್ ಸೀಟ್ ನಲ್ಲಿ ಕೂತರು.
ತುಂಬಾ ಚೆನ್ನಾಗಿ ಆಟವಾಡುತ್ತಿದ್ದ ರಕ್ಷಿತ್ ದೊಡ್ಡ ಮೊತ್ತವನ್ನ ಗೆಲ್ಲುವ ಭರವಸೆ ಮೂಡಿಸಿದರು. ಅದರಂತೆ ಮೊದಲ ಜಗಲಿಕಟ್ಟೆ ದಾಟಿ, ಎರಡನೇ ಜಗಲಿಕಟ್ಟೆಯ ಸನಿಹ ಹೋದರು. ಆದ್ರೆ, ಯೋಚನೆ ಮಾಡದೇ ಮಾಡಿದ ತಪ್ಪಿಗೆ ಕೈಗೆ ಬಂದಿದ್ದೆಲ್ಲಾ ಕಳೆದುಕೊಳ್ಳಬೇಕಾಯಿತು.
ರಕ್ಷಿತ್ ಆಟವನ್ನ ನೋಡಿ ಎಲ್ಲರೂ ಅಂದುಕೊಂಡಿದ್ದೇ ಒಂದು, ಆದ್ರೆ ಅಲ್ಲಿ ಆಗಿದ್ದೇ ಇನ್ನೊಂದು. ದೊಡ್ಡ ಮೊತ್ತ ಗೆದ್ದುಕೊಂಡಿದ್ದ ರಕ್ಷಿತ್ ಕೊನೆಗೆ ಸಣ್ಣ ಮೊತ್ತದ ಜೊತೆಗೆ ಖಾಲಿ ಕೈಯಲ್ಲಿ ಹೋಗಬೇಕಾಯಿತು. ಅಷ್ಟಕ್ಕೂ, ರಕ್ಷಿತ್ ಕನ್ನಡದ 'ಕೋಟ್ಯಧಿಪತಿ'ಯಲ್ಲಿ ಗಳಿಸಿದ್ದೆಷ್ಟು.? ಮುಂದೆ ಓದಿ....

9 ಪ್ರಶ್ನೆಗೆ ಸರಿ ಉತ್ತರ ನೀಡಿದ್ದ ರಕ್ಷಿತ್
'ಕೋಟ್ಯಧಿಪತಿ'ಯ ಹಾಟ್ ಸೀಟ್ ನಲ್ಲಿ ಕೂತಿದ್ದ ರಕ್ಷಿತ್ 9 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ 1.60 ಲಕ್ಷ ಹಣ ಗೆದ್ದಿದ್ದರು. ಒಂದು ಲೈಫ್ ಲೈನ್ ಬಳಕೆ ಮಾಡಿಕೊಂಡಿದ್ದರು. ಇನ್ನು ಎರಡು ಲೈಫ್ ಲೈನ್ ಬಾಕಿ ಇತ್ತು.

ಹತ್ತನೇ ಪ್ರಶ್ನೆಯಲ್ಲಿ ಎಡವಿದ ರಕ್ಷಿತ್
9 ಪ್ರಶ್ನೆಗೆ ಸರಿ ಉತ್ತರ ನೀಡಿ ಸೇಫ್ ಆಗಿದ್ದ ರಕ್ಷಿತ್ ಹತ್ತನೇ ಪ್ರಶ್ನೆಯಲ್ಲಿ ಎಡವಿದರು. ಬುದ್ದಿವಂತಿಕೆಯಿಂದ ಆಟವಾಡುತ್ತಿದ್ದ ರಕ್ಷಿತ್ ದೊಡ್ಡ ಮೊತ್ತವನ್ನ ಕಳೆದುಕೊಂಡರು. ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದರೇ 3.20 ಲಕ್ಷ ಕೈನಲ್ಲಿ ಇರುತ್ತಿತ್ತು. ಹನ್ನೊಂದನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದರು ಈ 3.20 ಲಕ್ಷ ತೆಗೆದುಕೊಂಡು ಹೋಗಬಹುದಿತ್ತು. ಆದ್ರೆ, ರಕ್ಷಿತ್ ವಿಚಾರದಲ್ಲಿ ಇದು ಆಗಲಿಲ್ಲ. ಹತ್ತನೇ ಪ್ರಶ್ನೆ ತಪ್ಪಾಯಿತು.

