For Quick Alerts
  ALLOW NOTIFICATIONS  
  For Daily Alerts

  'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಬಂದಿದ್ದು ಹೇಗೆ?

  By Bharath Kumar
  |

  ಕಾಡಿನಲ್ಲಿ ಸಿಲುಕಿಹಾಕಿಕೊಂಡು, ಸಾಕಷ್ಟು ನೋವುಗಳನ್ನ ಎದುರಿಸಿದ್ದ 'ಪುಟ್ಟಗೌರಿ' ಕೊನೆಗೆ ನಗರಕ್ಕೆ ವಾಪಸ್ ಆಗಿದ್ದಾರೆ. ಈ ಮೂಲಕ ಕಾಡಿನಲ್ಲಿ ಸಾಹಸ ಮರೆದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ಗೌರಿಯ ಅರಣ್ಯವಾಸ ಅಂತ್ಯವಾಗಿದೆ.

  ಇನ್ನು ಕಾಡಿನಿಂದ ವಾಪಸ್ ಬಂದ ಗೌರಿ, ರೀ-ಎಂಟ್ರಿಯಲ್ಲೇ ರೌಡಿಗಳ ಹೊಡೆದೊಡಿಸಿದ್ದಾರೆ. ಹೀಗಾಗಿ, ಇನ್ಮುಂದೆ ನಾಡಿನಲ್ಲೂ ಗೌರಿಯ ಅಟ್ಟಹಾಸ ನಡೆಯಬಹುದು ಎಂಬ ಸೂಚನೆ ಸಿಕ್ಕಿದೆ.

  ಅಷ್ಟಕ್ಕೂ, ಪುಟ್ಟಗೌರಿ ಕಾಡಿನಿಂದ ನಾಡಿಗೆ ವಾಪಸ್ ಬಂದಿದ್ದು ಹೇಗೆ? ಅರಣ್ಯದಿಂದ ಗೌರಿ ವಾಪಸ್ ಆಗಲು ಸಹಾಯ ಮಾಡಿದ್ದು ಯಾರು? ಎಂದು ತಿಳಿಯಲು ಮುಂದೆ ಓದಿ......

  ಗೌರಿ ಈಸ್ ಬ್ಯಾಕ್

  ಗೌರಿ ಈಸ್ ಬ್ಯಾಕ್

  ದಟ್ಟಾರಣ್ಯದಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದ ಪುಟ್ಟಗೌರಿ ಯಾವಾಗ ವಾಪಸ್ ಆಗುತ್ತಾಳೆ ಎಂಬ ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿದ್ದರು. ಕೊನೆಗೂ ಗೌರಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು ನಾಡಿಗೆ ಗೌರಿ ವಾಪಸ್ ಆಗಿದ್ದಾಳೆ.

  ಪ್ರಾಣಾಪಾಯದಲ್ಲಿದ್ದ 'ಪುಟ್ಟಗೌರಿ' ಜೀವನದಲ್ಲಿ ಪವಾಡ: ಗೌರಿ ಮತ್ತೆ ಸೇಫ್.!

  ತಂದೆಯನ್ನ ಕಾಪಾಡಿದ ಗೌರಿ

  ತಂದೆಯನ್ನ ಕಾಪಾಡಿದ ಗೌರಿ

  ನಗರಕ್ಕೆ ಬರುತ್ತಿದ್ದಂತೆ ತಮ್ಮ ತಂದೆಯನ್ನ ಕೊಲ್ಲು ಬಂದಿದ್ದ ರೌಡಿಗಳನ್ನ ಗೌರಿ ಹೊಡೆದೊಡಿಸಿದ್ದಾಳೆ. ಸುಮಾರು ಆರೇಳು ದಾಂಡಿಗರ ಜೊತೆ ಗೌರಿ ಫೈಟ್ ಮಾಡಿ ತಂದೆಯನ್ನ ಕಾಪಾಡಿಕೊಂಡಿದ್ದಾಳೆ.

  ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

  ಗೌರಿಗೆ ಸಹಾಯ ಮಾಡಿದ್ದು ಯಾರು?

  ಗೌರಿಗೆ ಸಹಾಯ ಮಾಡಿದ್ದು ಯಾರು?

  ಅಂದ್ಹಾಗೆ, ಅಷ್ಟು ದೊಡ್ಡ ಕಾಡಿನಲ್ಲಿ ಗೌರಿ, ನಗರಕ್ಕೆ ಬರಲು ದಾರಿ ತೋರಿಸಿದ್ದು ಯಾರು? ಎಂಬ ಪ್ರಶ್ನೆಗೆ ಗೌರಿ ಉತ್ತರ ಕೊಟ್ಟಿದ್ದಾರೆ. ಕಾಡು ಜನರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಗೌರಿಯನ್ನೇ ಅವರೇ ನಗರಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.

  'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

  ಇನ್ಮುಂದೆ ಗೌರಿ ಕಷ್ಟ ಪರಿಹಾರ ಆಗ್ಬಹುದಾ?

  ಇನ್ಮುಂದೆ ಗೌರಿ ಕಷ್ಟ ಪರಿಹಾರ ಆಗ್ಬಹುದಾ?

  ಇನ್ನು ಕಾಡಿನಲ್ಲಿ ಸಾಕಷ್ಟು ಕಷ್ಟ, ಅನುಭವಿಸಿದ ಬಂದ ಗೌರಿ ಇನ್ನುಂದೆ ಈ ಕಷ್ಟದಿಂದ ಹೊರಬರ್ತಾರ ಎಂಬ ಕುತೂಹಲ ಕಾಡುತ್ತಿದೆ. ಮುಂದಿನ ದಿನದಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ತಿರುವುಗಳು ಹೇಗಿರುತ್ತೆ ಎಂಬುದನ್ನ ಕಾದುನೋಡೋಣ.

  English summary
  Puttagowri returned to the city from the jungle.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X