10 ಸಾವಿರ ಪಡೆದು ನಿರಾಸೆಯಾದ ರಕ್ಷಿತ್
ಹತ್ತನೇ ಪ್ರಶ್ನೆಗೆ ಉತ್ತರ ಕೊಟ್ಟಿದ್ದರೇ ಎರಡನೆ ಜಗಲಿಕಟ್ಟೆಗೆ ರಕ್ಷಿತ್ ಬರುತ್ತಿದ್ದರು. ಆದ್ರೆ, ಅವರ ಉತ್ತರ ತಪ್ಪಾಯಿತು. ಎರಡನೇಯ ಲೈಫ್ ಲೈನ್ ನಲ್ಲಿ ಫೋನ್ ಎ ಫ್ರೆಂಡ್ ಬಳಸಿಕೊಂಡ್ರು. ನಟ ಧನಂಜಯ್ ಗೆ ಫೋನ್ ಮಾಡಿದ್ದರು. ಆದ್ರೆ, ಅವರಿಬ್ಬರ ನಡುವೆ ಸಂಭಾಷಣೆಯೇ ಸರಿಯಾಗಿ ಆಗಲಿಲ್ಲ. ಅಲ್ಲಿಗೆ ಅದು ನಷ್ಟವಾಯಿತು. ಇನ್ನೊಂದು ಲೈಫ್ ಲೈನ್ ಇತ್ತು. ಆದ್ರೆ, ಅದನ್ನ ಬಳಸಲು ರಕ್ಷಿತ್ ಮನಸ್ಸು ಮಾಡಲಿಲ್ಲ. ಊಹೆಯ ಮೇಲೆ ಆಯ್ಕೆಯನ್ನ ಲಾಕ್ ಮಾಡಿಯೇಬಿಟ್ಟರು. ಅದು ತಪ್ಪು ಉತ್ತರವಾಗಿದ್ದರಿಂದ ಹತ್ತು ಸಾವಿರ ರೂಪಾಯಿಗೆ ಜಾರಿದರು.

ಯಾವುದು ಆ ಪ್ರಶ್ನೆ.?
1949 ರಲ್ಲಿ ಜನರಲ್ ಸರ್ ಫ್ರಾನ್ಸಿಸ್ ಬುಚರ್ ರಿಂದ ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದವರು ಯಾರು.?
A ಕೆ ಎಸ್ ತಿಮ್ಮಯ್ಯ
B ಕೆ ಎಂ ಕಾರಿಯಪ್ಪ
C ಸ್ಯಾಮ್ ಮಾಣೆಕ್ ಷಾ
D ಎಸ್ ಎಂ ಶ್ರೀನಾಗೇಶ್

ಯಾವುದು ಸರಿಯಾಗಿತ್ತು
1949 ರಲ್ಲಿ ಜನರಲ್ ಸರ್ ಫ್ರಾನ್ಸಿಸ್ ಬುಚರ್ ರಿಂದ ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದವರು ಯಾರು.? ಎಂದು ಕೇಳಿದ ಪ್ರಶ್ನೆಗೆ ರಕ್ಷಿತ್ ಆಯ್ಕೆ C ಸ್ಯಾಮ್ ಮಾಣೆಕ್ ಷಾ ಎಂದಿದ್ದರು. ಆದ್ರೆ, ಸರಿಯಾದ ಉತ್ತರ ಆಯ್ಕೆ B ಕೆ ಎಂ ಕಾರಿಯಪ್ಪ ಆಗಿತ್ತು. ಅಲ್ಲಿ ದೊಡ್ಡ ನಿರಾಸೆ ಎದುರಿಸಿದರು.

ಎಡವಿದ್ದು ಎಲ್ಲಿ.?
ಅಂದ್ಹಾಗೆ, ಈ ಪ್ರಶ್ನೆಗೆ ರಕ್ಷಿತ್ ಅವರ ಮೊದಲ ಉತ್ತರ ಆಯ್ಕೆ B ಕೆ ಎಂ ಕಾರಿಯಪ್ಪ ಆಗಿತ್ತು. ಬಟ್, ಗೊಂದಲಕ್ಕೆ ಸಿಲುಕಿದ ರಕ್ಷಿತ್ ಮತ್ತೆ ಆಯ್ಕೆ ಬದಲಿಸಿದರು. ಇನ್ನೊಂದು ಲೈಫ್ ಲೈನ್ ಇತ್ತು. ಬಳಸಬಹುದಿತ್ತು. ಆದ್ರೆ, ಬಳಸಿಕೊಂಡಿಲ್ಲ. ಅಥವಾ 1.60 ಲಕ್ಷ ರೂಪಾಯಿಗೆ ಆಟವನ್ನ ಕ್ವಿಟ್ ಮಾಡಬಹುದಿತ್ತು. ಅದನ್ನು ಯೊಚಿಸಲಿಲ್ಲ. ಹೀಗಾಗಿ, ಆತುರದಿಂದ ತೆಗೆದುಕೊಂಡ ನಿರ್ಧಾರ ಕೋಟ್ಯಧಿಪತಿಯಲ್ಲಿ ಕೈಹಿಡಿಯಲಿಲ್ಲ.


Click it and Unblock the Notifications











